ಕುಂದಾಪ್ರದರಿಗೆ ಹಬ್ಬಕ್ಕೇನ್ ಬರ ಇಲ್ಲ ಕಾಣಿ… ದೊಡ್ಡದೋ ಚಿಕ್ಕದೋ ಅಂತು ತಿಂಗ್ಳಿಗ್ ಒಂದ್ ಹಬ್ಬ ಅಂತು ಇದ್ದೇ ಇರತ್ತ್. ಈಗ ಒಂದ್ ಎರಡ ವಾರದ ಹಿಂದೆ ಕುಂದಾಪ್ರದಗೆ ಎಲ್ರ ಮನೆಗೂ ʻಜಕ್ಣಿʼ ಅಂಬದಪಾ…ಎಲ್ಲಾ ಕೋಳಿ ಕೊಯ್ದದ್ದೇ ಕೊಯ್ದದ್ದ..ಹಲಸಿನ ಹಣ್ಣಿನ ಕಡ್ಬ ಮಾಡಿ ಹಬ್ಬು ಮಾಡದ್ದೇ ಮಾಡದ್ದ.. ಇನ್ನೇನ್ ಜಕ್ಣಿ ಹಬ್ಬು ಮುಗ್ದ ʻಅಜ್ಜಿʼ ಹಬ್ಬು ಬತ್ತ್. ಅಜ್ಜಿ ಹಬ್ಬು ಬಂದ್ರೂ ಇನ್ಸ್ಟಾಗ್ರಾಮ್ ಅಲ್ ಜಕ್ಣಿ ರೀಲ್ಸ್ ಬಪ್ಪುದ್ ಮಾತ್ರ ಮುಗಿತ್ತಿಲ್ದಾ ಕಾಂತ್. ಬರ್ಲಿ ಬರ್ಲಿ, ಊರ್ ಬದಿ ಚಂದು ಕಾಂಬುಕೆ ಸಾಪ್ ಅಲ್ದಾ. ಅದ್ ಇರ್ಲಿ ಹಂಗಾರ್ ಈ ಜಕ್ಣಿ ಹಬ್ಬು ಅಂದ್ರ ಎಂತಾ ?
ʻಕುಂದಾಪ್ರʼ ಎಂದ್ ಕೇಳುಕು ಮೊದ್ಲ ಹಂಬ್ಲ ಆಪ್ದ ಇ ನೆಲದ್ ಆಚರಣಿ, ಸಂಸ್ಕೃತಿ ಮತ್ತೆ ಕುಂದಾಪ್ರದ್ ಸುತ್ತ್‌ಮುತ್ತ್ ಇಪ್ಪು ಘಟಾನೂಘಟಿ ದೇವ್ರ ದೇವಸ್ಥಾನ ಮತ್ತೆ ಚಂದದ್ ಬೀಚ್ ಅಲ್ದಾ. ಹಂಗೆ ಇಲ್ಲ್ ಆಚರಿಸುವ ಹಬ್ಬುವು ಹಂಗೆ. ಎಲ್ಲಾ ಹಬ್ಬುವು ಈ ನೆಲದ ಕೃಷಿ ಮತ್ತೆ ಆಯಾಯ ಋತುಗಳೊಟ್ಟಿಗೆ ತಳಕಿ ಹೈಕಂಡಿರತ್ತ್. ಈ ಜಕ್ಣಿಯೂ ಹಂಗೆ. ಇದ್ ಅಪ್ಪಟ ಜನಪದ ಆಚರಣೆಯಾಗಿದ್ದ, ತುಳುನಾಡಿನ ಹಿರಿಕರ ಬದುಕಿನೊಂದಿಗೆ ಹುಟ್ಟಿಕೊಂಡ ಪುರಾತನ ಆಚರಣೆ ಇದ್.
“ಜಕ್ಣಿ” – ಕುಂದಾಪ್ರದಲ್ ಈ ಪದದ ಅರ್ಥ ʻಸತ್ತ ಆತ್ಮʼ. ಈ ದಿನ ಅಂದ್ರೆ ಜಕ್ಣಿ ದಿನ ಎಲ್ರ ಮನಿಯಲ್ ಸತ್ತಿ ಹೋಯಿಪ್ಪ ಎಲ್ರಿಗೂ ವರ್ಷದಲ್ಲ್ ಈ ಒಂದಿನ ಕರದ್ ಸತ್ಕರಿಸಿ ಕಳಸುವ ಆಲೋಚ್ನಿ ಅಷ್ಟೇ. ಎಷ್ಟ ಲೈಕ್ ಅಲ್ದಾ.. ಒಬ್ರ ಸತ್ತ್ ಅವ್ರನ್ನ ಬೂದಿ ಮಾಡ್ರ ಮೇಲೂ ಅವ್ರನ್ನ ಕರದ್ ಸತ್ಕರಿಸುವುದು.
ಕಾರ್ ತಿಂಗ್ಳ ಮೊದ್ಲ ಮಳಿ ಬಿಳುಕು ಯಾವತ್ ಜಕ್ಣಿ ಮಾಡವಾ ಅನಕ ಹೆಂಗ್ಸ್ರ್ ಗೌಜ್ ಶುರು ಆತ್. ಮನಿ ಮಕ್ಳಿಗ್ ಶಾಲಿ ರಜಿ ಇತ್ತಾ, ಮನಿಯರ್ ಎಲ್ರಿಗೂ ಬಪ್ಪಕ್ ಆತ್ತಾ, ಎಲ್ಲಾ ಕಂಡಕಂಡ ಒಂದಿನ ಗೊತ್ತ ಮಾಡ್ತ್ರ. ಎಲ್ರೂ ಸೇರ್‌ಕಂಡ ಜಕ್ಣಿ ಮಾಡೋ ಗೌಜ್ ಗಮ್ಮತ್ತೇ ಬೇರೆ.
ಜಕ್ಣಿ ದಿನ ಸಾಯಂಕಾಲ ಹೊತ್ತ ಕಂತು ಹೊತ್ತಿಗೆ ಮಕ್ಳ, ದೊಡ್ಡರ್ ಸೇರಿ ಕೈಯಲ್ಲ ಒಂದ್ ಕೋಳಿ ಹಿಡಕಂಡ್ ಪಕ್ಕದಲ್ ಇಪ್ಪು ಹಾಡಿಗೆ ಹೋಯ್, ಎಲ್ಲಾ ಬಪ್ಪಲ್‌ಲೋರಿಗ್ ಕಾಯಕ್.
ಎಲ್ರೂ ಬಂದ್ ಮೇಲ್, ಹಾಡಿ ಒಂದ್ ಬದೆಗೆ ಪುರ್ವಜರ್ ಪ್ರತಿಷ್ಟಾಪಿಸಿದ್ದ ಕಲ್ಲಿಗೆ ಕಾಯಿಯನ್ನು ಒಡದ್ ದಾಸವಾಳ, ಕೆಸಕುರ ಹಿಂಗ್ ಬೇರ್ ಬೇರೆ ಕಾಡ್ ಹೂ ಇಟ್ಟ ಸಿಂಗರಿಸಿ, ಕಡಿಕೆ ಕೊಡಿ ಬಾಳೆಲಿ ಮೇಲೆ ಅಕ್ಕಿ ಚೆರು ಹಾಕಿ, ಎಣ್ಣೆಗೆ ಅದ್ದಿದ ನೆಣೆ ಕೋಲಿಗೆ ಬೆಂಕಿ ಹಚ್ಚಿ, ಅರಸಿನ ಮತ್ತು ಸುಣ್ಣ ಕೈಡಿ ʻಹಾನದ ಕೊಟ್ಟಿʼಗೆ ಹಾಕುದು. ಇದಿಷ್ಟ್ ರೆಡಿ ಆಪಕು ಕೋಳಿ ಕಾಲ್ ತೊಳೆದು ರೆಡಿ ಮಾಡಕಣ್ಕ. ಒಬ್ರ ಕೋಳಿ ಕುತ್ಗಿ ಕೊಯ್ದು ರಕ್ತನ ಹಾನದ ಕೊಟ್ಟೆಗೆ, ಸ್ವಲ್ಪ ಚೆರುವಿಗೆ ತಾಗ್ಸಿ ಕೋಳಿ ಕಾಲ್ ಎಳೆದ್ ಬೀಸಾಕುದು. ಲಾಷ್ಟಿಗ್ ಎಲ್ಲರೂ ಎಂದೆರಡ್ ನಿಮಿಷ ಬೆನ್ನ ಹಾಕಿ ನಿಂತ ಕಂಡ ಸತ್ತ ಆತ್ಮಕ್ಕೆಲ್ಲ ಕಾಟ ಕೋಡಬೇಡಿ, ಈ ವರ್ಷದ ಪಾಲ್ ನಿಮಗ್ ಕೊಟ್ಟ ಆಯ್ತ ಅಂತ ಬೇಡಕಂಡ ಕೋಳಿ ತಕ ಮನಿ ಬದಿಗ್ ಹೋಪ್ದ್. ಇದೆಲ್ಲ ಊರವರ್ರೆಲ್ರ ಒಂದ್ ನಂಬಿಕೆ ಅಷ್ಟೇ.
ಕಾಡಿಕ್ ಶುರು ಆತ್ ಕಾಣಿ ಊರ ಕೋಳಿಗಳ ರಿಪೇರಿ ಮಾಡುವ ಕಾರ್ಯಕ್ರಮ. ಪಿರಿ ಪಿರಿ ಮಳಿ ಬಪ್ಪತ್ತಿಗೆ ನುಸಿ ಕೈಯೆಗೆ ಸಮಾ ಕಚ್ಚಿಸ್ ಕಂಡ ಕೋಳಿ ‘ಸಮಾ’ ಮಾಡಿ ಕೊಚ್ಚಿ ತೊಳೆಯುವ ಕೆಲಸ ಮನಿ ಗಂಡ್ಸರಿಗೆ.
ಜಕ್ಣಿ ದಿನ ಪೈಕಿಯರ್ ಎಲ್ಲಾ ಸೇರಿ ಆಚರಿಸುದೇ ಒಂದ್ ಖುಷಿ. ಅದ್ರಲ್ಲೂ ಜಕ್ಣೀಗ್ ಮಾಡುವ ಹಲಸಿನ ಹಣ್ಣಿನ ಕಡ್ಬ, ಊರ ಕೋಳಿ ಗಸಿ ಆಹಾ.. ಬಾಯೆಗ್ ನೀರ್ ಬತ್ತ್ ಕಾಣಿ.
ಊಟ ರೆಡಿ ಆದ್ ಮೇಲ್ ಹಲಸಿನ ಹಣ್ಣಿನ ಕಡ್ಬ, ಇಡ್ಲಿ, ಕೋಳಿ ಸಾರ್ ಸೇರಿಸಿ ಕೊಡಿ ಬಾಳೆ ಎಲೆಯ ಹಾಕಿ ʻಹಾಕ್ʼ ಬಚ್ಚಕ್ . ಅಂದ್ರೆ ಸತ್ತವರಿಗೆ ಎಡೆ ಇಡಕ್. ಬರು ಕಾರ್ ತಿಂಗಳವರೆಗೆ ಕುಟುಂಬಕ್ಕೇನೂ ಉಪದ್ರ ಕೊಡುಕ್ಕೀಲ್ಲ ಅಂತ ಕೇಳಿ ಕಂಡ ಇದನ್ನ ಇಡುದ್.
ಕಡಿಕ್ ಎಲ್ಲರೂ ಉಂಡಕಾ, ನಂಟರೆಲ್ಲ ಕೂತಕಾ ಕಷ್ಟ ಸುಖ ಮಾತಾಡಕಂಡ ಮನಿಕಂಬದ್ . ಇಲ್ಲಿಗೆ ಈ ವರ್ಷದ ಜಕ್ಣಿ ಮುಗಿತ್ತ ಕಾಣಿ..







