ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ: ಆಶ್ಲೇ ಟೆಲ್ಲಿಸ್ ಬಂಧನ!

ಭಾರತೀಯ ಮೂಲದ ಅಮೆರಿಕ ರಾಷ್ಟ್ರೀಯ ಭದ್ರತಾ ತಜ್ಞ ಆಶ್ಲೇ ಟೆಲ್ಲಿಸ್ (64) ಅವರನ್ನು ರಹಸ್ಯ ದಾಖಲೆಗಳ ಅನಧಿಕೃತ ಸಂಗ್ರಹ ಆರೋಪದ ಮೇಲೆ ಬಂಧಿಸಲಾಗಿದೆ.
ashley tellis arrest us
ಚಿತ್ರ ಕೃಪೆ : ವಿಶ್ವ ವಾಣಿ

ಭಾರತೀಯ ಮೂಲದ ಅಮೆರಿಕ ರಾಷ್ಟ್ರೀಯ ಭದ್ರತಾ ತಜ್ಞ ಆಶ್ಲೇ ಟೆಲ್ಲಿಸ್ (64) ಅವರನ್ನು ರಹಸ್ಯ ದಾಖಲೆಗಳ ಅನಧಿಕೃತ ಸಂಗ್ರಹ ಆರೋಪದ ಮೇಲೆ ಬಂಧಿಸಲಾಗಿದೆ. ಮುಂಬೈನಲ್ಲಿ ಜನಿಸಿದ ಟೆಲ್ಲಿಸ್, ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್‌ನಲ್ಲಿ ಹಿರಿಯ ಸಹಾಯಕರಾಗಿದ್ದರು. ಜಾರ್ಜ್ ಡಬ್ಲ್ಯೂ ಬುಷ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಸ್ಟೇಟ್ ಡಿಪಾರ್ಟ್‌ಮೆಂಟ್‌ನಲ್ಲಿ ಸಲಹೆಗಾರ ಮತ್ತು ಪೆಂಟಗಾನ್‌ನಲ್ಲಿ ಕಾಂಟ್ರಾಕ್ಟರ್ ಆಗಿದ್ದರು. ಅವರ ಬಳಿ ಟಾಪ್ ಸೀಕ್ರೆಟ್ ಸೆಕ್ಯುರಿಟಿ ಕ್ಲಿಯರೆನ್ಸ್ ಇತ್ತು.

ಅಕ್ಟೋಬರ್ 12ರಂದು ಟೆಲ್ಲಿಸ್‌ರನ್ನು ವರ್ಜೀನಿಯಾದ ವಿಯೆನ್ನಾದಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಯಿತು. ಅಕ್ಟೋಬರ್ 14ರಂದು ವರ್ಜೀನಿಯಾದ ಪೂರ್ವ ಜಿಲ್ಲಾ ಕೋರ್ಟ್‌ನಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಯಿತು. 18 ಯುಎಸ್‌ಸಿ § 793(ಇ) ಅಡಿ ರಾಷ್ಟ್ರೀಯ ರಕ್ಷಣಾ ಮಾಹಿತಿಯ ಅನಧಿಕೃತ ಸಂಗ್ರಹ ಆರೋಪ ಹೊರಿಸಲಾಗಿದೆ. 

ದೋಷಿ ಎಂದು ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ಮತ್ತು 2,50,000 ಡಾಲರ್ ದಂಡ ವಿಧಿಸಬಹುದು. ಎಫ್‌ಬಿಐ ಶೋಧದ ವೇಳೆ ಟೆಲ್ಲಿಸ್‌ರ ಮನೆಯಲ್ಲಿ 1,000ಕ್ಕೂ ಹೆಚ್ಚು ಪುಟಗಳ ಸೀಕ್ರೆಟ್ ದಾಖಲೆಗಳು ಪತ್ತೆಯಾಗಿವೆ. ಇವುಗಳಲ್ಲಿ ವಾಯುಪಡೆಯ ತಂತ್ರಗಳು ಮತ್ತು ಸೈನಿಕ ವಿಮಾನ ಸಾಮರ್ಥ್ಯಗಳ ಮಾಹಿತಿ ಒಳಗೊಂಡಿವೆ. ಈ ದಾಖಲೆಗಳು ಟ್ರ್ಯಾಶ್ ಬ್ಯಾಗ್‌ಗಳಲ್ಲಿ ಸಿಕ್ಕಿವೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ 2025ರಲ್ಲಿ ಟೆಲ್ಲಿಸ್, ಡಿಫೆನ್ಸ್ ಮತ್ತು ಸ್ಟೇಟ್ ಡಿಪಾರ್ಟ್‌ಮೆಂಟ್ ಕಟ್ಟಡಗಳಿಗೆ ಭೇಟಿ ನೀಡಿ, ರಹಸ್ಯ ದಾಖಲೆಗಳನ್ನು ಪ್ರಿಂಟ್ ಮಾಡಿ ಲೆದರ್ ಬ್ರೀಫ್‌ಕೇಸ್‌ನಲ್ಲಿ ಹೊರಗೆ ತೆಗೆದುಕೊಂಡಿದ್ದರು ಎಂದು ರಾಯಿಟರ್ಸ್‌ವರದಿ ಮಾಡಿದೆ.

ಇದನ್ನೂ ಓದಿ | “ಕೇಂದ್ರದಲ್ಲಿ ಡಿಸೆಂಬರ್ ಕ್ರಾಂತಿ, ನಿತಿನ್ ಗಡ್ಕರಿ ಪ್ರಧಾನಿ”: ಲಾಡ್‌

ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಎಂದು ಯುಎಸ್ ಅಟಾರ್ನಿ ಲಿಂಡ್ಸೆ ಹ್ಯಾಲಿಗನ್ ತಿಳಿಸಿದ್ದಾರೆ. ಟೆಲ್ಲಿಸ್ ಕಳೆದ ಕೆಲವು ವರ್ಷಗಳಲ್ಲಿ ಚೀನಾ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 15ರಂದು ಫೇರ್‌ಫ್ಯಾಕ್ಸ್‌ನ ರೆಸ್ಟೋರೆಂಟ್‌ನಲ್ಲಿ ಮನಿಲಾ ಎನ್‌ವಲಪ್ ತೆಗೆದುಕೊಂಡಿದ್ದರು. 2023ರ ಏಪ್ರಿಲ್ ನಲ್ಲಿ ಚೀನಾದ ಅಧಿಕಾರಿಗಳೊಂದಿಗೆ ಇರಾನ್-ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆ ಕುರಿತು ಚರ್ಚಿಸಿದ್ದರು. ಚೀನಾದಿಂದ “ರೆಡ್ ಗಿಫ್ಟ್ ಬ್ಯಾಗ್” ಪಡೆದಿದ್ದರು. ಆದರೆ, ಬೇಹುಗಾರಿಕೆ ಆರೋಪಗಳನ್ನು ಇನ್ನೂ ಸಲ್ಲಿಸಲಾಗಿಲ್ಲ. ಚೀನಾ ಸಂಬಂಧದ ತನಿಖೆ ಮುಂದುವರಿಯುತ್ತಿದೆ ಎಂದು ಇಂಡಿಯಾ ಟುಡೇವರದಿ ಮಾಡಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »