ಮಾದಕ ನಶೆಯಲ್ಲಿ ರಾಜ್ಯದ ಯುವಜನ: 6 ತಿಂಗಳಲ್ಲಿ 257 ಪ್ರಕರಣಗಳು!

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವುದು ರಾಜ್ಯದ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಗಂಭೀರ ಆತಂಕ ಉಂಟುಮಾಡಿದೆ.
karnataka drug smuggling
ಚಿತ್ರ ಕೃಪೆ : ವಿಜಯವಾಣಿ

ರಾಜ್ಯದಲ್ಲಿ ದಿನೇ ದಿನೆ ಮಾದಕ ನಶೆಯ ವ್ಯಸನ ಹೆಚ್ಚಾಗುತ್ತಿದ್ದು, ಇತ್ತೀಚಿನ ಆರು ತಿಂಗಳ ಪೊಲೀಸ್ ವರದಿಯ ಪ್ರಕಾರ 257 ಗಾಂಜಾ ಪ್ರಕರಣಗಳು ದಾಖಲಾಗಿದ್ದು, 420 ಮಂದಿ ಬಂಧಿತರಾಗಿದ್ದಾರೆ. ಅವರಲ್ಲಿ ಶೇಕಡಾ 60ರಷ್ಟು ಜನರು 18 ರಿಂದ 30 ವರ್ಷದ ಯುವಕರಾಗಿದ್ದಾರೆ.

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವುದು ರಾಜ್ಯದ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಗಂಭೀರ ಆತಂಕ ಉಂಟುಮಾಡಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶದವರೆಗೆ ನಶೆ ಜಾಲದ ವ್ಯಾಪ್ತಿ ವಿಸ್ತರಿಸುತ್ತಿದೆ. ಪೊಲೀಸ್‌ರ ನಿರಂತರ ಕ್ರಮಗಳ ಹೊರತಾಗಿಯೂ ಅದರ ಬೇರುಗಳು ಆಳವಾಗಿ ನೆಲೆಯೂರಿವೆ.  

ಮಾದಕ ವಸ್ತುಗಳ ಮೇಲೆ ನಡೆಸಿದ ದಾಳಿಗಳು

ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ ಪೊಲೀಸರು 43 ಕಿಲೋಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈ ಗಾಂಜಾ ಮಾರಾಟ ಮಾಡುವ ಕಿಂಗ್‌ಪಿನ್ ಸೇರಿದಂತೆ ಆರು ಜನರನ್ನು ಬಂಧಿಸಲಾಗಿತ್ತು ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೇಸ್‌ ವರದಿ ಮಾಡಿತ್ತು.

ಇದೇ ರೀತಿ ಕೇಂದ್ರ ಅಪರಾಧ ವಿಭಾಗ, ಈಶಾನ್ಯ ವಿಭಾಗ, ಶ್ವಾನ ದಳ ಸೇರಿದಂತೆ ಇತರ ಸಿಬ್ಬಂದಿಗಳು ಬೆಂಗಳೂರು ನಗರದಲ್ಲಿ 23.84 ಕೋಟಿ ರೂ. ಮೌಲ್ಯದ 15.244 ಕೆಜಿ ಎಂಡಿಎಂಎ, ಹೈಡೋ ಗಾಂಜಾ, ಹಶಿಶ್ ಎಣ್ಣೆ ಮತ್ತು ಅಫೀಮು ವಶಪಡಿಸಿಕೊಂಡಿದ್ದರು. ವಸ್ತುಗಳ ಜೊತೆಗೆ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದರು.

ಬೆಳಗಾವಿ ಕಾರ್ಯಚರಣೆಯನ್ನೂ ಮೀರಿಸಿದಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕರ್ನಾಟಕ ಕೇಂದ್ರ ಅಪರಾಧ ವಿಭಾಗದ ಕಾರ್ಯಾಚರಣೆಯಲ್ಲಿ ಇಬ್ಬರು ದಕ್ಷಿಣ ಆಫ್ರಿಕಾದ ಯುವತಿಯರಾದ ಬಾಂಬಾ ಫ್ಯಾಂಟಾ ಮತ್ತು ಅಬಿಗೈಲ್ ಅಡೋನಿಸ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಯಿತು, ಸುಮಾರು 38 ಕೆಜಿ ಎಂಡಿಎಂಎ ಜೊತೆಗೆ, ಕಾಳಸಂತೆಯಲ್ಲಿ 75 ಕೋಟಿ ರೂ. ಮೌಲ್ಯದ ಈ????? ವಶಪಡಿಸಿಕೊಂಡಿದ್ದು, ಇದು ಕರ್ನಾಟಕದ ಇತಿಹಾಸದಲ್ಲಿಯೇ ಅತಿ ದೊಡ್ಡದಾಗಿದೆ. 

ಪೊಲೀಸರು ಮಂಗಳೂರಿನ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೆ ಮಾದಕವಸ್ತು ಕಳ್ಳಸಾಗಣೆ ಮಾಡುವ ಮಾರ್ಗವನ್ನು ಈ ಕಾರ್ಯಾಚರಣೆಯಿಂದ ಬಹಿರಂಗಪಡಿಸಿದರು. ದಕ್ಷಿಣ ಭಾರತದಲ್ಲಿ ಮಾದಕವಸ್ತುಗಳಿಗೆ ಪ್ರಮುಖ ಪ್ರವೇಶ ಬಿಂದುವಾಗಿ ಮಂಗಳೂರು ಉದಯೋನ್ಮುಖ ಪಾತ್ರವಹಿಸಿದೆ ಎಂದು ಈ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.

ಈ ವರ್ಷದ ಜನವರಿಯಿಂದ ಅಕ್ಟೋಬರ್ 8 ರವರೆಗೆ ಬೆಂಗಳೂರು ಪೊಲೀಸರು 81.21 ಕೋಟಿ ರೂ. ಮೌಲ್ಯದ ಸುಮಾರು 1,483.30 ಕೆಜಿ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಬೆಂಗಳೂರು ನಗರದಲ್ಲಿ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ 711 ಪ್ರಕರಣಗಳು ದಾಖಲಾಗಿವೆ ಎಂದು ಡೆಕ್ಕನ್‌ ಕ್ರಾನಿಕಲ್‌ ವರದಿ ಮಾಡಿದೆ.

ಕಾಲೇಜು ಹಾಸ್ಟೆಲ್‌ಗಳಿಂದ ಪಾರ್ಕ್‌ಗಳವರೆಗೆ ವ್ಯಾಪಿಸಿರುವ ನಶೆ ಜಾಲ

ಮಂಗಳೂರು, ಕಲಬುರಗಿ, ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ದಾಳಿಗಳಲ್ಲಿ ವಿದ್ಯಾರ್ಥಿಗಳೇ ಪ್ರಮುಖ ಆರೋಪಿಗಳಾಗಿರುವುದು ಸ್ಪಷ್ಟವಾಗಿದೆ. ಹಾಸ್ಟೆಲ್‌ಗಳು, ಪಿಜಿ ರೂಂಗಳು, ಹೋಟೆಲ್‌ಗಳು ಮತ್ತು ಪಾರ್ಕ್‌ಗಳು ಗಾಂಜಾ ಸೇವನೆಯ ಕೇಂದ್ರಗಳಾಗಿವೆ. ಕಲಬುರಗಿಯಲ್ಲಿ ವಶಕ್ಕೆ ತೆಗೆದುಕೊಂಡ 503 ಗ್ರಾಂ ಗಾಂಜಾ, ಮಂಗಳೂರಿನಲ್ಲಿ ಪತ್ತೆಯಾದ ಅಂತರ್‌ಜಾಲ ವಹಿವಾಟು ಪ್ರಕರಣಗಳು ನಶೆ ವ್ಯಾಪಾರದ ಹೊಸ ರೂಪವನ್ನೇ ತೋರಿಸಿದೆ.

ಇದನ್ನೂ ಓದಿ | ಕಲಬುರಗಿ ಡ್ರಗ್ಸ್ ಪ್ರಕರಣ: ಲಿಂಗರಾಜ್ ಕಣ್ಣಿ ಕಾಂಗ್ರೆಸ್‌ನಿಂದ ಉಚ್ಚಾಟನೆ

ಪೊಲೀಸರು “ಆಪರೇಷನ್ ಕ್ಲೀನ್ ಕ್ಯಾಂಪಸ್” ಹೆಸರಿನ ವಿಶೇಷ ಅಭಿಯಾನ ಪ್ರಾರಂಭಿಸಿ ಕಾಲೇಜುಗಳಲ್ಲಿ ಅಚಾನಕ್ಕಾಗಿ ತಪಾಸಣೆ ನಡೆಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ನಶೆ ವಿರೋಧಿ ಘಟಕಗಳು ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಂಗ್ರಹಣೆ ಮಾಡುತ್ತಿವೆ. ಆದರೆ ತನಿಖಾ ಮೂಲಗಳ ಪ್ರಕಾರ, ಈ ಜಾಲದ ಹಿಂದಿನ ದೊಡ್ಡ ಸರಬರಾಜುದಾರರು ಇನ್ನೂ ಪತ್ತೆಯಾಗಿಲ್ಲ. ಸಾಮಾಜಿಕ ಮಾಧ್ಯಮ ಆ್ಯಪ್‌ಗಳ ಮೂಲಕ ಗಾಂಜಾ ಆರ್ಡರ್‌ ಮತ್ತು ಪಾವತಿಗಳು ಕ್ರಿಪ್ಟೋ ಚಾನೆಲ್‌ಗಳಲ್ಲಿ ನಡೆಯುತ್ತಿವೆ ಎಂಬುದೂ ಬೆಳಕಿಗೆ ಬಂದಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »