ʻಹಿ-ಮ್ಯಾನ್‌ʼ ಖ್ಯಾತಿಯ ಬಾಲಿವುಡ್‌ ನಟ ಧರ್ಮೇಂದ್ರ ವಿಧಿವಶ

ಭಾರತೀಯ ಚಿತ್ರರಂಗದ ಅಪ್ರತಿಮ ನಟ, ಬಾಲಿವುಡ್‌ನ ‘ ಹಿ-ಮ್ಯಾನ್‌’ ಖ್ಯಾತಿಯ ಧರ್ಮೇಂದ್ರ ಇಂದು ಬೆಳಿಗ್ಗೆ ಮುಂಬೈಯ ಜೂಹು ನಿವಾಸದಲ್ಲಿ ನಿಧನರಾದರು. 
Dharmendra Death News
Bollywood Actor Dharmendra

ಭಾರತೀಯ ಚಿತ್ರರಂಗದ ಅಪ್ರತಿಮ ನಟ, ಬಾಲಿವುಡ್‌ನ ‘ ಹಿ-ಮ್ಯಾನ್‌’ ಖ್ಯಾತಿಯ ಧರ್ಮೇಂದ್ರ ಇಂದು (ನವೆಂಬರ್ 24, 2025) ಬೆಳಿಗ್ಗೆ ಮುಂಬೈಯ ಜೂಹು ನಿವಾಸದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. 

ಕಳೆದ ಕೆಲ ದಿನಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಅಕ್ಟೋಬರ್ 31ರಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 12ರಂದು ಆರೋಗ್ಯ ಸ್ಥಿರವಾದ ಸ್ಥಿತಿಗೆ ತಲುಪಿದ ನಂತರ ಮನೆಗೆ ಕರೆತರಲಾಗಿತ್ತು. ಆದರೆ ಇಂದು ಬೆಳಗಿನ ಜಾವ  ಅವರು ಕೊನೆಯ ಉಸಿರೆಳೆದರು.

1935 ಡಿಸೆಂಬರ್ 8ರಂದು ಪಂಜಾಬ್‌ನ ಫಗ್ವಾರ ಜಿಲ್ಲೆಯ ಸಾಹ್ನೇವಾಲ್‌ನಲ್ಲಿ ಶಾಲಾ ಶಿಕ್ಷಕ ಕೇವಲ್ ಕಿಶನ್ ಸಿಂಗ್ ದೇವಲ್ ಮತ್ತು ಸತ್ವಂತ್ ಕೌರ್ ದಂಪತಿಗಳ ಮಗನಾಗಿ ಜನಿಸಿದ ಧರ್ಮೇಂದ್ರ 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಆದರೆ ನಿಜವಾದ ಗುರುತಿಸಿಕೊಂಡಿದ್ದು ‘ಫೂಲ್ ಔರ್ ಪಥರ್’ (1966) ಮತ್ತು ‘ಆಯಾ ಸಾವನ್ ಝೂಮ್ ಕೆ’ (1969) ಚಿತ್ರಗಳ ಮೂಲಕ. ‘ಹಿ-ಮ್ಯಾನ್’ ಎಂಬ ಬಿರುದು ಅವರ ದೈಹಿಕ ಸೌಂದರ್ಯ ಮತ್ತು ಆಕ್ಷನ್ ದೃಶ್ಯಗಳಿಂದ ಬಂದಿದ್ದು, 1970-1980ರ ದಶಕದಲ್ಲಿ ಒಟ್ಟು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದರು.

‘ಶೋಲೆ’ (1975) ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗಿನ ‘ವೀರು-ಜೈ’ ಜೋಡಿಯಾಗಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದರು. ‘ಚುಪ್ಕೆ ಚುಪ್ಕೆ’, ‘ಸೀತಾ ಔರ್ ಗೀತಾ’, ‘ಧರ್ಮ ವೀರ್’, ‘ಯಮ್ಲಾ ಪಗ್ಲಾ ದೀವಾನ’ ಸೇರಿದಂತೆ ನೂರಾರು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದರು. ನಿರ್ಮಾಪಕರಾಗಿಯೂ ಯಶಸ್ವಿಯಾದ ಅವರು ಮಗ ಸನ್ನಿ ದೇವಲ್ ಅವರನ್ನು ‘ಬೇತಾಬ್’ (1983) ಮೂಲಕ ಸಿನಿ ರಂಗಕ್ಕೆ ಪರಿಚಯಿಸಿದರು.

ಇದನ್ನೂ ಓದಿ | ಧರ್ಮೇಂದ್ರ ನಿಧನ ಸುದ್ದಿ ಸುಳ್ಳು: ಕುಟುಂಬದಿಂದ ತೀವ್ರ ಆಕ್ಷೇಪ

2012ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 1997ರಲ್ಲಿ ಫಿಲ್ಮ್‌ಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಪುರಸ್ಕಾರ ಲಭಿಸಿತು. ಕೊನೆಯ ದಿನಗಳವರೆಗೂ ಸಕ್ರಿಯವಾಗಿದ್ದ ಅವರು 2023ರ ‘ರಾಕಿ ಔರ್ ರಾನಿ ಕಿ ಪ್ರೇಮ್ ಕಹಾನಿ’ ಮತ್ತು 2024ರ ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ ‘ಇಕ್ಕಿಸ್’ ಇನ್ನೇನು ಸಧ್ಯದಲ್ಲೇ ತೆರೆ ಕಾಣಲಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಮುಂದೆ ಓದಿ »

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಮುಂದೆ ಓದಿ »

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಮುಂದೆ ಓದಿ »