ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ತವರು ಅಂಗಳದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 2-0ನಿಂದ ವೈಟ್‌ವಾಶ್ ಆಗಿದೆ.
ರಿಷಭ್ ಪಂತ್ ನಾಯಕತ್ವದಲ್ಲಿ ನಡೆದ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಅಂಗಳದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 408 ರನ್‌ಗಳ ಅಂತರದಿಂದ ಸೋಲು ಕಂಡು, ದಕ್ಷಿಣ ಆಫ್ರಿಕಾದ ತೆಂಬಾ ಬವುಮಾ ನಾಯಕತ್ವದ ತಂಡಕ್ಕೆ ಸರಣಿ ಕೈವಶ ಮಾಡಿಕೊಡುವಂತೆ ಆಯಿತು. ಇದು ಭಾರತದ ಮನೆಯಂಗಳದ ಟೆಸ್ಟ್ ಸರಣಿಯಲ್ಲಿ ಅತ್ಯಂತ ದೊಡ್ಡ ಸೋಲು (ರನ್‌ಗಳಲ್ಲಿ) ಎಂದು ಕ್ರಿಕೆಟ್ ಇತಿಹಾಸದಲ್ಲಿ ನಿರ್ದಿಷ್ಟವಾಗಿ ದಾಖಲಾಗಿದೆ.
ಪಂದ್ಯದ 5ನೇ ದಿನದ ಮೊದಲ ಸೆಷನ್‌ನಲ್ಲೇ ಭಾರತದ ಉಳಿದ 8 ವಿಕೆಟ್‌ಗಳು ಕುಸಿಯುತ್ತಾ 140 ರನ್‌ಗಳಲ್ಲಿ ಆಲ್‌ಔಟ್ ಆಗಿ, 549 ರನ್‌ಗಳ ಗುರಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಸಾಯಿ ಸುದರ್ಶನ್ (32) ಮತ್ತು ರವಿಂದ್ರ ಜಡೇಜಾ (28) ಸ್ಥಿರತೆ ತೋರಿದರೂ, ಸೈಮನ್ ಹಾರ್ಮರ್‌ನ ಮಾರಕ ಬೌಲಿಂಗ್(6 ವಿಕೆಟ್)ನಿಂದ ಭಾರತದ ಬ್ಯಾಟಿಂಗ್ ಕುಸಿಯಿತು. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿ ರನ್‌ಗಳಲ್ಲಿ ಅತ್ಯಂತ ದೊಡ್ಡ ಸೋಲಾಗಿದೆ, ಹಿಂದಿನ ದಾಖಲೆಯಾಗಿದ್ದ 342 ರನ್‌ಗಳ ಸೋಲು (ಆಸ್ಟ್ರೇಲಿಯಾ ವಿರುದ್ಧ, ನಾಗ್‌ಪುರ, 2004) ಈ ಹೀನಾಯ ದಾಖಲೆಯನ್ನು ಇವತ್ತು ಮುರಿದಿದ್ದಾರೆ.
ಇದನ್ನೂ ಓದಿ | ಸ್ಮೃತಿ ಮಂಧಾನ: ತಾಯಿಯ ಹೃದಯದಲ್ಲಿ ಸ್ಮೃತಿಯ ಶತಕ
ಸರಣಿಯ ಮೊದಲ ಪಂದ್ಯದಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ 30 ರನ್‌ಗಳಿಂದ ಸೋತ ನಂತರ, ಗುವಾಹಟಿಯಲ್ಲಿ ಇನ್ನಷ್ಟು ಕಳಪೆ ಆಟ ಆಡಿ, ಮನೆಯ ನೆಲದಲ್ಲಿ 12 ವರ್ಷಗಳ ನಂತರ (2014ರಲ್ಲಿ ಇಂಗ್ಲೆಂಡ್ ವಿರುದ್ಧ) ಮತ್ತೊಂದು ವೈಟ್‌ವಾಶ್ ಆಗಿದ್ದು, ಕೋಚ್ ಗೌತಮ್ ಗಂಭೀರ್ ಅವರ ನೇತೃತ್ವದ ಎರಡನೇ ಮನೆಯ ಸರಣಿ ಸೋಲು (2024ರಲ್ಲಿ ನ್ಯೂಜಿಲೆಂಡ್ ವಿರುದ್ಧ 0-3). ದಕ್ಷಿಣ ಆಫ್ರಿಕಾದ ಈ ಗೆಲುವು ಅವರಿಗೆ ಭಾರತದ ನೆಲದಲ್ಲಿ 25 ವರ್ಷಗಳ ನಂತರ (2000ರ ನಂತರ) ಮೊದಲ ಸರಣಿ ಜಯ ಇದಾಗಿದೆ.







