ಬಿಹಾರ್‌: ಮತ ಸೆಳೆಯಲು ರಾಜಕೀಯ ಪಕ್ಷಗಳ ಗ್ಯಾರಂಟಿಗಳ ಸುರಿಮಳೆ

ಬಿಹಾರ್ ವಿಧಾನಸಭೆ ಚುನಾವಣೆ 2025ರಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ಮತ ಸೆಳೆಯಲು ಭಾರಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿವೆ. ಮಹಿಳೆಯರಿಗೆ ₹10,000 ರಿಂದ ₹30,000 ವರೆಗೆ ನೆರವು, ರೈತರಿಗೆ ಬೋನಸ್, ಉದ್ಯೋಗ ಭರವಸೆ. ಈ ಎಲ್ಲಾ ವಾಗ್ದಾನಗಳ ಹಿಂದಿನ ಸತ್ಯವೇನು?
nda vs india alliance
ಚಿತ್ರ ಕೃಪೆ : NDTV

ಬಿಹಾರದಲ್ಲಿ ಸುಮಾರು 15ವರ್ಷದಿಂದ ಆಡಳಿತದಲ್ಲಿರುವ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರ, ಮಹಿಳಾ ಉದ್ಯಮಿಗಳಿಗೆ ₹10,000 ನೆರವು ಮತ್ತು ವಿಸ್ತರಣೆಗೆ ₹2 ಲಕ್ಷ ಹೆಚ್ಚುವರಿ ಸಹಾಯ ಎಂಬ ಭರವಸೆಗಳನ್ನು ನೀಡಿದೆ. ಇದನ್ನು ನೋಡಿ ಐಎನ್‌ಡಿಐಎ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾದ ತೇಜಸ್ವಿಯಾದವ್‌ರವರು 30,000 ನೀಡುವುದಾಗಿ ಘೋಷಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ 2025ರ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. ಇದರ ನಡುವೆ ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್ ಮೈತ್ರಿಕೂಟಗಳು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಮೂಲಕ ಮತಗಳನ್ನು ಆಕರ್ಷಿಸುವ ತಂತ್ರಗಾರಿಕೆಯನ್ನು ಉಪಯೋಗಿಸುತ್ತಿದ್ದಾರೆ. 

ಜಿದ್ದಿಗೆ ಬಿದ್ದು ನಾ ಮುಂದು ತಾ ಮುಂದು ಎಂದು ಮತದಾರರಿಗೆ ಹುಸಿ ಭರವಸೆಗಳನ್ನು ನೀಡುವುದರಲ್ಲಿ 2 ಮೈತ್ರಿಕೂಟಗಳು ನಿರತವಾಗಿವೆ. ಇದರಿಂದಾಗಿ ಮುಂದೆ ರಾಜ್ಯ ಮತ್ತು ರಾಜ್ಯದ ಜನರ ಮೇಲಾಗುವ ಒಟ್ಟು ಪರಿಣಾಮಗಳು ಅರಿತುಕೊಳ್ಳಬೇಕು. ಗ್ಯಾರಂಟಿ ಯೋಜನೆಗಳಿಂದ ಮತ ಸೆಳೆಯುವ ತಂತ್ರವನ್ನು ಎಲ್ಲಾ ರಾಜಕೀಯ ಪಕ್ಷಗಳು ಬಿಡಬೇಕು.

ಎನ್‌ಡಿಎಯ ‘ಸಂಕಲ್ಪ ಪತ್ರ’ದಲ್ಲಿ 1 ಕೋಟಿ ಉದ್ಯೋಗಗಳು, ‘ಲಕ್ಷಪತಿ ದಿದಿಗಳು’ ಯೋಜನೆ, ಮಹಿಳಾ ಉದ್ಯಮಿಗಳಿಗೆ ₹10,000 ನೆರವು ಮತ್ತು ವಿಸ್ತರಣೆಗೆ ₹2 ಲಕ್ಷ ಹೆಚ್ಚುವರಿ ಸಹಾಯ ಎಂಬ ಭರವಸೆಗಳಿವೆ. ಇದೇ ರೀತಿ, ತೇಜಸ್ವಿ ಯಾದವ್ ನೇತೃತ್ವದ ಇಂಡಿಯಾ ಬ್ಲಾಕ್ MSPಗೆ ಭತ್ತಕ್ಕೆ ₹300, ಗೋಧಿಗೆ ₹400 ಬೋನಸ್, ಮಹಿಳೆಯರಿಗೆ ₹30,000 ಏಕಕಾಲೀನ ನೆರವು, ಹಳ್ಳಿ ವಿದ್ಯುತ್ ಉಚಿತಗೊಳಿಸುವುದು, ಉಚಿತ ವೈಫೈ, ಮತ್ತು ಗ್ರಾಮೀಣ ಯುವಕರಿಗೆ ‘ಲಾಡ್ ಬಿಸ್ಕಿಟ್’ ಉದ್ಯಮಕ್ಕೆ ₹25,000 ಸಹಾಯ ಎಂಬ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಈ ಎಲ್ಲಾ ಭರವಸೆಗಳು ಕೇವಲ ಚುನಾವಣಾ ಕಪಟ ಚಿತ್ರಣಗಳಾಗಿವೆ. ಅವುಗಳ ಹಿಂದಿನ ರಾಜಕೀಯ ಉದ್ದೇಶವನ್ನು ಜನ ಗಮನಿಸಬೇಕಾಗಿದೆ. ನೀಡಿರುವ ಯೋಜನೆಗಳನ್ನು ಈಡೇರಿಸಲು ಬಿಹಾರಕ್ಕೆ ಹಣ ಎಲ್ಲಿಂದ ಬರುತ್ತದೆ ಎನ್ನುವುದನ್ನು ಬಿಹಾರದ ಮತದಾರರು ಸೂಕ್ಷ್ಮವಾಗಿ ನೋಡಬೇಕು.

ನಿತೀಶ್‌ ಕುಮಾರ್‌ರ ಗ್ಯಾರಂಟಿ ಯೋಜನೆಗಳು

ಮೊದಲು ಎನ್‌ಡಿಎಯ ‘ಸಂಕಲ್ಪ ಪತ್ರ’ವನ್ನು ನೋಡೋಣ. ನಿತೀಶ್ ಕುಮಾರ್‌ರ ಆಡಳಿತದಲ್ಲಿ ಬಿಹಾರದ ನಿರುದ್ಯೋಗ ಸಮಸ್ಯೆ, ಬಡತನ ಮತ್ತು ಕೃಷಿ ಸಾಲಗಳು ಹೆಚ್ಚಾಗಿವೆ. ಈಗ 1 ಕೋಟಿ ಉದ್ಯೋಗಗಳು ಎಂದು ಹೇಳುತ್ತಾರೆ, ಆದರೆ ಈಗಾಗಲೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ದೇಶಾದ್ಯಂತ 12 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು 2014ರಲ್ಲಿ ನೀಡಿ, 2024ರ ವೇಳೆಗೆ 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ದರವನ್ನು (8.3%) ತಂದಿದ್ದಾರೆ.

ಬಿಹಾರದಲ್ಲಿ 2023ರಲ್ಲಿ ನಿರುದ್ಯೋಗ ದರ 15.2% ಇದ್ದರೆ, ಈ 1 ಕೋಟಿ ಉದ್ಯೋಗಗಳು ಎಲ್ಲಿಂದ ಬರುತ್ತವೆ? ಇದು ಕೇವಲ ಚುನಾವಣೆ ಗಿಮಿಕ್‌ ಎಂದು ಸ್ಪಷ್ಟವಾಗಿ ಕಾಣುತ್ತಿದೆ. ‘ಲಕ್ಷಪತಿ ದಿಡಿ’ ಯೋಜನೆಯನ್ನು ಕೇಂದ್ರದಲ್ಲಿ ಈಗಾಗಲೇ ಜಾರಿಗೊಳಿಸುತ್ತಿದ್ದಾರೆ – ಆದರೆ ಬಿಹಾರದಲ್ಲಿ ಇದುವರೆಗೆ 1 ಲಕ್ಷಕ್ಕೂ ಕಡಿಮೆ ಮಹಿಳೆಯರು ಮಾತ್ರ ಲಾಭ ಪಡೆದಿದ್ದಾರೆ. ₹10,000 ಮತ್ತು ₹2 ಲಕ್ಷ ನೆರವು ಎಂಬುದು ಕಾಗದದ ಮೇಲಿರು ಭರವಸೆ ಮಾತ್ರ. ಇದನ್ನು ಜಾರಿಗೊಳಿಸಲು ಬೇಕಾದ ₹50,000 ಕೋಟಿ ಹಣ ಎಲ್ಲಿಂದ ಬರುತ್ತದೆ? ಬಿಹಾರದ ಬಜೆಟ್ ಗಾತ್ರ ₹2.8 ಲಕ್ಷ ಕೋಟಿ ಮಾತ್ರ. ಇದು ಆರ್ಥಿಕವಾಗಿ ಸಾಧ್ಯವಿಲ್ಲದ ಭರವಸೆಯಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ತೇಜಸ್ವಿ ಯಾದವ್‌ರ ಭರವಸೆಗಳು

ಇದೇ ರೀತಿ ತೇಜಸ್ವಿ ಯಾದವ್‌ರ ಭರವಸೆಗಳು ಎನ್‌ಡಿಎಗಿಂತಾ ಜೋರಾಗಿವೆ. MSPಗೆ ₹300 ಮತ್ತು ₹400 ಬೋನಸ್ ಎಂದರೆ, ಬಿಹಾರದಲ್ಲಿ ವಾರ್ಷಿಕ 1.5 ಕೋಟಿ ಮೆಟ್ರಿಕ್ ಟನ್ ಭತ್ತ ಮತ್ತು 2 ಕೋಟಿ ಮೆಟ್ರಿಕ್ ಟನ್ ಗೋಸು ಉತ್ಪಾದನೆಯಾಗುತ್ತದೆ. ಇದಕ್ಕೆ ಬೇಕಾದ ಬೋನಸ್ ಮೊತ್ತ ₹12,000 ಕೋಟಿ. ಆದರೆ ಬಿಹಾರದ ಕೃಷಿ ಬಜೆಟ್ ₹20,000 ಕೋಟಿ ಮಾತ್ರ. ಇದನ್ನು ಎಲ್ಲಿಂದ ತರ್ತಾರೆ? 2020ರಲ್ಲಿ ಆರ್‌ಜೆಡಿ ಅಧಿಕಾರದಲ್ಲಿದ್ದಾಗ ರೈತರಿಗೆ ಯಾವ ಬೋನಸ್ ನೀಡಿರಲಿಲ್ಲ. ಈಗ ಚುನಾವಣೆ ಬಂದ ಕೂಡಲೇ ₹30,000 ಮಹಿಳಾ ನೆರವು ನೀಡುವುದಾಗಿ ಹೇಳುತ್ತಿದ್ದಾರೆ. ಬಿಹಾರದಲ್ಲಿ 3.5 ಕೋಟಿ ಮಹಿಳಾ ಮತದಾರರಿದ್ದಾರೆ, ಇದಕ್ಕೆ ಬೇಕಾದ ₹1.05 ಲಕ್ಷ ಕೋಟಿ ಹಣ ಎಲ್ಲಿಂದ ತರ್ತಾರೆ ಇದು ಮತದಾರರಿಗೆ ಎಸೆದ ಬಲೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

‘ಲಾಡ್ ಬಿಸ್ಕಿಟ್’ ಯೋಜನೆಗೆ ₹25,000. ಇದು ಗ್ರಾಮೀಣ ಯುವಕರಿಗೆ ಉದ್ಯಮ ಆರಂಭಿಸಲು ಸಹಾಯ ಎಂದು ಹೇಳುತ್ತಾರೆ. ಆದರೆ ₹25,000ರಲ್ಲಿ ಯಂತ್ರ, ಕಚ್ಚಾ ಸಾಮಗ್ರಿ, ಮಾರುಕಟ್ಟೆ ಎಲ್ಲವನ್ನೂ ಮಾಡಬೇಕು. ಇದು ಅವೈಜ್ಞಾನಿಕ ಯೋಜನೆಯಾಗಿದೆ ಎನ್ನುವ ಮಾತು ಪ್ರಜ್ಞಾವಂತರ ವಲಯದಲ್ಲಿ ಕೇಳಿಬರುತ್ತಿದೆ. ಹಳ್ಳಿ ವಿದ್ಯುತ್ ಉಚಿತಗೊಳಿಸುವುದು – ಬಿಹಾರದಲ್ಲಿ 60% ಗ್ರಾಮಗಳಲ್ಲಿ 24 ಗಂಟೆ ವಿದ್ಯುತ್ ಇಲ್ಲ. ಉಚಿತ ಮಾಡಿದರೆ ಗುಣಮಟ್ಟ ಹೇಗೆ ಸುಧಾರಿಸುತ್ತದೆ? ಇದು ಕೇವಲ ಜನರ ದುಃಖವನ್ನು ಮರೆಮಾಚುವ ರಾಜಕೀಯ ಆಟವಾದಂತೆ ಕಾಣುತ್ತಿದೆ.

ಇದನ್ನೂ ಓದಿ | ವಕ್ಫ್ ತಿದ್ದುಪಡಿ ಕಾಯ್ದೆ ಕಸದ ಬುಟ್ಟಿಗೆ: ತೇಜಸ್ವಿ ಯಾದವ್‌ ಪ್ರತಿಜ್ಞೆ

ಎರಡೂ ಮೈತ್ರಿಕೂಟಗಳು ಒಂದೇ ನಾಣ್ಯದ ಎರಡು ಮುಖಗಳು. ಎನ್‌ಡಿಎ 10 ವರ್ಷಗಳಲ್ಲಿ ಏನೂ ಮಾಡದೆ ಈಗ 1 ಕೋಟಿ ಉದ್ಯೋಗ ಭರವಸೆ ನೀಡುತ್ತಿದೆ. ಇಂಡಿಯಾ ಬ್ಲಾಕ್ 2020ರಲ್ಲಿ ಅಧಿಕಾರದಲ್ಲಿದ್ದಾಗ ಏನೂ ಸಾಧನೆ ಮಾಡದೆ ಈಗ ₹12,000 ಕೋಟಿ ಬೋನಸ್ ಭರವಸೆ ನೀಡುತ್ತಿದೆ. ಇವೆಲ್ಲವೂ ಚುನಾವಣಾ ಗಿಮಿಕ್‌ಗಳು. ಬಿಹಾರದ ಜನರು ಈ ಬಾರಿ ಎಲ್ಲಾ ಭರವಸೆಗಳನ್ನು ನೋಡಿ ಯಾರಿಗೆ ಮತವನ್ನು ನೀಡಿದರೆ ನಿಜವಾದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಉದ್ಯೋಗಕ್ಕಾಗಿ  ಬಿಹಾರ ಬದಲಾವಣೆಯಗಲು ಸಾದ್ಯ ಎಂದು ಜಾಗೃತೆಯಿಂದ ಮತವನ್ನು ನೀಡಬೇಕಾಗಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »