`ನಾನ್‌ʼ ಕನ್ನಡಿಗ | ಗಡಿಗಳನ್ನು ಮೀರಿದ ಕನ್ನಡ ಪ್ರೀತಿ

ಕನ್ನಡ ಭಾಷೆಯ ಸೊಬಗಿಗೆ, ಸೌಂದರ್ಯಕ್ಕೆ ಯಾವುದೇ ಗಡಿಗಳಿಲ್ಲ. ಏಕೆಂದರೆ ಹೊರ ರಾಜ್ಯಗಳಿಂದ ಬಂದು ತಮ್ಮ ಮಾತೃಭಾಷೆಯ ಹೊರತಾಗಿಯೂ ಕನ್ನಡವನ್ನು ತಮ್ಮದಾಗಿಸಿಕೊಂಡು ಕರುನಾಡ ಜನತೆಯ ಮನಗೆದ್ದವರು ಅನೇಕರಿದ್ದಾರೆ.
Non kannadiga's

ಕರ್ನಾಟಕದ ಜನತೆಗೆ ಕನ್ನಡ ಭಾಷೆಯೇ ಜೀವನಾಡಿ. ಇದು ಕೇವಲ ಭಾಷೆಯಲ್ಲ, ಸಂಸ್ಕೃತಿ, ಸಾಹಿತ್ಯ, ಜನಜೀವನದ ಸಾರವೇ ಆಗಿದೆ. ಈ ಕನ್ನಡ ಭಾಷೆಯ ಸೊಬಗಿಗೆ, ಸೌಂದರ್ಯಕ್ಕೆ ಯಾವುದೇ ಗಡಿಗಳಿಲ್ಲ. ಏಕೆಂದರೆ ಹೊರ ರಾಜ್ಯಗಳಿಂದ ಬಂದು ತಮ್ಮ ಮಾತೃಭಾಷೆಯ ಹೊರತಾಗಿಯೂ ಕನ್ನಡವನ್ನು ತಮ್ಮದಾಗಿಸಿಕೊಂಡು ಕರುನಾಡ ಜನತೆಯ ಮನಗೆದ್ದವರು ಅನೇಕರಿದ್ದಾರೆ. ಇವರೆಲ್ಲರೂ ನೇಪಾಳ, ಪಂಜಾಬ್‌ನಂತಹ ಇತರ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದು, ಕನ್ನಡ ಭಾಷಾ ಸೌಂದರ್ಯಕ್ಕೆ ಮಾರುಹೋಗಿ ಇಲ್ಲಿ ಜನಪ್ರಿಯರಾಗಿದ್ದಾರೆ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲು ಅವರದ್ದೇ ಆದ ಹಲವು ಕಾರಣಗಳಿರುತ್ತದೆ. ಆದರೆ ಅವರ ಕನ್ನಡ ಪ್ರೀತಿಗೆ ಸರಿಸಾಟಿನೇ ಇಲ್ಲ. ಅದರಲ್ಲಿ ಬೆರಳೆಣಿಕೆಯಷ್ಟು ಜನರ ಪರಿಚಯವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಚಿರಂಜೀವಿ ಸಿಂಘ್: ಪಂಜಾಬಿ ಅಧಿಕಾರಿಯ ಕನ್ನಡ ಸಾಹಿತ್ಯ ಸೇವೆ

ಚಿರಂಜೀವಿ ಸಿಂಘ್‌

ಪಂಜಾಬ್ ಮೂಲದ ಚಿರಂಜೀವಿ ಸಿಂಘ್‌ ಕರ್ನಾಟಕವನ್ನು ತಮ್ಮ ಎರಡನೇ  ಮಾತೃಭೂಮಿಯಾಗಿ ಮಾಡಿಕೊಂಡಿದ್ದಾರೆ. 1969ರಲ್ಲಿ ಭಾರತೀಯ ಆಡಳಿತ ಸೇವೆಗೆ ಸೇರಿ, ಯುನೆಸ್ಕೋದಲ್ಲಿ ಭಾರತದ ರಾಯಭಾರಿರಾಗಿ ಸೇವೆ ಸಲ್ಲಿಸಿದ್ದಾರೆ. 1971ರಲ್ಲಿ ಕರ್ನಾಟಕದ ತರೀಕೆರೆಗೆ ಕಾರ್ಯ ನಿಮಿತ್ತ ಬಂದ ಚಿರಂಜೀವಿ ಸಿಂಘ್‌ ಅವರು ಆಗಿನಿಂದ ಕನ್ನಡ ಭಾಷೆಯನ್ನು ಕಲಿಯಲು ಆರಂಭಿಸಿದರು. ಪ್ರೊಬೇಶನರ್ ಆಗಿ ಕರ್ನಾಟಕದ ಬಳ್ಳಾರಿಯಲ್ಲಿ ಕಾರ್ಯ ಆರಂಭಿಸಿದ ಸಿಂಗ್‌ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.. 

ಸಿನಿಮಾ, ಪತ್ರಿಕೆಗಳ ಮೂಲಕ ಸ್ಪಷ್ಟವಾಗಿ ಕನ್ನಡವನ್ನು ಕಲಿತ ಸಿಂಗ್‌,  ಕನ್ನಡದಲ್ಲಿ ‘ಯಾವ ಜನ್ಮದ ಮೈತ್ರಿ’ (2019) ಎಂಬ ಪುಸ್ತಕ ಬರೆದಿದ್ದಾರೆ. ಈ ಕೃತಿಯಲ್ಲಿ ರಾವಿ ನದಿಯಿಂದ ಕಾವೇರಿಯವರೆಗಿನ ಪಯಣ, ಕರ್ನಾಟಕದ ಕಲೆ, ಸಂಸ್ಕೃತಿ, ಸಂಗೀತ ಹಾಗೂ ಆಡಳಿತದ ಬಗ್ಗೆ ಆಳವಾದ ಚಿಂತನೆಗಳಿವೆ. ಸಿಂಘ್‌ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಈ ಕೊಡುಗೆ ಓದುಗರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಅಲ್ಲದೆ, ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಾ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ್ದು ಕನ್ನಡದ ಸೌಂದರ್ಯವನ್ನು ಬೆಳಗುವ ಪ್ರಯತ್ನ ಮಾಡುತ್ತಿರುವುದು ಮಾತ್ರ ಎಲ್ಲರಿಗೂ ಮಾದರಿಯಾಗಿದೆ.

ಅಂಕಿತಾ ಕುಂಡು: ಬಂಗಾಳಿ ಬಾಲಕಿಯ ಕನ್ನಡ ಸಂಗೀತ ಪಯಣ

ಅಂಕಿತಾ ಕುಂಡು

ಅಂಕಿತಾ ಕುಂಡು ಮೂಲತಃ ಕರ್ನಾಟಕದವರಲ್ಲ. ದೆಹಲಿಯ ಬಂಗಾಳಿ ಕುಟುಂಬದಲ್ಲಿ ಜನಿಸಿದ  ಇವರು, ಬೆಳೆದದ್ದು ಮಾತ್ರ ಕರ್ನಾಟಕದ ಬೆಂಗಳೂರಿನಲ್ಲಿ. ಇದೀಗ ಕನ್ನಡ ಚಲನಚಿತ್ರ ಸಂಗೀತದ ಮೂಲಕ ಗಮನ ಸೆಳೆದಿದ್ದಾರೆ. 2015ರಲ್ಲಿ ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಂಕಿತಾ, ರನ್ನರ್ ಅಪ್ ಕೂಡ ಆಗಿದ್ದರು. ಜಗತ್ ಕಿಲಾಡಿ, 5ಜಿ ಇತ್ಯಾದಿ ಫೇಮಸ್ ಆಲ್ಬಂ ಸಾಂಗ್‌ಗಳಿಗೆ ದನಿಯಾಗಿರುವ ಅಂಕಿತಾ, ಕನ್ನಡ ಚಲನಚಿತ್ರಗೀತೆ  ‘ನೀನಿರೆ ಸನಿಹ ನೀನಿರೆ’ ಮೊದಲಾದ ಹಾಡುಗಳಿಗೆ ಧ್ವನಿಮುದ್ರಣ ಕವರ್‌ಗಳನ್ನು ನೀಡಿ ಕನ್ನಡ ರಸಿಕರ ಮನಗೆದ್ದಿದ್ದಾರೆ. ಬಂಗಾಳಿ ರಾಗಗಳನ್ನು ಕನ್ನಡ ಲಯಗಳೊಂದಿಗೆ ಸಮನ್ವಯಗೊಳಿಸುವ ಅವರ ಶೈಲಿ ವಿಶಿಷ್ಟ. ಕನ್ನಡ ಚಿತ್ರರಂಗದಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.

ಅಜಯ್ ಕುಮಾರ್ ಸಿಂಗ್: ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿಯ ಕನ್ನಡ ಸೇವೆ

ಅಜಯ್‌ ಕುಮಾರ್‌ ಸಿಂಗ್‌

ಉತ್ತರ ಪ್ರದೇಶದಲ್ಲಿ ಜನಿಸಿದ ಡಾ. ಅಜಯ್ ಕುಮಾರ್ ಸಿಂಗ್, 1974ರ ಬ್ಯಾಚ್ ಕರ್ನಾಟಕದ ಕೇಡರ್ ಐಪಿಎಸ್ ಅಧಿಕಾರಿ. ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಉತ್ತೀರ್ಣರಾಗಿ 1976ರಲ್ಲಿ ಬೆಂಗಳೂರಿಗೆ ಬಂದ ಅವರು, ಕನ್ನಡವನ್ನು ಪರಿಪೂರ್ಣವಾಗಿ ಕಲಿತು ಮಾತನಾಡುತ್ತಿದ್ದಾರೆ. ಶಿವಮೊಗ್ಗ-ಮಂಡ್ಯ ಎಸ್‌ಪಿ, ಬೆಂಗಳೂರು ಡಿಸಿಪಿ (ಕ್ರೈಮ್-ಟ್ರಾಫಿಕ್), ಹೆಚ್ಚುವರಿ ಕಮಿಷನರ್, ಪೊಲೀಸ್ ಕಮಿಷನರ್, ಐಜಿಪಿ (ಮಾಹಿತಿ), ಸಿಐಡಿ ಡಿಜಿಪಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.  ಇವರು ‘12ನೇ ಶತಮಾನದ ವಚನಕಾರ ಅಲ್ಲಮ ಪ್ರಭು ಮತ್ತು 15ನೇ ಶತಮಾನದ ಭಕ್ತಿ ಕವಿ ಸಂತ ಕಬೀರರ ತತ್ತ್ವಚಿಂತನೆಗಳ ಹೋಲಿಕೆ’ ವಿಷಯದಲ್ಲಿ ತಮ್ಮ ಪಿಎಚ್‌ಡಿ ಪದವಿಯನ್ನು ಪೂರೈಸಿದ್ದಾರೆ. ಜೊತೆಗೆ ಗೋಪಾಲಕೃಷ್ಣ ಅಡಿಗರ ಕೃತಿಯನ್ನು ಹಿಂದಿಗೆ ಅನುವಾದಿಸಿ, ಕೆ.ವಿ. ರಾಜನ್‌ನಂತಹ ಸಾಹಿತಿಗಳೊಂದಿಗೆ ಸಂಪರ್ಕದಲ್ಲಿ ಇದ್ದು ಕನ್ನಡ ಸಾಹಿತ್ಯದಲ್ಲಿ ಆಳ ಜ್ಞಾನ ಪಡೆದಿದ್ದಾರೆ. ಗಾಂಧೀವಾದಿ ಸರಳ ಜೀವಿಯಾಗಿ ಕರ್ನಾಟಕದಲ್ಲಿ ಮೂಲನಿವಾಸಿಯಂತೆ ಸ್ವೀಕೃತರಾಗಿದ್ದಾರೆ.

ಜಸ್ಕರಣ್ ಸಿಂಗ್: ಪಂಜಾಬಿ ಸರ್ದಾರನ ಕನ್ನಡ ಪ್ಲೇಬ್ಯಾಕ್ ಗಾಯನ

ಜಸ್ಕರಣ್‌ ಸಿಂಗ್‌

ಪಂಜಾಬ್‌ನ ಮೂಲದ ಜಸ್ಕರಣ್ ಸಿಂಗ್ ಕನ್ನಡ ಚಲನಚಿತ್ರ ಸಂಗೀತದಲ್ಲಿ ಪ್ಲೇಬ್ಯಾಕ್ ಗಾಯಕನಾಗಿ ಪ್ರಸಿದ್ಧಿ ಪಡೆದಿದ್ದಾರೆ.  ಸರಿಗಮಪ ಸೀಸನ್ 20ರ ಸ್ಪರ್ಧಿಯಾಗಿ ಭಾಗವಹಿಸಿದ್ದ ಜಸ್ಕರಣ್ ಸಿಂಗ್, ʻನೀ ಸಿಗೋವರೆಗೂʼ, ʻಸರಿಯಾಗಿ ನೆನಪಿದೆʼ ಇತರ ಹಾಡುಗಳ ಮೂಲಕ ಮೋಡಿ ಮಾಡಿದ್ದರು.  ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ದ್ವಾಪರ’ ಸಾಂಗ್ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿದೆ. ಇದು ಜಸ್ಕರಣ್‌ ಸಿಂಗ್‌ ಅವರಿಗೆ ಕರ್ನಾಟಕದ ಜನತೆಯ ಹೃದಯದಲ್ಲಿ ಖಚಿತ ಸ್ಥಾನ ಪ್ರಮುಖ ಮೈಲಿಗಲ್ಲಾಯಿತು.   ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ‘ಅಯ್ಯೋ ಶಿವನೇ’ (ಕಲ್ಟ್) ಮತ್ತು ‘ಬಂಗಾರದ ಗೊಂಬೆ’  ಮೊದಲಾದ ಹಾಡುಗಳು ಜಸ್ಕರಣ್ ಸಿಂಗ್ ಧ್ವನಿಯಲ್ಲಿ ಸಂಗೀತ ಪ್ರಿಯರಿಗೆ ಜನಪ್ರಿಯವಾದವು. 2024ರಲ್ಲಿ ಕನ್ನಡದ ಉತ್ತಮ ಪ್ಲೇಬ್ಯಾಕ್ ಗಾಯಕ ಪ್ರಶಸ್ತಿ ಪಡೆದ ಅವರು, ಪಂಜಾಬಿ ಧ್ವನಿಯನ್ನು ಕನ್ನಡ ಸಾಹಿತ್ಯದೊಂದಿಗೆ ಸಮನ್ವಯಗೊಳಿಸುವ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

 ರೀತು ಸಿಂಗ್ : ನೇಪಾಳಿ ಬಾಲನಟಿಯ ಕನ್ನಡ ಧಾರಾವಾಹಿ ಪ್ರವೇಶ

ರೀತು ಸಿಂಗ್‌

ಝೀ ಕನ್ನಡದ ‘ಸೀತಾ ರಾಮ’ ಧಾರಾವಾಹಿಯಲ್ಲಿ ‘ಸಿಹಿʼ ಪಾತ್ರದ ಮೂಲಕ ಕರ್ನಾಟಕದ ಕುಟುಂಬಗಳ ಮನೆಮಾತದ 10 ವರ್ಷದ ರೀತು ಸಿಂಗ್‌ ನೇಪಾಳ ಮೂಲದವರು. ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಭಾಗವಹಿಸಿ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಅವರು, ಧಾರಾವಾಹಿಯಲ್ಲಿ ನಟಿಸುತ್ತಾ ಶಾಲಾ ಶಿಕ್ಷಣವನ್ನೂ ಮುಂದುವರಿಸುತ್ತಿದ್ದಾರೆ. ಕನ್ನಡದಲ್ಲಿ ಮುದ್ದು ಮುದ್ದಾಗಿ ಮಾತಾಡುವ ಈಕೆಯ ಮಾತು ಮತ್ತು ಅಭಿನಯ ಕೌಶಲ್ಯ ಕರ್ನಾಟಕದ ಜನತೆಯನ್ನು ಆಕರ್ಷಿಸಿದೆ. ನೇಪಾಳದಿಂದ ಕನ್ನಡ ಧಾರಾವಾಹಿ ಜಗತ್ತಿಗೆ ಪ್ರವೇಶಿಸಿದ ಈ ಬಾಲ ನಟಿ, ಕನ್ನಡ ಭಾಷೆಯ ಆಕರ್ಷಣೆಯನ್ನು ಮತ್ತು ಅದರ ಸಂಯೋಜನೆಯ ಶಕ್ತಿಯನ್ನು ಸಾಬೀತುಪಡಿಸುವ ಉತ್ತಮ ಉದಾಹರಣೆಯಾಗಿದ್ದಾರೆ.

ಪ್ರೇಮ್ ತಾಪ: ನೇಪಾಳಿ ಗಾಯಕನ ಕನ್ನಡ ಸ್ವರಮಾಧುರ್ಯ

ಪ್ರೇಮ್‌ ತಾಪ

ನೇಪಾಳ ಮೂಲದವರಾದರೂ ಕೂಡ ಕನ್ನಡದ ದೊಡ್ಡ ಅಭಿಮಾನಿ ಈ ಪ್ರೇಮ್ ತಾಪ. ಝೀ ಕನ್ನಡದ ರಿಯಾಲಿಟಿ ಶೋಗಳಾದ ಸರಿಗಮಪ  ಮತ್ತು ಭರ್ಜರಿ ಬ್ಯಾಚ್‌ಲರ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕರ್ನಾಟಕದ ಮನೆ ಮಾತಾಗಿದ್ದಾರೆ. ನೇಪಾಳಿ ರಾಗಗಳನ್ನು ಕನ್ನಡ ಲಯಗಳೊಂದಿಗೆ ಸಮ್ಮಿಲನಗೊಳಿಸಿ ಎಲ್ಲರ ಮನ ಗೆದ್ದಿದ್ದಾರೆ. ನೇಪಾಳಿ ಮತ್ತು ಕನ್ನಡ ಸಂಸ್ಕೃತಿಗಳ ನಡುವೆ ಸೇತುವೆಯಾಗಿ ನಿಂತ ಅವರ ಹಾಡುಗಳು ಎರಡೂ ಭಾಷೆಗಳ ಸೌಂದರ್ಯವನ್ನು ಎತ್ತಿ ತೋರಿಸುತ್ತವೆ. ಅಲ್ಲದೆ, ಅವರು ಕನ್ನಡ ಜಾನಪದ ಸಂಗೀತದಲ್ಲಿ ಪ್ರಯೋಗಗಳನ್ನು ಮಾಡುತ್ತಾ ಭಾಷೆಯ ವಿಸ್ತರಣೆಗೆ ಕಾರಣರಾಗುತ್ತಿದ್ದಾರೆ. 

ಅಜಯ ಕುಮಾರ್‌ ಸಿಂಗ್‌, ಅಂಕಿತಾ ಕುಂಡು, ಚಿರಂಜೀವಿ ಸಿಂಘ್‌ , ರೀತು ಸಿಂಗ್, ಪ್ರೇಮ್ ತಾಪ ಹಾಗೂ ಜಸ್ಕರಣ್ ಸಿಂಗ್ ಸೇರಿದಂತೆ ಇನ್ನೂ ಹಲವರು ಈ ರೀತಿಯಲ್ಲಿ ತಮ್ಮ ಭಾಷೆಯ ಗಡಿಯನ್ನು ಮೀರಿ, ಕನ್ನಡವನ್ನು ವಿಶ್ವಾದ್ಯಾಂತ ಪಸರಿಸುತ್ತಿದ್ದಾರೆ. ನೇಪಾಳ, ಪಂಜಾಬ್, ಬಂಗಾಳದಿಂದ ಆಗಮಿಸಿ ಕನ್ನಡವನ್ನು ತಮ್ಮದಾಗಿಸಿಕೊಂಡು ಕರ್ನಾಟಕದಲ್ಲಿ ಜನಪ್ರಿಯರಾದ ಅವರು, ಕನ್ನಡ ಭಾಷೆಯ  ಸೌಂದರ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ಇದು ಕನ್ನಡದ ಹಿರಿಮೆಗೆ ಮತ್ತಷ್ಟು ಬಲ ತುಂಬುವುದಲ್ಲದೆ, ಕನ್ನಡ ಭಾಷೆಯ ಸಿರಿವಂತಿಕೆಯನ್ನು ಪ್ರದರ್ಶಿಸುತ್ತದೆ.  

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »