“ಹೊನ್ನಾವರ ಬಂದರು ಯೋಜನೆ ಕೈ ಬಿಡಬೇಕು” : ಮೇಧಾ ಪಾಟ್ಕರ್ 

ಪರಿಸರ ಮತ್ತು ಸ್ಥಳೀಯ ಸಮುದಾಯಗಳ ಜೀವನಾಧಾರಕ್ಕೆ ಧಕ್ಕೆ ಮಾಡುವ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರ್ಕಾರವು ತಕ್ಷಣ ಕೈಬಿಡಬೇಕು. ಅಲ್ಲದೆ, ಹೋರಾಟಗಾರರ ಮೇಲೆ ದಾಖಲಿಸಲಾದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಒತ್ತಾಯಿಸಿದ್ದಾರೆ.
Medha Patkar

ಪರಿಸರ ಮತ್ತು ಸ್ಥಳೀಯ ಸಮುದಾಯಗಳ ಜೀವನಾಧಾರಕ್ಕೆ ಧಕ್ಕೆ ಮಾಡುವ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರ್ಕಾರವು ತಕ್ಷಣ ಕೈಬಿಡಬೇಕು. ಅಲ್ಲದೆ, ಹೋರಾಟಗಾರರ ಮೇಲೆ ದಾಖಲಿಸಲಾದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಒತ್ತಾಯಿಸಿದ್ದಾರೆ. ಈ ಯೋಜನೆಯು ಕರ್ನಾಟಕದ ಪಶ್ಚಿಮ ಘಟ್ಟಗಳ ಸಂವೇದನಶೀಲ ಕರಾವಳಿಯನ್ನು ನಾಶಪಡಿಸುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಂಗಳವಾರ (ನ.4) ನಗರದ ಪ್ರೆಸ್ ಕ್ಲಬ್‌ನಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಪ್ರೈಡ್ ಫಾರ್ ಫ್ಯೂಚರ್-ಕರ್ನಾಟಕ (ಎಫ್‌ಎಫ್‌ಎಫ್-ಕೆ) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಸ್ಥೆಗಳು ಹೊನ್ನಾವರ ಬಂದರು ಯೋಜನಾ ವಿರೋಧಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿ, ಮಾತನಾಡಿದ ಮೇಧಾ ಪಾಟ್ಕರ್‌, ಈ ಯೋಜನೆಯಿಂದಾಗಿ ಜನರು 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಪರಿಸರ ಅನುಮತಿಯನ್ನು ಹಿಂಪಡೆಯುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ, ಏಕೆಂದರೆ ಈ ಯೋಜನೆಯು ಕಾನೂನುಗಳನ್ನು ಸರಿಯಾಗಿ ಪಾಲಿಸದೆ ಮುಂದುವರಿದಿದೆ ಎಂದು ಹೇಳಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊನ್ನಾವರಕ್ಕೆ ಭೇಟಿ ನೀಡಿ ಒಂದು ವೇಳೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ನಿಲ್ಲಿಸುತ್ತೇವೆ ಎಂದು ಭರವಸೆ ನೀಡಿ ಈಗ ಹುಸಿಗೊಳಿಸಿದ್ದಾರೆ. ಜೊತೆಗೆ ಮಂಕಾಳದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಕಾಳ ವೈದ್ಯ ಕೂಡ ಈ  ಹೊನ್ನಾವರ ಬಂದರು ಯೋಜನೆಯನ್ನು ವಿರೋಧಿಸುತ್ತಿದ್ದ ಮೀನುಗಾರ ಸಮುದಾಯಕ್ಕೆ “ಯಾವುದೇ ಕಾರಣಕ್ಕೂ ಈ ಯೋಜನೆಗೆ ಅವಕಾಶ ನೀಡುವುದಿಲ್ಲ” ಎಂದು ಕುರುಡು ಭರವಸೆ ನೀಡಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದು ಸರ್ಕಾರ ರೂಪಿಸಿದ ನಂತರ ಈ ವಿಷಯದಲ್ಲಿ ಮೌನ ವಹಿಸಿರುವುದು ವಿಷಾದ ಎಂದು ಪಾಟ್ಕರ್ ಆಕ್ಷೇಪಿಸಿದರು. ” ಯೋಜನೆಗಳು ಅಭಿವೃದ್ಧಿ ಹೆಸರಿನಲ್ಲಿ ಜನರ ಬದುಕು ಕಸಿಯಲ್ಪಡುತ್ತಿದೆ ಎನ್ನುವುದಕ್ಕೆ  ಹೊನ್ನಾವರ ಯೋಜನೆಯೇ ಸ್ಪಷ್ಟ ಉದಾಹರಣೆ” ಎಂದು ಅವರು ಹೇಳಿದರು.    

ಯೋಜನೆಗೆ ಸಂಬಂಧಿಸಿದಂತೆ ಪರಿಸರ ಇಲಾಖೆಯ ಅನುಮತಿಗಳು ಸರಿಯಾಗಿ ಪಡೆಯಲಾಗಿಲ್ಲ. ಸಾಮಾಜಿಕ-ಪರಿಸರ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನವೂ ಇಲ್ಲ. ರಸ್ತೆ ನಿರ್ಮಾಣಕ್ಕಾಗಿ ನಡೆದ ಭೂಮಾಪನ ವಿರೋಧಿಸಿದ್ದಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಿ, 45 ಜನರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ದೌರ್ಜನ್ಯದ ವಿರುದ್ಧ ಸುಮಾರು 40 ಮಂದಿ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೂ ಯತ್ನ ಮಾಡಿದ್ದರು ಎಂದು ಅವರು ಹೇಳಿದರು. ಮೀನು ಒಣಗಿಸುವ ಸೌಲಭ್ಯಗಳನ್ನು ನೆಲಸಮ ಮಾಡಲಾಗಿದ್ದು, ವಿಶೇಷವಾಗಿ ಮಹಿಳಾ ಮೀನುಗಾರರು ಒಣಮೀನು ವ್ಯಾಪಾರದಲ್ಲಿ ಅವಲಂಬಿತರಾಗಿದ್ದಾರೆ. 2019ರಿಂದ ಮೀನು ಒಣಗಿಸುವ ಭೂಮಿಗೆ ಬೇಲಿ ಹಾಕಿ ಅವರ ಉದ್ಯೋಗವನ್ನು ಕಸಿಯಲಾಗಿದೆ ಎಂದು ಪಾಟ್ಕರ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಮಗೆ ನಂಬಿಕೆ ಇದೆ. ಈ ಸಮಸ್ಯೆಯನ್ನು ಆದ್ಯತೆಯೆಂದು ಪರಿಗಣಿಸಿ, ಯೋಜನೆಯನ್ನು ಕೈಬಿಡುವುದು ಹಾಗೂ ಸ್ಥಳೀಯರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವುದಾಗಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಪಾಟ್ಕರ್ ಆಶಾಭಾವ ವ್ಯಕ್ತಪಡಿಸಿದರು. ಇದೇ ರೀತಿ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಯು ಆದಿವಾಸಿಗಳು, ಮೀನುಗಾರರು, ಪಶ್ಚಿಮ ಘಟ್ಟಗಳು ಮತ್ತು ಅಂತರ್ಜಲ ಸಂಪನ್ಮೂಲಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಸುಮಾರು 16,000 ಮರಗಳು ನಾಶವಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಬೇಡಿಕೆಗಳು/ ಮನವಿ:

  • ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಚ್‌ಪಿಪಿಎಲ್)ಗೆ ನೀಡಿರುವ ಪರಿಸರ ಅನುಮತಿಯನ್ನು ಹಿಂಪಡೆಯಬೇಕು.
  • ಹೊಸ ಸಾಮಾಜಿಕ-ಪರಿಸರ ಪರಿಣಾಮ ಪ್ರಕ್ರಿಯೆಯನ್ನು ಆರಂಭಿಸಬೇಕು.
  • ರಸ್ತೆ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.
  • ಟೊಂಕ 1 ಮತ್ತು 2 ಪ್ರದೇಶಗಳಲ್ಲಿ ವಾಸಸ್ಥಳ ಮತ್ತು ಉದ್ಯೋಗ ಸಮೀಕ್ಷೆ ನಡೆಸಬೇಕು. 
  • ಮೀನು ಒಣಗಿಸುವ ಭೂಮಿಗೆ ಪ್ರವೇಶ ಕಲ್ಪಿಸಬೇಕು. 
  • ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ರಾಜ್ಯ ತೀರಾ ಭದ್ರತಾ ವಲಯ ನಿರ್ವಹಣಾ ಪ್ರಾಧಿಕಾರ (ಸಿಆರ್‌ಝೆಡ್) ಮತ್ತು ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರದ ಅನುಮತಿಗಳನ್ನು ಪುನರ್‌ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ | ಶರಾವತಿ ಪಂಪ್‌ ಸ್ಟೋರೇಜ್ ಯೋಜನೆ| ಸಾಗರದಲ್ಲಿ ಜನಾಕ್ರೋಶ: ಪರಿಸರ-ರೈತರ ಸತ್ಯಾಗ್ರಹ

ಈ ಸಂದರ್ಭದಲ್ಲಿ ಮಾತನಾಡಿದ ಮೀನುಗಾರಿಕೆ ಕಾರ್ಮಿಕರ ಸಂಘದ ಅಧ್ಯಕ್ಷರಾದ ರಾಜೇಶ್ ತಾಂಡೇಲ್, “15 ವರ್ಷಗಳ ಈ ಹೋರಾಟದಲ್ಲಿ ಸುಳ್ಳು ಪ್ರಕರಣಗಳು, ಜೈಲು ಶಿಕ್ಷೆಗಳು ನಮ್ಮ ಜೀವನ ಹಾಳು ಮಾಡಿವೆ. ಇದರಿಂದಾಗಿ ನನ್ನ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ” ಎಂದು ಹೇಳಿದರು. ಸಂತ್ರಸ್ತರಾದ ರಿಹಾನಾ ಮತ್ತು ಮುಹಮ್ಮದ್ ಕೋಯಾ ಮಾತನಾಡಿ “ಮೀನುಗಾರಿಕೆ ನಮ್ಮ ಜೀವನಾಡಿ. ನಮ್ಮ ನೆಲವನ್ನು ಕಸಿಯುತ್ತಿದ್ದಾರೆ. ಪೊಲೀಸ್ ಮತ್ತು ಬಂದರು ಅಧಿಕಾರಿಗಳ ಕಿರುಕುಳ ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದರು.  

ಈ ಯೋಜನೆಯು ಸ್ಥಳೀಯ ಮೀನುಗಾರರ ಉದ್ಯೋಗ, ಜೈವಿಕ ವೈವಿಧ್ಯ ಮತ್ತು ಕರಾವಳಿ ಪರಿಸರಕ್ಕೆ ಬೆಂಕಿಯಂತೆ ಎಂದು ಪಾಟ್ಕರ್ ಹೇಳಿದ್ದು, ಸರ್ಕಾರವು ಜನಕೇಂದ್ರಿತ ಅಭಿವೃದ್ಧಿಯನ್ನು ಆಯ್ಕೆಮಾಡಬೇಕು ಎಂದು ಕರೆ ನೀಡಿದರು.

 

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »