ಭಾವನಾ ರಾಮಣ್ಣನ ಐವಿಎಫ್ ಗರ್ಭಧಾರಣೆ: ಸಾಂಪ್ರದಾಯಿಕ ಮನಸ್ಥಿತಿಗೆ ಸವಾಲು

ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಭಾವನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ರಾಜ್ಯಾದ್ಯಂತ ಒಂದು ಸಂಚಲನವೇ ಸೃಷ್ಟಿಯಾಗಿದೆ.
Bhavana Ramanna’s IVF Journey: Expecting Twins as a Single Mother at 40!

ನಟಿ ಭಾವನಾ ರಾಮಣ್ಣ ಐವಿಎಫ್ (In vitro fertilization) ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಭಾವನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ರಾಜ್ಯಾದ್ಯಂತ ಒಂದು ಸಂಚಲನವೇ ಸೃಷ್ಟಿಯಾಗಿದೆ. ತಂದೆ ಇಲ್ಲದೇ ಮಗುನಾ ಎಂದು ಸಾಂಪ್ರದಾಯಿಕ ಮನಸ್ಥಿತಿಗಳು ಮೂಗಿನಮೇಲೆ ಬೆರಳಿಟ್ಟುಕೊಂಡರೆ, ಇನ್ನೂ ಕೆಲವರು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ನಾವಿರುವ ಸಮಾಜ ಇನ್ನೂ ಬಾಡಿಗೆ ತಾಯ್ತನ, ಐವಿಎಫ್ನಂತಹ ವಿಚಾರಗಳಿಗೆ ಮುಕ್ತವಾಗಿಲ್ಲ. ಮಹಿಳೆಯರ ಇಂತಹ ನಿರ್ಧಾರಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲು ನಮ್ಮ ಜನರಿಗೆ ಇನ್ನೂ ಸಮಯಬೇಕು. ಆದರೆ, ಭಾವನಾ ಅವರ ಈ ನಿರ್ಧಾರ ಮದುವೆಯಾಗುವ ಮನಸ್ಸಿಲ್ಲದೇ ಇದ್ದರು ತಾಯಿಯಾಗುವ ಕನಸಿರುವ ಹೆಣ್ಣುಮಕ್ಕಳ ಆಸೆಗೆ ರೆಕ್ಕೆ ಮೂಡಿಸಿದೆ ಅಲ್ಲದೇ ಕೃತಕ ಗರ್ಭಧಾರಣೆಯನ್ನು ಹೊಂದಲು ನಮ್ಮ ಕಾನೂನಿನಲ್ಲಿ ಈಗಾಗಲೇ ಅವಕಾಶವಿದೆ.

2021ರ ಬಯೋಎಥಿಕ್ಸ್ (ಜೈವಿಕ ನೀತಿಶಾಸ್ತ್ರ) ಕಾನೂನಿನ ಪ್ರಕಾರ ಕೃತಕ ಗರ್ಭಧಾರಣೆಯ ಪ್ರಯೋಜನ ಪಡೆಯ ಬಯಸುವವರು, ಪತಿಯಿಂದ ವೀರ್ಯ ಅಥವಾ ಅನಾಮಧೇಯ ದಾನಿಯಿಂದ ಹೆಪ್ಪುಗಟ್ಟಿದ ವೀರ್ಯವನ್ನು ಬಳಸಿಕೊಂಡು ಕೃತಕ ಗರ್ಭಧಾರಣೆಯನ್ನು ಮಾಡಬಹುದು. ಸಂಗಾತಿಗಳು ಅಥವಾ ಅವಿವಾಹಿತ ಮಹಿಳೆ ಕೃತಕ ಗರ್ಭಧಾರಣೆ ಅಥವಾ ಭ್ರೂಣ ವರ್ಗಾವಣೆಗೆ ಮುಂಚಿತವಾಗಿ ಒಪ್ಪಿಗೆ ನೀಡಬೇಕು. ಗರ್ಭಧಾರಣೆಯಿಂದ ಹಿಡಿದು ಮಗುವಿನ ಜನನದವರೆಗೆ ವೈದ್ಯರು, ಮನಶ್ಶಾಸ್ತ್ರಜ್ಞರು ಅಥವಾ ವೃತ್ತಿಪರರೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಆಗಿದ್ದಾಗೆ ಭೇಟಿ ಸಂದರ್ಶನಗಳನ್ನು ನಡೆಸಬೇಕು. ಕೃತಕ ಗರ್ಭಧಾರಣೆಯಿಂದ ಪ್ರಯೋಜನ ಪಡೆಯುವ ವ್ಯಕ್ತಿ ಸಂತಾನೋತ್ಪತ್ತಿ ವಯಸ್ಸಿನವರಾಗಿರಬೇಕು ಎನ್ನುತ್ತದೆ ಈ ಕಾನೂನು.

ಭಾವನಾ ಅವರು ಸಹಾ ತಾನೂ ಕಾನೂನು ರಿತ್ಯ ಈ ನಿರ್ಧಾರಮಾಡಿರುವುದಾಗಿ ಹೇಳಿಕೊಂಡಿದ್ದು, ʼನಾನು ಪುರುಷ ವಿರೋಧಿ ಅಲ್ಲ, ಮದುವೆ ವಿರೋಧಿಯೂ ಅಲ್ಲ. ನಾನು ಸದ್ಯ ಇರುವ ಪರಿಸ್ಥಿತಿಯಲ್ಲಿ ಇದು ನನಗೆ ಸೂಕ್ತ ಆಯ್ಕೆ ಎನ್ನಿಸಿ ನಾನು ಇದನ್ನು ಅಳವಡಿಸಿಕೊಂಡಿದ್ದೇನೆ. ಈ ಬಗ್ಗೆ ನನಗೆ ಅಹಂಕಾರವಾಗಲೀ ಕೀಳರಿಮೆಯಾಗಲೀ ಎರಡೂ ಇಲ್ಲ. ಈ ದೇಶದ ಕಾನೂನು ನನಗೆ ಕೊಟ್ಟಿರುವ ಹಕ್ಕನ್ನು ಬಳಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿಯೇ ನಾನು ತಾಯಿ ಆಗಲು ನಿರ್ಧಾರ ಮಾಡಿದ್ದೇನೆ, ಇದಕ್ಕೆ ನಮ್ಮ ಮನೆಯಲ್ಲಿ ಹಾಗೂ ನನ್ನ ಆಪ್ತರು, ಬಂಧುಗಳ ಒಪ್ಪಿಗೆ ಸಹ ಇದೆ. ಸಮಾಜ ಎಂಬುದು ಶುರುವಾಗುವುದೇ ಮನೆಯಿಂದ. ಹೀಗಾಗಿ ನನಗೆ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ತಾಯ್ತನ ಅನುಭವಿಸುವುದು ನನ್ನ ಹಕ್ಕು, ಆ ಬಗ್ಗೆ ಕಾನೂನಿನ ಮೂಲಕವೇ ಹೋಗುವುದು ನನ್ನ ಕರ್ತವ್ಯ ಎಂಬ ಅರಿವಿದೆ,ʼ ಎಂದು ಹೇಳಿದ್ದಾರೆ.

ಒಂದು ಕಾಲಮಾನದಲ್ಲಿ ಸಾಂಪ್ರದಾಯಿಕ ವಿವಾಹಗಳು ಕಡಿಮೆಯಾಗಿ ಪ್ರೇಮವಿವಾಹಗಳ ಸಂಖ್ಯೆ ಹೆಚ್ಚಿತ್ತು, ತದನಂತರ ʼಲಿವ್ ಇನ್ʼ ಹೆಸರಿನ ಸಂಬಂಧಗಳು ಹೆಚ್ಚಾಗಿ ಮದುವೆಗೂ ಮುನ್ನ ಇಬ್ಬರು ಒಬ್ಬರನ್ನೋಬ್ಬರು ಅರ್ಥಮಾಡಿಕೊಳ್ಳಲು ಈ ಸಂಬಂಧ ಸಹಕಾರಿ ಎಂದು ಯುವಜನತೆ ನಂಬಿತು ಮತ್ತು ಇಂತಹ ಸಂಬಂಧಗಳನ್ನು ಅನೇಕರು ಅನುಕರಣೆ ಸಹಮಾಡಿದರು. ಆದರೆ, ಇವುಗಳಿಗಿದ್ದ ಕಾನೂನು ತೊಡಕು, ಸಮಾಜದ ಜನರ ಭಿನ್ನಾಭಿಪ್ರಾಯಗಳು ಇಂತಹ ಸಂಬಂಧಗಳನ್ನು ಹೆಚ್ಚುಕಾಲ ಉಳಿಯಲು ಬಿಡುವುದಿಲ್ಲ ಎಂದು ಅರಿತ ಅನೇಕರು ಇಂತಹ ಸಂಬಂಧಗಳಿಂದ ದೂರ ಉಳಿದು, ಗಂಡಿನ ಸಹಾಯವಿಲ್ಲದೇ ತಾನು ಬದುಕುತ್ತೇನೆ ಎಂಬ ನಿರ್ಧಾರಗಳತ್ತ ಹೆಣ್ಣು ಮಕ್ಕಳನ್ನು ತಂದು ನಿಲ್ಲಿಸಿವೆ.

ಇನ್ನು ಮದುವೆಯಾಗಿಯೂ ಮಕ್ಕಳನ್ನು ಪಡೆಯುವಲ್ಲಿ ಸಮಸ್ಯೆ ಅನುಭವಿಸುತ್ತಿದ್ದ ಹೆಣ್ಣು ಮಕ್ಕಳು ಕುಟುಂಬದ ಒಪ್ಪಿಗೆ ಪಡೆದು ಕೃತಕ ಗರ್ಭಧಾರಣೆ ಅಥವಾ ಬಾಡಿಗೆ ತಾಯಿಯಮೂಲಕ ಮಗುವನ್ನು ಪಡೆಯುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಆಧುನಿಕ ಹೆಜ್ಜೆಗಳಿಗೆ ಸಮಾಜ ಮೂಗು ಮುರಿದುದ್ದುಂಟು ಆದರೆ, ಇಂದಿನ ದಿನಗಳಲ್ಲಿ ಯುವ ಜನತೆಯನ್ನು ಕಾಡುವ ಆರೋಗ್ಯ ಸಮಸ್ಯೆಗಳು ಐವಿಎಫ್, ಬಾಡಿಗೆ ತಾಯ್ತನಗಳನ್ನು ಸಾಮಾನ್ಯವಾಗಿಸಿವೆ.

ಆದರೆ, ಮದುವೆಯ ನಂತರದ ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ಈಗಿನ ಹೆಣ್ಣುಮಕ್ಕಳು, ಮದುವೆ ನಿರಾಕರಿಸು ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚೇಇದೆ. ಸ್ವಾವಲಂಭಿಯಾಗಿರಲು ಇಷ್ಟಪಡುತ್ತಿರುವ ಹೆಣ್ಣು ಮಕ್ಕಳು ಮದುವೆ, ಸಂಸಾರ, ಗಂಡ, ಗಂಡನಮನೆ, ಮಕ್ಕಳು ಎಂಬ ಜಂಜಾಟದಲ್ಲಿ ಬೀಳಲು ಇಷ್ಟಪಡುತ್ತಿಲ್ಲ.

ಆದರೆ, ಮುಂದೊಂದು ದಿನ ವೃದ್ಧಾಪ್ಯದಲ್ಲಿ ಮಕ್ಕಳ ಅವಶ್ಯಕತೆ ಇದೆ ಎಂದುಕೊಳ್ಳುವವರಿಗೆ ಐವಿಎಫ್ ಅಥವಾ ಕೃತಕ ಗರ್ಭಧಾರಣೆಯಂತಹ ಹೆಜ್ಜೆ ವರವಾಗಬಹುದು. ಸಮಾಜಕ್ಕೆ ತಂದೆ ಇಲ್ಲದೇ ಮಗು ಪಡೆಯುವಂತಹ ನಿರ್ಧಾರಗಳನ್ನು ತಕ್ಷಣಕ್ಕೆ ಅರಗಿಸಿಕೊಳ್ಳ ಸಾಧ್ಯವಿಲ್ಲದಿರಬಹುದು. ಆದರೆ, ಮುಂದಿನ ದಿನಮಾನಗಳಲ್ಲಿ ಜನರ ಮನಸ್ಥಿತಿಗಳು ಬದಲಾಗಲೂ ಬಹುದು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »