ಏಕಸ್ವಾಮ್ಯದ ಅಪಾಯದಂಚಿನಲ್ಲಿ ಭಾರತ: ಇಂಡಿಗೋ ಬಿಕ್ಕಟ್ಟು ಸರ್ಕಾರಕ್ಕೊಂದು ಎಚ್ಚರಿಕೆಯ ಗಂಟೆ

"ಒಂದು ದೇಶದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯೇ ಆ ದೇಶದ ಬೆನ್ನೆಲುಬು" ಆದರೆ, ಆ ಬೆನ್ನೆಲುಬೆ ಮುರಿದುಬೀಳುವ ಹಂತದಲ್ಲಿದೆಯೇ ಎಂಬ ಆತಂಕ ಈಗ ಎಲ್ಲರಿಗೂ ಕಾಡುತ್ತಿದೆ.
indigo crisis exposes india
ಸಾಂದರ್ಭಿಕ ಎಐ ಚಿತ್ರ

“ಒಂದು ದೇಶದ ಸಾರಿಗೆ ವ್ಯವಸ್ಥೆ ಮತ್ತು ಸಂಪರ್ಕ ವ್ಯವಸ್ಥೆ ಆ ದೇಶದ ಬೆನ್ನೆಲುಬು.” ಆದರೆ, ಆ ಬೆನ್ನೆಲುಬೆ ಮುರಿದುಬೀಳುವ ಹಂತದಲ್ಲಿದೆಯೇ ಎಂಬ ಆತಂಕ ಈಗ ಪ್ರತಿಯೊಬ್ಬ ಭಾರತೀಯನನ್ನೂ ಕಾಡುತ್ತಿದೆ. 

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ’ (IndiGo) ಕಳೆದ 7 ದಿನಗಳಿಂದ ತನ್ನ ಸೇವೆಯಲ್ಲಿ ವ್ಯತ್ಯಯ ಅನುಭವಿಸುತ್ತಿದೆ. ವಿಮಾನಗಳು ಹಾರುತ್ತಿಲ್ಲ, ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ, ಇದಕ್ಕಿಂತಲೂ ಭಯಾನಕವಾದ ಸತ್ಯವೊಂದನ್ನು ಈ ಘಟನೆ ಅನಾವರಣಗೊಳಿಸಿದೆ. ಅದೆಂದರೆ, ಭಾರತ ಸರ್ಕಾರ ಖಾಸಗಿ ಕಂಪನಿಗಳ ಮೇಲೆ ಹೊಂದಿರುವ ಅತಿಯಾದ ಅವಲಂಬನೆ ಮತ್ತು ‘ಏಕಸ್ವಾಮ್ಯ’ (Monopoly) ಸೃಷ್ಟಿಸಿರುವ ಅಪಾಯ.

ಭಾರತದ ಆಕಾಶದಲ್ಲಿ ಹಾರಾಡುವ ವಿಮಾನಗಳಲ್ಲಿ ಶೇ.65 ರಷ್ಟು ಪಾಲು ಇಂಡಿಗೋ ಸಂಸ್ಥೆಯದ್ದೇ ಆಗಿದೆ. ಯಾವಾಗ ಒಂದು ಸಂಸ್ಥೆ ಇಷ್ಟೊಂದು ಬೃಹತ್ ಪ್ರಮಾಣದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತದೆಯೋ, ಆಗ ಆ ಸಂಸ್ಥೆಗೆ ಬರುವ ಸಣ್ಣ ಜ್ವರವೂ ಇಡೀ ದೇಶವನ್ನೇ ರೋಗಗ್ರಸ್ತವಾಗಿಸುತ್ತದೆ. ಕಾಕತಾಳೀಯವೋ ಅಥವಾ ಪೂರ್ವನಿಯೋಜಿತವೋ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದ ದಿನದಂದೇ ಈ ಬಿಕ್ಕಟ್ಟು ಉತ್ತುಂಗಕ್ಕೆ ಏರಿತ್ತು. ವಿಶ್ವದ ಪ್ರಬಲ ನಾಯಕನ ಎದುರು ಭಾರತದ ಸಾರಿಗೆ ವ್ಯವಸ್ಥೆ ಕುಸಿದು ಬಿದ್ದಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಮಾಡಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಇದೊಂದು ಸಾಮಾನ್ಯ ತಾಂತ್ರಿಕ ದೋಷವಲ್ಲ. ಇದರ ಹಿಂದೆ ಅಮೆರಿಕದ ‘ಡೀಪ್ ಸ್ಟೇಟ್’ (Deep State) ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಭಾರತ ಮತ್ತು ರಷ್ಯಾ ಸಂಬಂಧವನ್ನು ಸಹಿಸದ ಶಕ್ತಿಗಳು, ಭಾರತವನ್ನು ಅಸ್ಥಿರಗೊಳಿಸಲು ಇಂತಹದೊಂದು ಷಡ್ಯಂತ್ರ ನಡೆಸಿವೆಯೇ ಎಂಬ ಅನುಮಾನ ಮೂಡಿದೆ. ಆದರೆ, ಪ್ರಶ್ನೆ ಇರುವುದು ಬಾಹ್ಯ ಶಕ್ತಿಗಳ ಬಗ್ಗೆ ಅಲ್ಲ, ನಮ್ಮ ಆಂತರಿಕ ದೌರ್ಬಲ್ಯದ ಬಗ್ಗೆ. ಒಂದೇ ಸಂಸ್ಥೆಯ ಮೇಲೆ ಇಷ್ಟೊಂದು ಅವಲಂಬನೆ ಏಕೆ?

ಮುಂದೆ ಟೆಲಿಕಾಂ ವಲಯವೇ ಉದಾಹರಣೆಯಾಗಬಹುದಾ?

ಇಂಡಿಗೋ ಬಿಕ್ಕಟ್ಟು ಕೇವಲ ವಿಮಾನಯಾನಕ್ಕೆ ಸೀಮಿತವಲ್ಲ, ಇದು ಮುಂಬರುವ ಅಪಾಯಗಳ ಮುನ್ಸೂಚನೆ. ಇಂದು ಟೆಲಿಕಾಂ (ದೂರಸಂಪರ್ಕ) ವಲಯವನ್ನು ನೋಡಿ. ಅಲ್ಲಿರುವುದು ಕೇವಲ ಎರಡು ಪ್ರಮುಖ ಸ್ಪರ್ದಿಗಳು. ಜಿಯೋ ಮತ್ತು ಏರ್‌ಟೆಲ್ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಅನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ.

ಊಹಿಸಿಕೊಳ್ಳಿ, ಒಂದು ವೇಳೆ ನಾಳೆ ಬೆಳಿಗ್ಗೆ ಜಿಯೋ ಮತ್ತು ಏರ್‌ಟೆಲ್ ಸರ್ವರ್‌ಗಳು ಹೀಗೆಯೇ ಸ್ಥಗಿತಗೊಂಡರೆ ಭಾರತದ ಕಥೆ ಏನಾಗಬಹುದು?

  • ಕೇವಲ ಫೋನ್ ಕರೆಗಳಲ್ಲ, ಇಡೀ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುತ್ತದೆ.
  • ಯುಪಿಐ ಪಾವತಿಗಳು ನಿಲ್ಲುತ್ತವೆ, ವ್ಯಾಪಾರ-ವಹಿವಾಟು ಸ್ತಬ್ಧವಾಗುತ್ತದೆ.
  • ಇಂಟರ್ನೆಟ್ ಇಲ್ಲದೆ ಆಸ್ಪತ್ರೆ, ರೈಲ್ವೆ, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.
    ಈ ಎರಡು ಕಂಪನಿಗಳು ನಿರ್ಧರಿಸಿದರೆ ಇಡೀ ಭಾರತವನ್ನು ಕತ್ತಲೆಯಲ್ಲಿ ಇಡಬಲ್ಲವು. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತಹುದ್ದಲ್ಲ.

ಸರ್ಕಾರದ ಜುಟ್ಟು ಬಂಡವಾಳಶಾಹಿಗಳ ಕೈಯಲ್ಲಿ:

ಕೇಂದ್ರ ಸರ್ಕಾರದ ನೀತಿಗಳು ‘ಆತ್ಮನಿರ್ಭರ‘ ಭಾರತದ ಬದಲು ‘ಕಾರ್ಪೊರೇಟ್ ನಿರ್ಭರ’ ಭಾರತವನ್ನು ಸೃಷ್ಟಿಸುತ್ತಿವೆ. ಯಾವಾಗ ಸರ್ಕಾರವು ತನ್ನ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕಡೆಗಣಿಸಿ, ಕೆಲವೇ ಕೆಲವು ಉದ್ಯಮಿಗಳಿಗೆ ಮಣೆ ಹಾಕುತ್ತದೆಯೋ, ಆಗ ಸರ್ಕಾರದ ನಿಯಂತ್ರಣ ತಪ್ಪುತ್ತದೆ.

“ಸರ್ಕಾರದ ಜುಟ್ಟು ಈಗ ಬಂಡವಾಳಶಾಹಿಗಳ ಕೈಯಲ್ಲಿದೆ,” ಎಂದು ಹೇಳಿದರೆ ತಪ್ಪಾಗಲಾರದು. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಮಸೂದೆಗಳನ್ನು ಜಾರಿಗೆ ತರಬಹುದು, ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಶಕ್ತಿ ಕಾರ್ಪೊರೇಟ್‌ಗಳ ಕೈಯಲ್ಲಿದೆ. ಅವರು ಹೇಳಿದಂತೆ ಸರ್ಕಾರ ಕುಣಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದೇ ಈಗ ಇಂಡಿಗೊ ಮಾಡಿದೆ.

ಇದು ಎಚ್ಚೆತ್ತುಕೊಳ್ಳುವ ಸಮಯ:

ಸರ್ಕಾರ ಈಗಲಾದರೂ ಕಣ್ತೆರೆಯಬೇಕಿದೆ. ಏಕಸ್ವಾಮ್ಯಕ್ಕೆ ಕಡಿವಾಣ ಹಾಕುವ ಸಮಯ: ಯಾವುದೇ ವಲಯದಲ್ಲಿ ಒಂದೇ ಕಂಪನಿಯ ಪ್ರಾಬಲ್ಯ ಶೇ.30-40ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದು ಸರ್ಕಾರದ ಯಾವುದೆ ಆದೇಶವನ್ನು ಪಾಲಿಸುವುದಿಲ್ಲ. ಆಗ ಜನಸಾಮಾನ್ಯರೂ ಕೂಡಾ ಅದಕ್ಕೆ ಹೊಂದಿಕೊಂಡಿರುತ್ತಾರೆ.

ಇದನ್ನೂ ಓದಿ | ರಷ್ಯಾ ಅಧ್ಯಕ್ಷರ ಭೇಟಿ| ವಿಪಕ್ಷಗಳಿಗೆ ಆಹ್ವಾನ ಇಲ್ಲ ಅವಕಾಶ, ಈಗ ವಿವಾದ

ಸಾರ್ವಜನಿಕ ವಲಯದ ಪುನಶ್ಚೇತನ: ಬಿಎಸ್‌ಎನ್‌ಎಲ್, ಏರ್ ಇಂಡಿಯಾದಂತಹ (ಈಗ ಖಾಸಗಿಯಾಗಿದೆ) ಸಂಸ್ಥೆಗಳಿಗೆ ಪರ್ಯಾಯವಾಗಿ ಸರ್ಕಾರಿ ಸ್ವಾಮ್ಯದ ಅಥವಾ ಸಣ್ಣ ಪ್ರಮಾಣದ ಸ್ಪರ್ಧಿಗಳಿಗೆ ಸಮಾನ ಅವಕಾಶ ನೀಡಬೇಕು.

ಬಂಡವಾಳಶಾಹಿಗಳ ಹಿತಾಸಕ್ತಿಗಿಂತ ದೇಶದ ಭದ್ರತೆ ಮತ್ತು ಜನರ ಹಿತಾಸಕ್ತಿ ಮುಖ್ಯವಾಗಬೇಕು. ಇಂಡಿಗೋ ವಿಮಾನಗಳು ಇಂದು ನೆಲಕ್ಕಿಳಿದಿವೆ, ನಾಳೆ ದೇಶದ ಆರ್ಥಿಕತೆಯೇ ನೆಲಕಚ್ಚುವ ಮೊದಲು ಸರ್ಕಾರ ತನ್ನ ನೀತಿಗಳನ್ನು ಬದಲಿಸಿಕೊಳ್ಳದಿದ್ದರೆ, ಅದರ ಪರಿಣಾಮವನ್ನು ಅನುಭವಿಸುವುದು ಮಾತ್ರ ಅಮಾಯಕ ಜನಸಾಮಾನ್ಯರು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »