ನೀವು ಭೇಟಿ ನೀಡಲೇಬೇಕಾದ ಕನ್ನಡದ ಹತ್ತು ಪ್ರಮುಖ ವೆಬ್ ತಾಣಗಳು

ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ತಂತ್ರಜ್ಞಾನವನ್ನು ಒಂದೇ ಸೂರಿನಡಿ ಒಟ್ಟುಗೂಡಿಸಿದ, ನೀವು ಓದಲೇಬೇಕಾದ ಕನ್ನಡದ 10 ಪ್ರಮುಖ ವೆಬ್‌ತಾಣಗಳನ್ನು ಇಲ್ಲಿ ಪರಿಚಯಿಸಲಾಗಿದೆ.
Kannada website

ಡಿಜಿಟಲ್ ಯುಗದಲ್ಲಿರುವ ನಮಗೆ, ಅತ್ಯಂತ ಮೌಲ್ಯಯುತವಾದ ಮಾಹಿತಿ ಮತ್ತು ಸಂಪನ್ಮೂಲಗಳು ಎಲ್ಲಾ ಭಾಷೆಗಳಲ್ಲಿ ಕೂಡ ಇಂದು ನಮ್ಮ ಬೆರಳ ತುದಿಯಲ್ಲೇ ಸಿಗುತ್ತಿವೆ. ಸಾಹಿತ್ಯದ ಡಿಜಿಟಲ್ ಲೈಬ್ರರಿಗಳು, ಶಬ್ದಕೋಶಗಳು, ಭಾಷಾ ಪರಿವರ್ತನಾ ಟೂಲ್‌ಗಳು ಹೀಗೆ ಎಲ್ಲವೂ ನಮಗೆ ಸುಲಭವಾಗಿ ಲಭ್ಯವಾಗುತ್ತವೆ.  ಕನ್ನಡ ಭಾಷೆಯಲ್ಲಿ ಕೂಡ ಈ ಆನ್‌ಲೈನ್ ಜಗತ್ತು ಓದುಗರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಭಾಷಾ ಪ್ರೇಮಿಗಳಿಗೆ ಅಪಾರ ಜ್ಞಾನದ ಬಾಗಿಲನ್ನು ತೆರೆದಿದೆ. 

ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ತಂತ್ರಜ್ಞಾನವನ್ನು ಒಂದೇ ಸೂರಿನಡಿ ಒಟ್ಟುಗೂಡಿಸಿದ ಕನ್ನಡದ 10 ಪ್ರಮುಖ ವೆಬ್‌ತಾಣಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ನೀವು ಭೇಟಿ ನೀಡಲೇಬೇಕಾದ ಕನ್ನಡದ 10 ಪ್ರಮುಖ ವೆಬ್‌ತಾಣಗಳು:

1.ಅರವಿಂದ ಸಂಕ

ಅರವಿಂದ್‌ ಸಂಕ

ಕನ್ನಡ ಬರಹ ಮತ್ತು ಯುನಿಕೋಡ್ ಟೆಕ್ಸ್ಟ್‌ಗಳ ನಡುವಿನ ಪರಿವರ್ತನೆ ಮಾಡಲು ಬಯಸಿದ್ದರೆ ಸಂಕ ವೆಬ್‌ತಾಣ ಬಳಸಬಹುದು.

ಈ ಅರವಿಂದ ಸಂಕ (Sanka) ಎಂಬುದು ಕನ್ನಡ ಭಾಷೆಯ ASCII (ನುಡಿ ಅಥವಾ ಬರಹ) ಮತ್ತು ಯುನಿಕೋಡ್ ಟೆಕ್ಸ್ಟ್ ನಡುವಿನ ಪರಿವರ್ತನೆಗೆ ಸಹಾಯ ಮಾಡುವ ಉಚಿತ ಆನ್‌ಲೈನ್ ಟೂಲ್ ಆಗಿದ್ದು, ಅರವಿಂದ ವಿಶ್ವನಾಥಪುರ ಅವರಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ. ಈ ವೆಬ್‌ತಾಣ ಕನ್ನಡ ಬರಹಗಳನ್ನು ಡಿಜಿಟಲ್ ಫಾರ್ಮ್ಯಾಟ್‌ಗಳಲ್ಲಿ ಸುಲಭವಾಗಿ ಬದಲಾಯಿಸಲು ಅನುವು ಮಾಡಿಕೊಟ್ಟು, ಹಳೆಯ ಟೈಪ್‌ರೈಟರ್ ಫಾಂಟ್‌ಗಳಿಂದ ಆಧುನಿಕ ವೆಬ್ ಮತ್ತು ಮೊಬೈಲ್ ಯುಗಕ್ಕೆ ಸಾಗುವಲ್ಲಿ ಸಹಾಯಕವಾಗಿದೆ. 2019ರಲ್ಲಿ ಆರಂಭವಾಗಿ, ಇದು ಕನ್ನಡ ಬಳಕೆದಾರರಿಗೆ ವ್ಯಾಪಕವಾಗಿ ಉಪಯೋಗಕ್ಕೆ ಬಂದಿದೆ. ಇದರ ಆಂಡ್ರಾಯ್ಡ್ ಆ್ಯಪ್ ಸಹ ಲಭ್ಯವಿದ್ದು, ಆಫ್‌ಲೈನ್ ಬಳಕೆಗೂ ಸಹಾಯ ಮಾಡುತ್ತದೆ.

ವೆಬ್‌ತಾಣದ ಲಿಂಕ್‌: https://aravindavk.in/sanka/

2. ಅಲರ್

ಅಲರ್‌

ಕನ್ನಡ ಪದಗಳಿಗೆ ಅರ್ಥ ಹುಡುಕಲು ಪರದಾಡುತ್ತಿದ್ದರೆ ಅಲರ್‌ ವೆಬ್‌ತಾಣ ಉಪಯೋಗಿಸಿಕೊಳ್ಳಬಹುದು.

ಈ ಅಲರ್ (Alar) ಎಂಬುದು ವಿ. ಕೃಷ್ಣ ಅವರಿಂದ ರಚಿಸಲ್ಪಟ್ಟ ಕನ್ನಡ-ಇಂಗ್ಲಿಷ್ ನಿಘಂಟುವಿನ ಆನ್‌ಲೈನ್ ಆವೃತ್ತಿ. 150,000ಕ್ಕೂ ಹೆಚ್ಚು ಕನ್ನಡ ಪದಗಳಿಗೆ 240,000 ಇಂಗ್ಲೀಷ್ ಅರ್ಥಗಳನ್ನು ಒದಗಿಸುವ ಉಚಿತ ವೆಬ್‌ಸೈಟ್. 2020ರಲ್ಲಿ ಆರಂಭವಾಗಿ, ಇದು ಓಪನ್ ಡೇಟಾ ಬೇಸ್ ಲೈಸೆನ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪದಗಳ ಅರ್ಥ, ಉದಾಹರಣೆಗಳು, ಗಾದೆಗಳು ಮತ್ತು ವಿವರಣೆಗಳೊಂದಿಗೆ ಬಳಕೆದಾರರಿಗೆ ಸುಲಭ ಹುಡುಕಾಟ ಸೌಲಭ್ಯ ನೀಡುತ್ತದೆ, ಇದರ ಆಂಡ್ರಾಯ್ಡ್  ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಸಹ ಲಭ್ಯವಿದ್ದು, ವಿದ್ಯಾರ್ಥಿಗಳು ಮತ್ತು ಭಾಷಾ ಪ್ರೇಮಿಗಳಿಗೆ ಅನುಕೂಲಕರ ಸಾಧನವಾಗಿದೆ.

ವೆಬ್‌ತಾಣದ ಲಿಂಕ್‌: https://alar.ink/

3. ಕೆಂಡಸಂಪಿಗೆ

ಕೆಂಡಸಂಪಿಗೆ

ಕನ್ನಡ ಸಾಹಿತ್ಯದ ಕುರಿತು ಜನಪ್ರಿಯ ಬರಹಗಳನ್ನ ಓದಲು ಬಯಸುತ್ತಿರುವವರಿಗೆ ಕೆಂಡಸಂಪಿಗೆ ವೆಬ್‌ತಾಣ ಉತ್ತಮ  ಆಯ್ಕೆಯಾಗಬಹುದು.

 ಏಕೆಂದರೆ, ಕೆಂಡಸಂಪಿಗೆ ಎಂಬುದು ಕನ್ನಡ ಸಾಹಿತ್ಯ ಮತ್ತು ಭಾವಾಲಾಪಗಳ ಸಂಗ್ರಹವಾಗಿರುವ ಜನಪ್ರಿಯ ಬ್ಲಾಗ್ ಮತ್ತು ಡಿಜಿಟಲ್ ಲೈಬ್ರರಿ ವೆಬ್‌ಸೈಟ್. ಇದು 10,293 ಕನ್ನಡ ಪುಸ್ತಕಗಳ ಉಚಿತ ಡೌನ್‌ಲೋಡ್ ಸೌಲಭ್ಯ ನೀಡುತ್ತದೆ ಮತ್ತು ಇತ್ತೀಚಿನ ಲೇಖನಗಳು, ಕಥೆಗಳು, ಸರಣಿಗಳು ಹೊಂದಿದೆ. 2009ರಲ್ಲಿ ಆರಂಭವಾದ ಈ ವೆಬ್‌ಸೈಟ್‌ನಲ್ಲಿ ಕನ್ನಡ ಓದುಗರಿಗೆ ಸರಣಿ ಕತೆಗಳ ಮೂಲಕ ಸಾಮಾನ್ಯ ಕಥೆಗಳನ್ನು ಹಂಚಿಕೊಳ್ಳಲಾಗುತ್ತದೆ.

ವೆಬ್‌ತಾಣದ ಲಿಂಕ್‌: https://kendasampige.in/ 

4. ಸಂಚಯ

ಸಂಚಯ

ಕನ್ನಡ ವಚನಗಳು, ಇ- ಪುಸ್ತಕಗಳು ಮತ್ತು ಭಾಷೆಗೆ ಸಂಬಂಧಿಸಿದ ಅಧ್ಯಯನಗಳು ಒಂದೇ ಚೌಕಟ್ಟಿನಲ್ಲಿ ಬಯಸಿದ್ದರೇ, ಸಂಚಯ ವೆಬ್‌ತಾಣಗೆ ಭೇಟಿ, ಅಲ್ಲಿ ಎಲ್ಲವೂ ಒಂದೇ ವೇದಿಕೆಯಲ್ಲಿ ಸಿಗುತ್ತದೆ.

ಸಂಚಯ (Sanchaya) ಎಂಬುದು ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಮತ್ತು ಅಧ್ಯಯನ ವೇದಿಕೆ. ಈ ವೆಬ್‌ತಾಣ, ವಚನಗಳ ಸಂಗ್ರಹ, ಕನ್ನಡದ ಡಿಜಿಟಲ್ ಲೈಬ್ರರಿ, ಮತ್ತು ಪುಸ್ತಕಗಳ ಕ್ರೂಡೀಕರಣಗಳಿಗೆ ಸಂಬಂಧಿಸಿದಂತೆ ಮುಖ್ಯ ಪಾತ್ರ ವಹಿಸುತ್ತದೆ. 2013ರಿಂದ ಕಾರ್ಯನಿರ್ವಹಿಸುತ್ತಿರುವ ಈ ವೆಬ್‌ತಾಣನಲ್ಲಿ ಪಿ.ವಿ. ನಾರಾಯಣ ಮತ್ತು ಸವಿತಾ ನಾಗಭೂಷಣರ ಕೃತಿಗಳಂತಹ ಸಾಹಿತ್ಯ ಸಂಗ್ರಹಗಳನ್ನು ಕ್ರೌಡ್‌ಸೋರ್ಸಿಂಗ್ ಮೂಲಕ ಡಿಜಿಟಲ್‌ಗೊಳಿಸಿದೆ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾನ್ಯ ಓದುಗರಿಗೆ ಉಚಿತವಾಗಿ ಲಭ್ಯವಿದೆ. 

ವೆಬ್‌ತಾಣದ ಲಿಂಕ್‌: https://sanchaya.org/ 

5. ಋತುಮಾನ

ಋತುಮಾನ

ಕನ್ನಡ ಸಾಹಿತ್ಯದ ಸಿಹಿಯನ್ನು ಸವಿಯಲು ಬಯಸುತ್ತಿರುವವರು ಋತುಮಾನ ಎನ್ನುವ ವೆಬ್‌ತಾಣಗೆ ಓಮ್ಮೆ ಭೇಟಿ ನೀಡಿ.

ಈ ಋತುಮಾನ (Ruthumana) ಎಂಬುದು ಕನ್ನಡ ಸೃಜನಾತ್ಮಕ ಸಾಹಿತ್ಯಗಳ ಓದುಗರಿಗಿರುವ ಆನ್‌ಲೈನ್ ಪ್ಲಾಟ್‌ಫಾರ್ಮ್. ಇದು ಕಥೆಗಳು, ಚಿಂತನೆಗಳು, ಪುಸ್ತಕ ಪರಿಶೀಲನೆಗಳು ಮತ್ತು ದಾಖಲೀಕರಣಗಳನ್ನು ಹೊಂದಿರುವ ವೆಬ್‌ಸೈಟ್ ಮತ್ತು ಮೊಬೈಲ್  ಆ್ಯಪ್  ಆಗಿದ್ದು, ಓದುಗರಿಗೆ ಸಾಹಿತ್ಯದ ಸಿಹಿಯನ್ನು ತಲುಪಿಸುತ್ತದೆ. 2020ರಲ್ಲಿ ಆ್ಯಪ್ ಬಿಡುಗಡೆಯಾಗಿದೆ. ಇದರ ಮೂಲಕ  ಋತುಮಾನ ವೆಬ್‌ತಾಣ  ಕನ್ನಡ ಸಾಹಿತ್ಯವನ್ನು ಮೊಬೈಲ್ ಯುಗಕ್ಕೆ ಸರಿಹೊಂದಿಸಿ, ಯುವ ಓದುಗರನ್ನು ಆಕರ್ಷಿಸುತ್ತಿದೆ.

ವೆಬ್‌ತಾಣದ ಲಿಂಕ್‌: https://ruthumana.com/ 

6. ಕಣಜ

ಕಣಜ

ವಿಕಿಪೀಡಿಯ ಮಾದರಿಯಲ್ಲಿ ಕನ್ನಡಲ್ಲಿ ಹುಡುಕುತ್ತಿದ್ದರೆ ಕಣಜ ವೆಬ್‌ಸೈಟ್‌ ಉಪಯೋಗವಾಗುತ್ತದೆ.

 ಈ ಕಣಜ (Kanaja) ಎಂಬ ವೆಬ್‌ತಾಣನ್ನು ಕರ್ನಾಟಕ ಸರ್ಕಾರ ವಿಕಿಪೀಡಿಯ ಮಾದರಿಯಲ್ಲಿ ಸಿದ್ಧ ಮಾಡಿದೆ. ಈ ವೆಬ್‌ತಾಣ, ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದಗಳು, ಸರ್ವಜ್ಞ ವಚನಗಳು ಮತ್ತು ಇ-ಪುಸ್ತಕಗಳಂತಹ ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಪನ್ಮೂಲಗಳ ಸಂಗ್ರಹವನ್ನು ಒದಗಿಸುತ್ತದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಇತ್ಯಾದಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇ-ದನಿ, ಇ-ದೃಶ್ಯ ಮತ್ತು ಡಿಜಿಟಲ್ ಲೈಬ್ರರಿ ವಿಭಾಗಗಳ ಮೂಲಕ ಕನ್ನಡ ಜ್ಞಾನವನ್ನು ಡಿಜಿಟಲ್‌ಗೊಳಿಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉಚಿತ ಪ್ರವೇಶ ನೀಡುತ್ತದೆ.

ವೆಬ್‌ತಾಣದ ಲಿಂಕ್‌: https://kanaja.karnataka.gov.in/ 

7. ಲೋಕಾಯತ

ಲೋಕಾಯತ

ಸಂಗೀತ, ಚರಿತ್ರೆ, ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಇ ಪುಸ್ತಕಗಳನ್ನು ಲೋಕಾಯುತ ವೆಬ್‌ತಾಣನಲ್ಲಿ ಓದಬಹುದು.

ಲೋಕಾಯತ ಒಂದು ಕನ್ನಡ ಬ್ಲಾಗ್ ವೆಬ್‌ಸೈಟ್‌ ಆಗಿದ್ದು, ಸಂಗೀತ, ಚರಿತ್ರೆ, ಅರ್ಥಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಅನುವಾದಗಳಲ್ಲಿ ಮಾಹಿತಿಗಳನ್ನು ಮತ್ತು ಚಿಂತನೆಗಳನ್ನು ಸರಳವಾಗಿ ಹಂಚಿಕೊಳ್ಳಲಾಗುತ್ತದೆ. ಇದರಲ್ಲಿ ರಾಗಮಾಲ (ಸಂಗೀತ ಪುಸ್ತಕಗಳು, ಲೇಖನಗಳು, ಸಂಗೀತ ಸಂಸ್ಥೆಗಳ ಅನುಭವ ಮತ್ತು ಪ್ರಜಾವಾಣಿ, ಸುರಭಿ ಸಿಂಚನದಲ್ಲಿ ಬರೆದದ್ದು), ಅರ್ಥ (ಆರ್ಥಿಕತೆಯ ಸಮಾಜಶಾಸ್ತ್ರೀಯ ವಿಶ್ಲೇಷಣೆ, ಪ್ರಜಾಸತ್ತಾತ್ಮಕ ಜ್ಞಾನ ಮತ್ತು ಅಧಿಕಾರದ ಸಮಾನ ಹಂಚಿಕೆ), ಇತರ ಬರಹಗಳು (ಚರಿತ್ರೆ-ತತ್ತ್ವಶಾಸ್ತ್ರ) ಮತ್ತು ಅನುವಾದಗಳು ಎಂಬ ನಾಲ್ಕು ಭಾಗಗಳನ್ನು ಹೊಂದಿದೆ. ರಾಜೀವ್ ತಾರಾನಾಥರಂತಹವರ ಪ್ರೇರಣೆಯಿಂದ ಹುಟ್ಟಿದ ಈ ತಾಣದಲ್ಲಿ, ಫೇಸ್‌ಬುಕ್‌ನಲ್ಲಿ ಹಂಚಿದ ಚಿಂತನೆಗಳನ್ನೂ ಸೇರಿಸಿ, ಕನ್ನಡ ಓದುಗರಿಗೆ ಆಳವಾದ ಜ್ಞಾನದ ಹೊಸ ಬಾಗಿಲನ್ನು ತೆರೆಯುತ್ತದೆ.

ವೆಬ್‌ತಾಣದ ಲಿಂಕ್‌: https://lokayatha.com/ 

8. ಮೈಲ್ಯಾಂಗ್‌ ಬುಕ್‌

ಮೈಲ್ಯಾಂಗ್‌ ಬುಕ್‌

ಕನ್ನಡ ಇ-ಬುಕ್‌ಗಳು ಮತ್ತು ಆಡಿಯೋಬುಕ್‌ಗಳಿಗಾಗಿ  ಮೈಲಾಂಗ್‌ ವೆಬ್‌ತಾಣನಲ್ಲಿ ನೋಡಬಹುದು.
MYlang ಎಂಬುದು ಕನ್ನಡ ಇ-ಬುಕ್‌ಗಳು ಮತ್ತು ಆಡಿಯೋಬುಕ್‌ಗಳ ಡಿಜಿಟಲ್ ಪ್ಲಾಟ್‌ಫಾರ್ಮ್ , ಇದು ಸಾವಿರಾರು ಕನ್ನಡ ಕೃತಿಗಳನ್ನು ಮೊಬೈಲ್ ಮತ್ತು ವೆಬ್‌ನಲ್ಲಿ ಓದುವ-ಕೇಳುವ ಸೌಲಭ್ಯ ಜನರಿಗೆ ನೀಡುತ್ತಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಶ್ವತ್ಥಾಮನ್ ಮುಂತಾದವರ ಕೃತಿಗಳು ಇಲ್ಲಿ ಲಭ್ಯವಿದೆ. ಆಂಡ್ರಾಯ್ಡ್  ಆ್ಯಪ್  ಮೂಲಕ ಯಾವುದೇ ಸ್ಥಳ , ಸಮಯದಲ್ಲಿ ಕನ್ನಡ ಸಾಹಿತ್ಯವನ್ನು ತಲುಪಿಸುವ ಉದ್ದೇಶವನ್ನು ಹೊಂದಿದ್ದು, ಓವರ್‌ಸೀಸ್ ಸ್ಟೋರ್ ಮೂಲಕ ವಿದೇಶದ ಕನ್ನಡಿಗರಿಗೂ ಸೇವೆ ನೀಡುತ್ತದೆ; ಇದರ ಮೂಲಕ ಕನ್ನಡ ಸಾಹಿತ್ಯವನ್ನು ಡಿಜಿಟಲ್ ಯುಗಕ್ಕೆ ಸರಿಹೊಂದಿಸಿ, ಯುವ ತಲೆಮಾರುಗಳನ್ನು ಆಕರ್ಷಿಸುತ್ತಿದೆ.
ವೆಬ್‌ತಾಣದ ಲಿಂಕ್‌:  https://mylangbooks.com/ 

9. ಸಲ್ಲಾಪ ಸಂಸ್ಕೃತಿ 

ಸಂಸ್ಕೃತಿ ಸಲ್ಲಾಪ

ಕನ್ನಡ ಹಾಡಿನ ಸಾಹಿತ್ಯಗಳು, ಭಾರತೀಯ ಕಾವ್ಯಗಳ ಆಳವಾದ ಅಧ್ಯಾಯನಕ್ಕೆ ಸಲ್ಲಾಪ ವೆಬ್‌ತಾಣಗೆ ಭೇಟಿ ನೀಡಬಹುದು.

ಸಂಸ್ಕೃತಿ ಸಲ್ಲಾಪ ಒಂದು ಕನ್ನಡ ಸಾಂಸ್ಕೃತಿಕ ಬ್ಲಾಗ್ ಆಗಿದ್ದು, ಇದರಲ್ಲಿ ಸಂಸ್ಕೃತಿ, ಹಾಡಿನ ಸಾಹಿತ್ಯಗಳು, ಭಾರತೀಯ ಸಮುದಾಯಗಳು ಮತ್ತು ಕಾವ್ಯಗಳ  ಬಗ್ಗೆ ಆಳವಾದ ಚರ್ಚೆಗಳನ್ನು ನಡೆಸುತ್ತದೆ. ಇದು ಸೋಮೇಶ್ವರ ಶತಕ, ಸ್ವಾತಂತ್ರ್ಯನೋಟ, ಗೋವಿನ ಕಥೆ ಇತ್ಯಾದಿ ಲೇಖನಗಳ ಮೂಲಕ ಕನ್ನಡ ಸಾಂಸ್ಕೃತಿಕ ಪ್ರೀತಿಯ ಕಿಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಕಾಳಿದಾಸನ ಹಿಮಾಲಯ ವರ್ಣನೆಯಂತಹ ಪ್ರಾಚೀನ ಗ್ರಂಥಗಳು ಮತ್ತು ಆಧುನಿಕ ವಿಷಯಗಳನ್ನು ಹಂಚಿಕೊಳ್ಳುತ್ತದೆ. 2013ರಿಂದ ಆರಂಭವಾದ ಈ ವೆಬ್‌ತಾಣ, ಹೆಚ್ಚೆಚ್ಚು ಓದುಗರನ್ನು ಆಕರ್ಷಿಸುತ್ತಿದೆ. ಇದರ ಮೂಲಕ ಕನ್ನಡ ಸಂಪದವನ್ನು ಜೀವಂತಗೊಳಿಸಿ,

ವೆಬ್‌ತಾಣದ ಲಿಂಕ್‌: https://www.sallapa.com/ 

10. ಕನ್ನಡ ಗೊತ್ತಿಲ್ಲ

ಕನ್ನಡ ಗೊತ್ತಿಲ್ಲ

ನಿಮಗೆ ಕನ್ನಡ ಕಲಿಯಲು ಆಸಕ್ತಿ ಇದೆಯೇ?  ಹಾಗಾದರೆ ನಿಮ್ಮ ವಾಟ್ಸಾಪ್‌ ಮೂಲಕವೇ ಕನ್ನಡ ಕಲಿಯಬಹುದು. ಅದಕ್ಕೆ ನೀವು ಕನ್ನಡ ಗೊತ್ತಿಲ್ಲ ವೆಬ್‌ತಾಣಗೆ ಭೇಟಿ ನೀಡಿ

ಕನ್ನಡ ಗೊತ್ತಿಲ್ಲ ಎಂಬುದು ಅನುಪ್ ಮೈಯಾ ಅವರು ಆರಂಭಿಸಿದ ವೆಬ್‌ತಾಣ ಆಗಿದ್ದು, ಕನ್ನಡ ತಿಳಿಯದವರಿಗೆ ವಾಟ್ಸಾಪ್ ಮೂಲಕ 30 ದಿನಗಳಲ್ಲಿ ಸಣ್ಣ ಪಾಠಗಳು, ಧ್ವನಿಮುದ್ರಿಕೆಗಳು, ವ್ಯಾಕರಣ ಹಾಗೂ ದೈನಂದಿನ ಸಂಭಾಷಣೆಗಳನ್ನು ನೇರ ಮತ್ತು ಯೂಟ್ಯೂಬ್ ತರಗತಿಯೊಂದಿಗೆ ಕಲಿಸಲಾಗುತ್ತದೆ.  

ವೆಬ್‌ತಾಣದ ಲಿಂಕ್‌:  https://kannadagottilla.com/ 

Share:

ಮತ್ತಷ್ಟು ಸುದ್ದಿ

india labour line

ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ: ಕಾರ್ಮಿಕ ಹಿತ ರಕ್ಷಣೆಗೆ ಇಂಡಿಯಾ ಲೇಬರ್ ಲೈನ್ ಬದ್ಧ

ದೇಶದ ಅಭಿವೃದ್ಧಿಗೆ ತಮ್ಮ ಶ್ರಮವನ್ನು ಅರ್ಪಿಸುತ್ತಿರುವ ವಲಸೆ ಕಾರ್ಮಿಕರು ಇಂದು ಮಾಲೀಕರಿಂದ ವಿವಿಧ ರೀತಿಯ ಶೋಷಣೆಗೆ ಒಳಗಾಗುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ.

karnataka to rename

ರಾಜ್ಯದ ಎಲ್ಲಾ ಪಂಚಾಯಿತಿ ಇನ್ಮುಂದೆ ‘ಗಾಂಧಿ ಪಂಚಾಯಿತಿ’:  ಡಿಕೆಶಿ ಘೋಷಣೆ

ಮಹಾತ್ಮ ಗಾಂಧೀಜಿಯವರ ಹೆಸರನ್ನು ಗ್ರಾಮೀಣ ಭಾಗದಲ್ಲಿ ಶಾಶ್ವತವಾಗಿ ಉಳಿಸುವ ಮತ್ತು ಅವರ ಗ್ರಾಮ ಸ್ವರಾಜ್ಯದ ಕನಸನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ

karnataka to recruit

ಮುಂದಿನ ಶೈಕ್ಷಣಿಕ ವರ್ಷದೊಳಗೆ 10,800 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು ಮತ್ತು ಶಿಕ್ಷಕರ ಕೊರತೆಯನ್ನು ಶಾಶ್ವತವಾಗಿ ನೀಗಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಮುಂದೆ ಓದಿ »
lalbagh flower show 2026

ಲಾಲ್‌ಬಾಗ್ ಫ್ಲವರ್ ಶೋಗೆ ತೆರೆ : 8 ಲಕ್ಷಕ್ಕೂ ಅಧಿಕ ಜನರ ವೀಕ್ಷಣೆ!

ಬೆಂಗಳೂರಿನ ಕಿರೀಟಪ್ರಾಯವಾದ ಲಾಲ್‌ಬಾಗ್‌ನಲ್ಲಿ ಕಳೆದ ಹದಿಮೂರು ದಿನಗಳಿಂದ ಕಣ್ಮನ ಸೆಳೆಯುತ್ತಿದ್ದ 219ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈಗ ತೆರೆ ಬಿದ್ದಿದೆ.

ಮುಂದೆ ಓದಿ »
bangalore atm cash theft

ಎಟಿಎಂಗೆ ತುಂಬಬೇಕಿದ್ದ 1.37 ಕೋಟಿ ರೂ. ದೋಚಿ ನೌಕರರು ಎಸ್ಕೇಪ್!

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಗದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿಗಳೇ ಹಣ

ಮುಂದೆ ಓದಿ »