ರಾಮನ್ ಸಂಶೋಧನಾ ಸಂಸ್ಥೆ (ಆರ್‌ಆರ್‌ಐ)ಯ ವಿಜ್ಞಾನಿಗಳು ತೇಗದ ಎಲೆಗಳ (ಟೆಕ್ಟೋನಾ ಗ್ರಾಂಡಿಸ್) ಸಾರವು ಹೆಚ್ಚಿನ ಶಕ್ತಿಯ ಲೇಸರ್ ವಿಕಿರಣದ ವಿರುದ್ಧ ನೈಸರ್ಗಿಕ, ಜೈವಿಕ ವಿಘಟನೀಯ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಡುಹಿಡಿದಿದ್ದಾರೆ.
ವಿಜ್ಞಾನಿಗಳು ತೇಗದ (ಟೆಕ್ಟೋನಾ ಗ್ರಾಂಡಿಸ್) ಎಲೆಗಳಿಂದ ತೆಗೆದ ಸಾರವು ಹೆಚ್ಚಿನ ಶಕ್ತಿಯ ಲೇಸರ್ ವಿಕಿರಣದ ವಿರುದ್ಧ ನೈಸರ್ಗಿಕ, ಜೈವಿಕ ವಿಘಟನೀಯ ಕಚಚವಾಗಿ ಕಾರ್ಯನಿರ್ವಹಿಸುತ್ತದೆ. ಈ ಬೆಳವಣಿಗೆಯು ವೈದ್ಯಕೀಯ, ಮಿಲಿಟರಿ ಹಾಗೂ ಕೈಗಾರಿಕಾ ಸೆಟ್ಟಿಂಗ್ಗಳಲ್ಲಿ ಸೂಕ್ಷ್ಮವಾದ ಆಪ್ಟಿಕಲ್ ಸಾಧನಗಳು ಮತ್ತು ಮಾನವ ಕಣ್ಣುಗಳನ್ನು ರಕ್ಷಿಸಲು, ಸುರಕ್ಷಿತ ಮತ್ತು ನೈಸರ್ಗಿಕ (ಹಸಿರು) ಪರ್ಯಾಯ ಮಾರ್ಗವಾಗಬಹುದು ಎಂದಿದ್ದಾರೆ.
ಕೃಷಿ ತ್ಯಾಜ್ಯವಾಗಿ ಹೆಚ್ಚಾಗಿ ತಿರಸ್ಕರಿಸಲ್ಪಡುವ ತೇಗದ ಎಲೆಗಳು ಆಂಥೋಸಯಾನಿನ್ಗಳಲ್ಲಿ (ನೈಸರ್ಗಿಕ ವರ್ಣದ್ರವ್ಯ) ಸಮೃದ್ಧವಾಗಿದ್ದು, ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ಕಾರಣವಾಗುವ ನೈಸರ್ಗಿಕ ವರ್ಣದ್ರವ್ಯಗಳು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ.
ಈ ಅನ್ವೇಷಣೆಯು ಪ್ರಸ್ತುತ ಕೆಲಸವು ಕೃಷಿ ತ್ಯಾಜ್ಯಕ್ಕೆ ಮೌಲ್ಯವನ್ನು ತರುತ್ತದೆ ಅಲ್ಲದೇ, ಸುಸ್ಥಿರ ಫೋಟೊನಿಕ್ ವಸ್ತುಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎನ್ನುತ್ತಾರೆ ಸಂಶೋಧಕರು. ಈ ವಿಷಯದ ಹೆಚ್ಚಿನ ಅಧ್ಯಯನ ಡೈನ ಸ್ಥಿರತೆಯನ್ನು ಸುಧಾರಿಸಬಹುದು ಮತ್ತು ವಾಣಿಜ್ಯ ಫೋಟೊನಿಕ್ ಸಾಧನಗಳಲ್ಲಿ ಅದರ ಬಳಕೆಯನ್ನು ವಿಸ್ತರಿಸಬಹುದು ಎಂಬುದು ಅವರ ಅಭಿಪ್ರಾಯ.
ಸಂಭಾವ್ಯ ಅಭಿವೃದ್ಧಿಯುಲ್ಲಿ ಲೇಸರ್-ನಿರೋಧಕ ಲೇಪನಗಳು, ಸುರಕ್ಷತಾ ಕನ್ನಡಕಗಳು ಹಾಗೂ ಸಂವೇದನೆಯುಳ್ಳ ರಕ್ಷಕಗಳು ಸೇರಿವೆ. ಇದು ಹೆಚ್ಚುತ್ತಿರುವ ಹಸಿರು ಆಪ್ಟಿಕಲ್ ತಂತ್ರಜ್ಞಾನದ ಬೇಡಿಕೆಗೆ ಕೊಡುಗೆ ನೀಡಲಿದೆ.
ಟೀಕ್ (ತೇಗ) ಎಲೆಗಳು ಆಂಥೋಸಯಾನಿನ್ನಂತಹ ನೈಸರ್ಗಿಕ ವರ್ಣದ್ರವ್ಯಗಳ ಸಮೃದ್ಧ ಮೂಲವಾಗಿದ್ದು, ಸೂಕ್ತವಾದ ದ್ರಾವಕಗಳನ್ನು ಬಳಸಿ ಹೊರತೆಗೆದಾಗ ವಿಶಿಷ್ಟವಾದ ಕೆಂಪು-ಕಂದು ಬಣ್ಣವನ್ನು ನೀಡುತ್ತದೆ. ನಾನ್ಲೈನರ್ ಆಪ್ಟಿಕ್ಸ್ ಕ್ಷೇತ್ರದಲ್ಲಿ ಸಂಶ್ಲೇಷಿತ ಬಣ್ಣಗಳಿಗೆ, ವಿಷಕಾರಿಯಲ್ಲದ, ಜೈವಿಕ ವಿಘಟನೀಯ, ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾಗುವಂತೆ, ಪರ್ಯಾಯವಾಗಿ ತೇಗದ ಎಲೆಯ ಸಾರದ ಸಾಮರ್ಥವನ್ನು ಅನ್ವೇಷಣೆ ಮಾಡುವ ಗುರಿ ನಮ್ಮದು ಎನ್ನುತ್ತಾರೆ, ಆರ್ಆರ್ಐನ ಮಹಿಳಾ ವಿಜ್ಞಾನಿ ಬೆರಿಲ್ ಸಿ.
ಅಧ್ಯಯನ ತಂಡವು ಬಣ್ಣವನ್ನು ತಯಾರಿಸಲು, ತೇಗದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಪುಡಿಯನ್ನು ದ್ರಾವಕಗಳಲ್ಲಿ ನೆನೆಸಿ, ಅಲ್ಟ್ರಾಸಾನಿಕೇಶನ್ (ಶ್ರವಣಾತೀತ) ಮತ್ತು ಸೆಂಟ್ರೀಫಿಗೇಷನ್ (ಕೇಂದ್ರಾಪಗಾಮಿ) ಬಳಸಿಕೊಂಡು ಸಾರವನ್ನು ಶುದ್ಧೀಕರಿಸಿತ್ತು. ಅಂತಿಮವಾಗಿ ಸಿಕ್ಕ ಉತ್ಪನ್ನವನ್ನು ನಿರಂತರ ಮತ್ತು ಪಲ್ಸ್ ತೀವ್ರತೆಗಳಲ್ಲಿ ಹಸಿರು ಲೇಸರ್ ಬೆಳಕನ್ನು ಬಳಸಿ ಪರೀಕ್ಷಿಸಿದಾಗ ಅದು ಕೆಂಪು-ಕಂದು ದ್ರವವಾಗಿತ್ತು. ಈ ಸಾರವು ಬೆಳಕಿಗೆ ಹೊಂದಿಕೊಳ್ಳುತ್ತದೆ ಮತ್ತು ಹೆಚ್ಚಿನ ಬೆಳಕಿನಲ್ಲಿ ಅದನ್ನು ಹೆಚ್ಚು ತೀವ್ರವಾಗಿ ಹೀರಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಈ ವಿಶೇಷ ವಿಧಾನ ಬಳಸಿ ಸಂಶೋಧಕರು ತೇಗದ ಎಲೆಯ ಸಾರದ ಆರ್ಎಸ್ಎ ನಡವಳಿಕೆಯನ್ನು ದೃಢಪಡಿಸಿಕೊಂಡಿದ್ದಾರೆ. ಈ ಅಧ್ಯಯನವು ʼಜರ್ನಲ್ ಆಫ್ ಫೋಟೊಕೆಮಿಸ್ಟ್ರಿ ಮತ್ತು ಫೋಟೊಬಯಾಲಜಿ ಎ: ಕೆಮಿಸ್ಟ್ರಿʼಯಲ್ಲಿ ಪ್ರಕಟಗೊಂಡಿದೆ.







