ಸ್ಯಾಂಡಲ್‌ವುಡ್‌ನ ‘ಸಲಗ’ ದುನಿಯಾ ವಿಜಯ್ ಮತ್ತು ‘ಮಂಗಳೂರು’ ಪ್ರತಿಭೆ ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ ‘ಲ್ಯಾಂಡ್ಲಾರ್ಡ್’ (Landlord) ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕಾಟೇರ’ ಖ್ಯಾತಿಯ ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರ, ಕೇವಲ ಆ್ಯಕ್ಷನ್ ಮಾತ್ರವಲ್ಲದೆ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದೆ.

ಭೂಮಿ ಮತ್ತು ಬದುಕಿನ ಸಂಘರ್ಷ
ಸಿನಿಮಾ 1980ರ ದಶಕದ ಗ್ರಾಮೀಣ ಕರ್ನಾಟಕದ ಹಿನ್ನೆಲೆಯಲ್ಲಿ ಸಾಗುತ್ತದೆ. ಊರಿನ ಕ್ರೂರ ಭೂಮಾಲೀಕ ಚಿಕ್ಕೆಜಮಾನ್ರ (ರಾಜ್ ಬಿ. ಶೆಟ್ಟಿ) ಜೀತದಾಳುಗಳ ಮೇಲಿನ ದರ್ಪ ಹಾಗೂ ಅದನ್ನೇ ವಿರೋಧಿಸಿ ನಿಲ್ಲುವ ನಾಯಕ ರಾಚಯ್ಯನ (ದುನಿಯಾ ವಿಜಯ್) ನಡುವಿನ ಸಂಘರ್ಷವೇ ಚಿತ್ರದ ಜೀವಾಳ. ನಾಯಕನ ಮಗಳು ಭಾಗ್ಯ (ರಿತನ್ಯಾ ವಿಜಯ್) ಪೊಲೀಸ್ ಕಾನ್ಸ್‌ಟೇಬಲ್ ಆಗಿ ಊರಿಗೆ ಬಂದಾಗ ಕಥೆಗೆ ಹೊಸ ತಿರುವು ಸಿಗುತ್ತದೆ.
ಇದನ್ನೂ ಓದಿ | ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ: ಗಿಲ್ಲಿ ನಟಗೆ ಒಲಿದ ಬಿಗ್ ಬಾಸ್ ಪಟ್ಟ!
ದುನಿಯಾ ವಿಜಯ್ ತಮ್ಮ ಎಂದಿನಂತೆಯೆ ಖದರ್ರಾಗಿ ಮಿಂಚಿದ್ದರೆ, ವಿಲನ್ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರ ಕ್ರೌರ್ಯ ನೋಡುಗರನ್ನು ಬೆಚ್ಚಿಬೀಳಿಸುತ್ತದೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಮತ್ತು ಸ್ವಾಮಿ ಜೆ. ಗೌಡ ಅವರ ಛಾಯಾಗ್ರಹಣ 80ರ ದಶಕದ ಹಳ್ಳಿಯ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ಮೂಡಿಸಿವೆ.







