ಪಾಕಿಸ್ತಾನವು ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಬಿಎಸ್ ನ್ಯೂಸ್‌ನ ’60 ಮಿನಿಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಟ್ರಂಪ್ ಮಾತನಾಡಿ, ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನದಂತಹ ದೇಶಗಳು ಸಕ್ರಿಯವಾಗಿ ನ್ಯೂಕ್ಲಿಯರ್ ಟೆಸ್ಟ್‌ಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ ಟ್ರಂಪ್, ಇದರಿಂದಾಗಿ ಅಮೆರಿಕವು 33 ವರ್ಷಗಳ ನಿರ್ಬಂಧವನ್ನು ರದ್ದುಗೊಳಿಸಿ ತನ್ನದೇ ಟೆಸ್ಟ್‌ಗಳನ್ನು ಮರುಶುರು ಮಾಡುತ್ತಿದೆ ಎಂದು ದೃಢಪಡಿಸಿದರು.
ಈ ಹೇಳಿಕೆಯು ದಕ್ಷಿಣ ಏಷ್ಯಾದ ಭದ್ರತೆಗೆ ಹೊಸ ಸವಾಲುಗಳನ್ನು ಎಚ್ಚರಿಸುತ್ತದೆ, ವಿಶೇಷವಾಗಿ ಭಾರತದಂತಹ ದೇಶಗಳಿಗೆ, ಏಕೆಂದರೆ ಪಾಕಿಸ್ತಾನದ ಈ ಚಟುವಟಿಕೆಗಳು ಪ್ರಾಂತೀಯ ಸ್ಥಿರತೆಯನ್ನು ಅಸ್ಥಿರಗೊಳಿಸಬಹುದು.
ಟ್ರಂಪ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ, ಅಮೆರಿಕವು 1992ರಿಂದ ನ್ಯೂಕ್ಲಿಯರ್ ಟೆಸ್ಟ್‌ಗಳ ಮೇಲೆ ನಿರ್ಬಂಧ ಹೇರಿಕೊಂಡಿತ್ತು. ಆದರೆ, ರಷ್ಯಾದ ಇತ್ತೀಚಿನ ಪೋಸಿಡಾನ್ ಅಂಡರ್‌ವಾಟರ್ ಡ್ರೋನ್‌ನಂತಹ ಆಧುನಿಕ ಪರಮಾಣು ಸಾಧನಗಳ ಪರೀಕ್ಷೆಗಳು. ಚೀನಾದ ಗುಪ್ತ ಚಟುವಟಿಕೆಗಳು ಮತ್ತು ಉತ್ತರ ಕೊರಿಯಾ ತನ್ನ ಪರೀಕ್ಷೆಗಳನ್ನು ಜಗತ್ತಿಗೆ ತೋರಿಸಿ ನಡೆಸಿದ್ದರಿಂದ ಅಮೆರಿಕ ತನ್ನ ನ್ಯೂಕ್ಲಿಯರ್ ನೀತಿಯನ್ನು ಬದಲಾಯಿಸಿತು.
“ರಷ್ಯಾ ಪರೀಕ್ಷಿಸುತ್ತಿದೆ, ಚೀನಾ ಪರೀಕ್ಷಿಸುತ್ತಿದೆ, ಆದರೆ ಅವರು ಅದನ್ನು ಹೇಳುವುದಿಲ್ಲ. ನಾವು ತುಂಬಾ ತೆರೆದ ಸಮಾಜ. ನಾವು ಮಾತನಾಡಬೇಕು, ಇಲ್ಲದಿದ್ದರೆ ನೀವು ವರದಿ ಮಾಡುತ್ತೀರಿ,” ಎಂದು ಟ್ರಂಪ್ ಹೇಳಿದರು. ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾ, “ನಿಶ್ಚಯವಾಗಿಯೂ ಉತ್ತರ ಕೊರಿಯಾ ಪರೀಕ್ಷಿಸುತ್ತಿದೆ. ಪಾಕಿಸ್ತಾನ ಕೂಡ ಪರೀಕ್ಷಿಸುತ್ತಿದೆ,” ಎಂದು ಸ್ಪಷ್ಟಪಡಿಸಿದರು. ಈ ಆರೋಪಗಳು ಪಾಕಿಸ್ತಾನದ 1998ರ ಚಗೈ ಪರೀಕ್ಷೆಗಳ ನಂತರದ ಗುಪ್ತ ಚಟುವಟಿಕೆಗಳನ್ನು ಸೂಚಿಸುತ್ತವೆ, ಇದು ಭಾರತೀಯ ಮೂಲಗಳ ಪ್ರಕಾರ ಪರಮಾಣು ಪರೀಕ್ಷೆ ಇನ್ನೂ ಮುಂದುವರಿದಿದೆ.
ಪಾಕಿಸ್ತಾನದ ಪರಮಾಣು ಕಾರ್ಯಕ್ರಮವು 1971ರ ಇಂಡೋ-ಪಾಕ್ ಯುದ್ಧದ ನಂತರ ಜುಲ್ಫಿಕರ್ ಅಲಿ ಭುಟ್ಟೋ ಅವರ ನೇತೃತ್ವದಲ್ಲಿ ಆರಂಭವಾಯಿತು. ಭಾರತದ ಸಾಂಪ್ರದಾಯಿಕ ಸೈನ್ಯ ಶಕ್ತಿಯನ್ನು ಸಮತೋಲನಗೊಳಿಸಲು, 1980-90ರ ದಶಕಗಳಲ್ಲಿ ವಿದೇಶಿ ಸಹಾಯದೊಂದಿಗೆ ಗುಪ್ತ ಪರೀಕ್ಷೆಗಳನ್ನು ನಡೆಸಿತು. 1998ರಲ್ಲಿ ಭಾರತದ ಪೊಖ್ರಾನ್-II ಟೆಸ್ಟ್‌ಗಳ ನಂತರ, ಪಾಕಿಸ್ತಾನವು ಚಗೈನಲ್ಲಿ ಐದು ಪರಮಾಣು ಸ್ಫೋಟಗಳನ್ನು ನಡೆಸಿ ತನ್ನ ನ್ಯೂಕ್ಲಿಯರ್ ಸಾಮರ್ಥ್ಯವನ್ನು ಘೋಷಿಸಿತು.
ಆದರೂ, ಪಶ್ಚಿಮ ಗುಪ್ತಚರ ಸಂಸ್ಥೆಗಳು ಮತ್ತು ಸ್ವತಂತ್ರ ತಜ್ಞರು, 1998ಕ್ಕೆ ಮುಂಚೇ ಪಾಕಿಸ್ತಾನವು ಶಸ್ತ್ರಾಸ್ತ್ರ-ಗುಣದ ಯುರೇನಿಯಂ ಸಂಗ್ರಹ ಮಾಡಿಕೊಂಡು ಸಬ್‌ಕ್ರಿಟಿಕಲ್ ಟೆಸ್ಟ್‌ಗಳನ್ನು ನಡೆಸಿತು ಎಂದು ನಂಬುತ್ತಾರೆ. ಇದೀಗ ಟ್ರಂಪ್ ಅವರ ಹೇಳಿಕೆಯು ಈ ಚಟುವಟಿಕೆಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ, ವಿಶೇಷವಾಗಿ ಭಯೋತ್ಪಾದಿ ಗುಂಪುಗಳ ಸಾವಿರದಲ್ಲಿ ಪಾಕ್ ನ್ಯೂಕ್ಲಿಯರ್ ಭದ್ರತೆಯನ್ನು ಪ್ರಶ್ನಿಸುತ್ತದೆ.
ಇದನ್ನೂ ಓದಿ | ರಿಲಯನ್ಸ್ ಗ್ರೂಪ್‌ಗೆ ತಟ್ಟಿದ ಇಡಿ ಬಿಸಿ: 3,084 ಕೋಟಿ ರೂ ಆಸ್ತಿ ಜಪ್ತಿ!
ಭಾರತಕ್ಕೆ ಈ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಮೇ 2025ರಲ್ಲಿ ಇಂಡೋ-ಪಾಕ್ ಸಂಘರ್ಷದ ಸಂದರ್ಭದಲ್ಲಿ, ಟ್ರಂಪ್ ಅವರು ತಮ್ಮ ವ್ಯಾಪಾರ ಮತ್ತು ಟ್ಯಾರಿಫ್ ನೀತಿಗಳ ಮೂಲಕ “ನ್ಯೂಕ್ಲಿಯರ್ ಯುದ್ಧ” ತಡೆದೆ ಎಂದು ಹೇಳಿದ್ದಾರೆ. “ಇಂಡಿಯಾ ಪಾಕಿಸ್ತಾನೊಂದಿಗೆ ನ್ಯೂಕ್ಲಿಯರ್ ಯುದ್ಧಕ್ಕೆ ಹೊರಟಿತ್ತು. ನಾನು ಹಸ್ತಕ್ಷೇಪ ಮಾಡದಿದ್ದರೆ ಲಕ್ಷಾಂತರ ಜನರು ಸಾಯುತಿದ್ದರು,” ಎಂದು ಹೇಳಿದರು.







