ಏಷ್ಯಾಕಪ್‌ ಫೈನಲ್‌ ಪಂದ್ಯ ಗೆದ್ದರೂ ಟ್ರೋಫಿ ಎತ್ತಿ ಹಿಡಿಯದ ಭಾರತ!

ಏಷ್ಯಾ ಕಪ್ 2025 ಫೈನಲ್ ಪಂದ್ಯದ ರೋಚಕ ಮುಕ್ತಾಯದ ನಂತರ, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಭಾರೀ ಹೈಡ್ರಾಮಾ ನಡೆದಿದೆ.
asia cup 2025 final

ಏಷ್ಯಾಕಪ್ 2025 ಫೈನಲ್ ಪಂದ್ಯದ ರೋಚಕ ಮುಕ್ತಾಯದ ನಂತರ, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವು ಭಾರೀ ಹೈಡ್ರಾಮಾದಲ್ಲಿ ಮುಗಿಯಿತು. ಸೆಪ್ಟೆಂಬರ್‌ 28ರಂದು ಭಾರತ ತಂಡವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದರೂ, ಅದನ್ನು ಸ್ವೀಕರಿಸಲು ನಿರಾಕರಿಸಿತು. 

ಕಾರಣ ಇಲ್ಲಿದೆ

ಏಷ್ಯಾ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯಸ್ಥ, ಪಾಕ್ ಇಂಟರ್ನಲ್ ಅಫೇರ್ಸ್ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದು ಭಾರತೀಯರಿಗೆ ಒಪ್ಪಲಿಲ್ಲ. ಈ ಘಟನೆಯು ಇಂಡೋ-ಪಾಕ್ ವಿವಾದ ಮತ್ತೊಮ್ಮೆ ಸಾಬೀತು ಪಡಿಸಿದೆ.

ಪಂದ್ಯ ಮುಗಿದ ನಂತರ, ವೇದಿಕೆಯ ಮೇಲೆ ನಖ್ವಿ ಅವರು ಇತರ ಗಣ್ಯರೊಂದಿಗೆ ನಿಂತು ಭಾರತೀಯರನ್ನು ಕಾಯುತ್ತಿದ್ದರು. ಆದರೆ ಭಾರತದ ನಾಯಕ ಸೂರ್ಯಕುಮಾರ ಯಾದವ್ ಮತ್ತು ಆಟಗಾರರು – ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯಾ ಸೇರಿದಂತೆ – ವೇದಿಕೆಯಿಂದ 15-20 ಅಡಿ ದೂರದಲ್ಲಿ ನಿಂತು ಪ್ರತಿರೋಧ ವ್ಯಕ್ತಪಡಿಸಿದರು. 

“ನಾವು ಅವರಿಂದ ಟ್ರೋಫಿ ತೆಗೆದುಕೊಳ್ಳುವುದಿಲ್ಲ” ಎಂಬ ಧೋರಣೆಯೊಂದಿಗೆ ಅವರು ನಿಂತಿದ್ದರು. ಇದರಿಂದ ವೇದಿಕೆಯಲ್ಲಿ ಅಸ್ವಸ್ಥತೆಯ ವಾತಾವರಣ ಸೃಷ್ಟಿಯಾಯಿತು. ಪಾಕಿಸ್ತಾನಿ ಆಟಗಾರರು ಕೂಡ ಡ್ರೆಸ್ಸಿಂಗ್ ರೂಮ್‌ನಿಂದ ಹೊರ ಬಂದಿರಲಿಲ್ಲ.

ಇದನ್ನೂ ಓದಿ | ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ

ಈ ಒಂದು ಗಂಟೆಯ ನಾಟಕೀಯ ಘಟನೆಯಲ್ಲಿ, ನಖ್ವಿ ಅವರು ಟ್ರೋಫಿಯನ್ನು ಹಿಡಿದುಕೊಂಡೇ ಮೈದಾನದಿಂದ ಹೊರನಡೆದರು. ಪ್ರಶಸ್ತಿ ವಿತರಣೆ ನಡೆಯುತ್ತದೆಯೇ ಇಲ್ಲವೇ ಎಂಬ ಅನಿಶ್ಚಿತತೆಯಲ್ಲಿ ಎಲ್ಲರೂ ಸಿಕ್ಕಿದರು. ಭಾರತೀಯ ಆಟಗಾರರು ಟ್ರೋಫಿಯನ್ನು ಸ್ಪರ್ಶಿಸದೇ ತಮ್ಮ ಡ್ರೆಸ್ಸಿಂಗ್ ರೂಮ್‌ಗೆ ಹಿಂದಿರುಗಿದರು.

ಆದರೆ ಉತ್ಸಾಹ ಕಳೆದುಕೊಳ್ಳದೇ, ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಫಿ ಇಮೋಜಿ ಸೇರಿಸಿ ‌ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು – ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ಅವರ ಪೋಸ್ಟ್‌ಗಳು ವೈರಲ್ ಆಯಿತು. “ನಾವು ಗೆದ್ದಿದ್ದೇವೆ, ಟ್ರೋಫಿ ಇಲ್ಲದಿದ್ದರೂ ಸಮಸ್ಯೆ ಇಲ್ಲ!” ಎಂದು ಅವರು ಹೇಳಿದರು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »