ಜಾತಿ ಸಮೀಕ್ಷೆ | ವಿಳಂಬಯಾಕೆ? ಯಾರು ಹೊಣೆ?

ಕರ್ನಾಟಕದ 6.77 ಕೋಟಿ ಜನಸಂಖ್ಯೆಯನ್ನು ಜಾತಿ ಆಧಾರದಲ್ಲಿ ಗುರುತಿಸುವ ಈ ಸಮೀಕ್ಷೆ, ರಾಜ್ಯದ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ?
caste census

ಕರ್ನಾಟಕದ 6.77 ಕೋಟಿ ಜನಸಂಖ್ಯೆಯನ್ನು ಜಾತಿ ಆಧಾರದಲ್ಲಿ ಗುರುತಿಸುವ ಈ ಸಮೀಕ್ಷೆ, ರಾಜ್ಯದ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ? ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಬೇಕಿದ್ದ ಜಾತಿ ಜನಗಣತಿ (ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಈಗ ಅಕ್ಟೋಬರ್ 31ರವರೆಗೆ ವಿಸ್ತರಿಸಲ್ಪಟ್ಟಿದೆ. ಈ ಸಮೀಕ್ಷೆಯು ರಾಜ್ಯದಲ್ಲಿ ಜಾತಿ, ಶಿಕ್ಷಣ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ನಿಖರ ಡೇಟಾವನ್ನು ಸಂಗ್ರಹಿಸುತ್ತದೆ. ಆದರೆ, ತಾಂತ್ರಿಕ ತೊಡಕುಗಳು, ರಾಜಕೀಯ ವಿರೋಧ ಮತ್ತು ಸಾಮಾನ್ಯರ ಸವಾಲುಗಳ ನಡುವೆ, ಈ ಸಮೀಕ್ಷೆಯು ಸಾಮಾನ್ಯರ ಜೀವನಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಮುಖ್ಯ.

ತಾಂತ್ರಿಕ ತೊಡಕುಗಳು ಮತ್ತು ರಾಜಕೀಯ ವಿವಾದಗಳು

ಸಮೀಕ್ಷೆಯು ವಿವಿಧ ಸವಾಲುಗಳನ್ನು ಎದುರಿಸಿದೆ. ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಗಳು ಒಂದು ಕಡೆಯಾದರೆ ಬಿಜೆಪಿ ಈ  ಸಮೀಕ್ಷೆಯನ್ನು ರಾಜಕೀಯಗೊಳಿಸಿ ಹಿಂದೂ ಸಮಾಜವನ್ನು ವಿಭಜಿಸುತ್ತದೆ ಎಂದು ಅಪಪ್ರಚಾರಗೊಳಿಸಿ ಜನರನ್ನು ಪಾಳ್ಗೊಳ್ಳದಂತೆ ಮಾಡಿದ್ದು ಇನ್ನಷ್ಟು ವಿಳಂಬಗೊಳಿಸಿದೆ. ಉದಾಹರಣೆಗೆ, ಶಿವಮೊಗ್ಗದಲ್ಲಿ BJP ನಾಯಕರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಆದರೂ ರಾಜ್ಯದ ಶೇ.91 ಪ್ರಗತಿ ಸಾಧ್ಯವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಆಡಳಿತಾತ್ಮಕ ವಲಯದ ಕಾರ್ಯವಾಗಿರುವ  ಈ ಸಮೀಕ್ಷೆಯಲ್ಲಿ ಜನಪ್ರತಿನಿಧಿಗಳೆನಿಸಿಕೊಂಡವರು ಭಾಗವಹಿಸಿ ಜನರನ್ನು ಈ ಕಾರ್ಯಕ್ಕೆ ಭಾಗವಹಿಸುವಂತೆ ಪ್ರೇರೆಪಿಸಬೇಕಿತ್ತು ಎನ್ನುವ ಮಾತು ಪ್ರಜ್ಞಾವಂತ ವಲಯಗಳಲ್ಲಿ ಕೇಳಿಬರುತ್ತಿದೆ.

 ಅಕ್ಟೋಬರ್ 18ರ ವರೆಗೆ, ರಾಜ್ಯದ ಶೇ.85 ಮನೆಗಳು (ಸುಮಾರು 1.09 ಕೋಟಿ ಮನೆಗಳು) ಭಾಗಿಯಾಗಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ. ಆದರೆ ಬೆಂಗಳೂರಿನಲ್ಲಿ ಕೇವಲ ಶೇ.45ಕ್ಕೆ ಸೀಮಿತವಾಗಿದೆ. ಇದಕ್ಕೆ ವೈಯಕ್ತಿಕ ಮಾಹಿತಿಯ ಗೌಪ್ಯತೆಯ ಆತಂಕಗಳು ಮತ್ತು 60 ಪ್ರಶ್ನೆಗಳ ದೀರ್ಘ ಪಟ್ಟಿಯು ನಗರ ನಿವಾಸಿಗಳನ್ನು ದೂರವಿಡುತ್ತಿದೆ.  ಈ ಸವಾಲುಗಳು ಸಮೀಕ್ಷೆಯ ಯಶಸ್ಸನ್ನು ಪ್ರಶ್ನಿಸುತ್ತಿವೆ, ಆದರೆ ಅದು ಸಾಮಾಜಿಕ ನ್ಯಾಯಕ್ಕೆ ಮಾರ್ಗ ಸುಗಮಗೊಳಿಸುತ್ತದೆ ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ | ಮತ್ತೆ ಮುನ್ನೆಲೆಗೆ ಬಂದ ಭಾರತೀಯ ಚುನಾವಣಾ ವ್ಯವಸ್ಥೆಯ ವೈಫಲ್ಯ

ಸಾಮಾಜಿಕ ನ್ಯಾಯದ ಹೊಸ ಹಾದಿ

ಸರ್ಕಾರವು ಈ ಸಮೀಕ್ಷೆಗೆ ರೂ.420 ಕೋಟಿ ವೆಚ್ಚ ಮಾಡಿದ್ದು, ಇದು 2015ರ ಸಮೀಕ್ಷೆಗಿಂತ ದ್ವಿಗುಣ (ರೂ.165 ಕೋಟಿ). ಈ ಡೇಟಾವು OBC ಜನಸಂಖ್ಯೆಯನ್ನು 70% ಎಂದು ಗುರುತಿಸುತ್ತದೆ, ಇದರಿಂದ ರಿಜರ್ವೇಷನ್‌ನ್ನು 32%ಯಿಂದ 51%ಗೆ ಹೆಚ್ಚಿಸುವ ಸಾಧ್ಯತೆಯಿದೆ. ಮುಸ್ಲಿಂ ಜನಸಂಖ್ಯೆ 18.08% ಆಗಿದ್ದು, ಅವರಿಗೆ 8% ರಿಜರ್ವೇಷನ್ ಸಿಗಬಹುದು. ST ಜನಸಂಖ್ಯೆ ಸುಮಾರು 42.49 ಲಕ್ಷ (ಶೇ.6.95). ಈ ಡೇಟಾ 2026ರ ಬಜೆಟ್‌ಗೆ ಆಧಾರವಾಗಿ, ಕಲ್ಯಾಣ ಯೋಜನೆಗಳನ್ನು ಸುಧಾರಿಸುತ್ತದೆ. ಈ ಸಮೀಕ್ಷೆಯು ಜಾತಿ ಆಧಾರಿತ ನೀತಿಗಳನ್ನು ದೃಢಪಡಿಸಿ, ಸಮಾನತೆಯನ್ನು ಖಾತರಿಪಡಿಸುತ್ತದೆ. ಆದರೆ, ದೇಶೀಯ ಸಮೀಕ್ಷೆಯಂತೆ, ಇದು ರಾಜಕೀಯ ಘರ್ಷಣೆಗಳನ್ನು ಹೆಚ್ಚಿಸಬಹುದು.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »