ಬಿಹಾರ ಚುನಾವಣೆ: ಎನ್‌ಡಿಎ ಸೀಟು ಹಂಚಿಕೆ ಚರ್ಚೆ ಅಂತಿಮ!

"ನಾವು ಸೀಟುಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಯೋಜನೆಗಳ ಬಗ್ಗೆ ಎಲ್ಲವನ್ನೂ ಮಾತಾಡುತ್ತಿದ್ದೇವೆ. ಎಲ್ಲವೂ ಸರಿಯಾದ ದಾರಿಯಲ್ಲಿದೆ" ಎಂದು ರಾಮ ವಿಲಾಸ್‌ ಪಾಸ್ವಾನ್‌ ತಿಳಿಸಿದರು.
bihar elections 2025 nda

“ನಾವು ಸೀಟುಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಯೋಜನೆಗಳ ಬಗ್ಗೆ ಎಲ್ಲವನ್ನೂ ಮಾತಾಡುತ್ತಿದ್ದೇವೆ. ಎಲ್ಲವೂ ಸರಿಯಾದ ದಾರಿಯಲ್ಲಿದೆ” ಎಂದು ಚಿರಾಗ್‌ ಪಾಸ್ವಾನ್‌ ತಿಳಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೀಟು ಹಂಚಿಕೆ ಚರ್ಚೆಗಳು ಕೊನೆಯ ಹಂತಕ್ಕೆ ಬಂದಿವೆ. ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಲೋಕ್ ಜನಶಕ್ತಿ ಪಕ್ಷ (ರಾಮವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರ ಮನೆಗೆ ಭೇಟಿ ನೀಡಿ, ಸೀಟು ವಿಂಗಡಣೆ, ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣೆ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. 

ಚಿರಾಗ್ ಪಾಸ್ವಾನ್ ಮಾಧ್ಯಮಗಳ ಮುಂದೆ ಮಾತನಾಡುತ್ತ, ಎನ್‌ಡಿಎಯೊಳಗೆ ಒಡಕು ಇದೆ ಎಂಬ ಸುದ್ದಿಗಳನ್ನು ತಿರಸ್ಕರಿಸಿ, “ನನ್ನ ಬಗ್ಗೆ ಹಬ್ಬಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ನಾನು ಯಾರೊಂದಿಗೂ ಅಸಮಾಧಾನಗೊಂಡಿಲ್ಲ. ಸೀಟು ಹಂಚಿಕೆ ಶೀಘ್ರವೇ ಕೊನೆಗೊಳ್ಳಲಿದೆ” ಎಂದು ಸ್ಪಷ್ಟಪಡಿಸಿದರು.

ಮೂಲಗಳ ಪ್ರಕಾರ ಬಿಹಾರದ ವಿಧಾನಸಭೆಯ 243 ಸೀಟುಗಳಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 99-103 ಸೀಟುಗಳಲ್ಲಿ ಸ್ಪರ್ಧಿಸಲಿವೆ. ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕೆ 30-40 ಸೀಟುಗಳು ಒದಗಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ | ಬಿಹಾರದಲ್ಲಿ ಭರ್ಜರಿ ಕದನ: ನವೆಂಬರ್‌ನಲ್ಲಿ ಎರಡು ಹಂತದ ಯುದ್ಧ

ಚಿರಾಗ್ ಅವರ ಪಕ್ಷವು ದಲಿತ ಮತದಾರರ ಮೇಲೆ ಬಲವಾದ ಪ್ರಭಾವ ಹೊಂದಿದ್ದು, ಪಶ್ಚಿಮ ಚಂಪಾರಣದಂತಹ ಕ್ಷೇತ್ರಗಳಲ್ಲಿ ಗೆಲುವಿಗೆ ಭರವಸೆಯಿದೆ ಎನ್ನಲಾಗುತ್ತಿದೆ. ಬಿಹಾರ ಚುನಾವಣೆ ದೇಶದ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »