ಓಲಾ ನೌಕರನ ಆತ್ಮಹತ್ಯೆ; ಒಲಾ ಸಿಇಒ ವಿರುದ್ಧ ಎಫ್‌ಐಆರ್

ಬೆಂಗಳೂರು ನಗರ ಪೊಲೀಸರು ಸೋಮವಾರ ಓಲಾ ಸಂಸ್ಥೆಯ ಸಿಇಒ ಭವೀಶ್‌ ಅಗರ್ ವಾಲ್ಗ್ ಮತ್ತು ಹಿರಿಯ ಸಹೋದ್ಯೋಗಿ ಸುಬ್ರತ್‌ ಕುಮಾರ್ ದಾಸ್‌ ವಿರುದ್ಧ ಎಫ್‌ಐ ಆರ್ ದಾಖಲಿಸಿದ್ದಾರೆ.
karnataka ola employee suicide

ಬೆಂಗಳೂರು ನಗರ ಪೊಲೀಸರು ಸೋಮವಾರ ಓಲಾ ಸಂಸ್ಥೆಯ ಸಿಇಒ ಭವೀಶ್‌ ಅಗರ್ ವಾಲ್ ಮತ್ತು ಹಿರಿಯ ಸಹೋದ್ಯೋಗಿ ಸುಬ್ರತ್‌ ಕುಮಾರ್ ದಾಸ್‌ ವಿರುದ್ಧ ಎಫ್‌ಐ ಆರ್ ದಾಖಲಿಸಿದ್ದಾರೆ. ಮೃತ ವ್ಯಕ್ತಿಯ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರು ತಿಂಗಳ ಅವಧಿಯಲ್ಲಿ ಓಲಾದಲ್ಲಿ ನಡೆದ ಎರಡನೆಯ ಆತ್ಮಹತ್ಯೆ ಇದಾಗಿದ್ದು, ಓಲಾ ಸಂಸ್ಥೆ ತೀವ್ರ ಟೀಕೆಗೆ ಗುರಿಯಾಗುತ್ತಿದೆ. 

ಮೃತ ವ್ಯಕ್ತಿ ಕೆ ಅರವಿಂದ್‌ 2022ರಿಂದ ಓಲಾದ ಕೋರಮಂಗಲ ಕಚೇರಿಯಲ್ಲಿ ಹೋಮೋಲೊಗೇಶನ್‌ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ಒತ್ತಡ ತಾಳಲಾರದೆ 2025ರ ಸೆಪ್ಟೆಂಬರ್ 28ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಅರವಿಂದ್‌ ಸೋದರ ಅಶ್ವಿನ್‌ ಕನ್ನನ್‌ ದೂರು ನೀಡಿದ್ದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

ಅರವಿಂದ್‌, ಸಾವಿಗೂ ಮುನ್ನ 28 ಪುಟಗಳ ಡೆತ್‌ನೋಟ್‌ ಬರೆದಿದ್ದು, ಇದರಲ್ಲಿ ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ನಿರಂತರ ಕಿರುಕುಳದ ವಿವರಗಳನ್ನು ದಾಖಲಿಸಿದ್ದರು. ಅರವಿಂದ್‌ ಸಾವಿನ ನಂತರ ಅವರ ವೇತನ ಮತ್ತು ಭತ್ಯೆಗಳನ್ನು ಕಂಪನಿ ತಡೆ ಹಿಡಿದಿದ್ದು, ಅಶ್ವಿನ್‌ ದೂರಿನಲ್ಲಿ ಅಪಾದಿಸಿದ್ದಾರೆ.

ಆರು ತಿಂಗಳ ಅವಧಿಯಲ್ಲಿ ಓಲಾ ಸಂಸ್ಥೆ ಇದು ಎರಡನೆಯ ಪ್ರಕರಣ. ಕಳೆದ ಮೇ ತಿಂಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪದವೀಧರರಾದ ನಿಖಿಲ್ ಸೋಮವಂಶಿ, ಕೋರಮಂಗಲ ಭಾಗದಲ್ಲಿರುವ ಓಲಾದ AI ಘಟಕದಲ್ಲಿ ನಿಖಿಲ್ ಸೋಮವಂಶಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮೇ ತಿಂಗಳಲ್ಲಿ ಇವರು ಹಿರಿಯ ಸಹೋದ್ಯೋಗಿಗಳಿಂದ ಆಗುತ್ತಿದ್ದ ಶೋಷಣೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಈಗ ಅರವಿಂದ್‌ ಸಾವಿನಿಂದಾಗಿ ಓಲಾ ಸಂಸ್ಥೆ ಕೆಲಸದ ಪರಿಸರ, ಒತ್ತಡ ಕುರಿತ ಚರ್ಚೆಗೆ ಮುನ್ನೆಲೆಗೆ ಬಂದಿದೆ. 

ಓಲಾ ಹೇಳಿಕೆ: ಈ ಕುರಿತು ಸುದ್ದಿ ಪ್ರಕಟಿಸಿರುವ ದಿ ಮನಿಲೈಫ್‌ಗೆ ಹೇಳಿಕೆ ನೀಡಿರುವ ಓಲಾ, “ಅರವಿಂದ್‌ ಮೂರೂವರೆ ವರ್ಷಗಳಿಂದ ಓಲಾದ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಎಂದೂ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಶೋಷಣೆ ಅಥವಾ ಇತರೆ ಸಮಸ್ಯೆಗಳ ಬಗ್ಗೆ ಅಧಿಕೃತ ದೂರು ನೀಡಿಲ್ಲ. ಈ ಸಂಬಂಧ ಸಂಸ್ಥೆಯ ಆಡಳಿತ ಜನರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ’ ಎಂದು ಹೇಳಿದೆ.

ಇದನ್ನೂ ಓದಿ | ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕರಿಗೆ ಕ್ಲೀನ್‌ ಚಿಟ್‌ 

ಎಫ್‌ಐಆರ್ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿರುವ ಓಲಾ ಸಂಸ್ಥೆ, ಮೃತರ ಕುಟುಂಬಕ್ಕೆ ಅಗತ್ಯವಾದ ನೆರವನ್ನು ತಕ್ಷಣವೇ ಒದಗಿಸಿದ್ದು, ಬಾಕಿ ಹಣ, ಭತ್ಯೆಗಳನ್ನು ನೀಡಲಾಗಿದೆ ಎಂದೂ ಹೇಳಿದೆ. ಬೆಂಗಳೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓಲಾ ಸಂಸ್ಥೆ ವಿವಿಧ ಹಂತದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವುದಾಗಿ ತಿಳಿಸಿದ್ದಾರೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »