ಬಿಹಾರ ಚುನಾವಣೆ: ತೇಜಸ್ವಿ ಯಾದವ್‌ಗೆ ಸಿಗುವುದೇ ಸಿಎಂ ಪಟ್ಟ?

ಎರಡು ಬಾರಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ ತಮ್ಮ ಅಬಿವೃದ್ಧಿ ಕೆಲಸಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಇದೀಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.
Tejasvi Yadav
ಚಿತ್ರ ಕೃಪೆ : The hawk & Twocircles.net

ಎರಡು ಬಾರಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ ತಮ್ಮ ಅಬಿವೃದ್ಧಿ ಕೆಲಸಗಳಿಂದಲೇ ಹೆಸರುವಾಸಿಯಾಗಿದ್ದರು. ಇದೀಗ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್‌ ಮೈತ್ರಿಕೂಟದ ಯುವ ನಾಯಕರಾದ ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲು ಮುಂದಾಗಿದೆ. 

ತೇಜಸ್ವಿ ಯಾದವ್,  2015-2017ರಲ್ಲಿ ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾದಾಗ ರಸ್ತೆ ನಿರ್ಮಾಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆಗ ಗ್ರಾಮೀಣ ಭಾಗದ ಸಂಪರ್ಕವನ್ನು ಸುಧಾರಿಸಿದರು, ಇದು ರೈತರಿಗೆ ಮತ್ತು ಗ್ರಾಮಸ್ಥರಿಗೆ ಪ್ರಯೋಜನಕಾರಿಯಾಯಿತು. ನಂತರ, ಲಾಲೂ ಯಾದವ್ ಮತ್ತು ತೇಜಸ್ವಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು (ಇಂಡಿಯನ್ ರೈಲ್ವೇ ಹೋಟೆಲ್ ದುರ್ವ್ಯವಹಾರ) ಉದ್ಭವಿಸಿದವು, ಇದು 2017ರಲ್ಲಿ ಮಹಾಘಟಬಂಧನ್‌ ಒಡೆಯಲು ಕಾರಣವಾಯಿತು.

ಆದರೆ, ಮತ್ತೆ 2022-2024ರಲ್ಲಿ ಉಪಮುಖ್ಯಮಂತ್ರಿಯಾದ ಯಾದವ್‌, ಆರೋಗ್ಯ, ರಸ್ತೆ ನಿರ್ಮಾಣ ಮತ್ತು ನಗರ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಂಡು, 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸಿದರು ಮತ್ತು ಕೋವಿಡ್ ನಂತರ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಿದರು. ಈ ಕೆಲಸಗಳು ಯುವಕರಲ್ಲಿ ಭರವಸೆ ತುಂಬಿದವು. ಆದರೆ, 2024ರಲ್ಲಿ ನಿತೀಶ್ ಕುಮಾರ್ ಮತ್ತೆ NDAಗೆ ಸೇರಿದ್ದರಿಂದ ಈ ಕಾಲವೂ ಕೊನೆಗೊಂಡಿತು.

ತೇಜಸ್ವಿಯ ಕೆಲಸಗಳು ಯುವಕರಲ್ಲಿ ಭರವಸೆ ಮೂಡಿಸಿದ್ದವು, ಆದರೆ ರಾಜಕೀಯ ಅಸ್ಥಿರತೆ ಮತ್ತು ಆರೋಪಗಳು ಸವಾಲಾಗಿದ್ದವು. ಆದರೆ ಇದೀಗ ಸತತ 20ವರ್ಷಗಳಿಂದ ನಿತೀಶ್‌ ಕುಮಾರ್‌ರ ರಾಜಕೀಯ, ಆಡಳಿತ ವಿರೋಧಿ ಅಲೆಯಿಂದ ಕೂಡಿದ್ದು ಇದರಿಂದ ಬಿಹಾರದ ಜನ ಬೇಸತ್ತು, ಈಗ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತಿರುವುದರಿಂದ  ಐಎನ್‌ಡಿಐಎ ಒಕ್ಕೂಟ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಒಪ್ಪಿಕೊಂಡಿದೆ.

ಜೆಡಿಯು ನಾಯಕ ನಿತೀಶ್‌ ಕುಮಾರ್‌ ಈಗ ಆಡಳಿತಾರೂಢ ಎನ್‌ಡಿಐ ಮೈತ್ರಿಕೂಟದಿಂದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು, ಆದರೆ ಅವರ ಆಡಳಿತದಲ್ಲಿ ಬಿಹಾರದ ಸುಧಾರಣೆಯಾಗುತ್ತದೆ ಎಂದು ಬಿಹಾರದ ಜನತೆ ನಂಬಿದ್ದರು ಆದರೆ ಆ ನಂಬಿಕೆಯನ್ನು ಹುಸಿಗೊಳಿಸಿದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ನಿರುದ್ಯೋಗದ ಸಮಸ್ಯೆಯಿಂದ ಅತೀಹೆಚ್ಚು ಜನ ಕೆಲಸಕ್ಕಾಗಿ ವಲಸೆ ಹೋಗುವ ಕಾರ್ಮಿಕರು ಬಿಹಾರದಲ್ಲಿ ಹೆಚ್ಚಾಗಿರುವುದರಿಂದ ನಿರುದ್ಯೋಗದ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವ ನಂಬಿಕೆಯು ನಂಬಿಕೆಯಾಗೇ ಉಳಿದಿದೆ. ಬಿಹಾರ ಕೇವಲ ದೇಶಕ್ಕೆ ಕಾರ್ಮಿಕರನ್ನು ಒದಗಿಸುವ ಕಾರ್ಖಾನೆ ಎನ್ನುವಂತಾಗಿದೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನ್‌(INDIA ಬ್ಲಾಕ್)  ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ. ಈ ಬಾರಿ ಬಿಹಾರ ರಾಜಕೀಯವು ತುಂಬಾ ಕುತೂಹಲ ಮೂಡಿಸಿದೆ ಇದು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ವಿಶೇಷವಾಗಿ ಯುವಕರಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ.  

ತೇಜಸ್ವಿ ಯಾದವ್‌ರ ಘೋಷಣೆಯು ಬಿಹಾರದ ರಾಜಕೀಯದಲ್ಲಿ ಒಂದು ತಿರುವು ತಂದಿದೆ. ಇದು ಯುವಕರಿಗೆ, ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಹೊಸ ಆಯ್ಕೆಯನ್ನು ನೀಡಿದೆ. ಆದರೆ, ಈ ಆಯ್ಕೆಯು ಚುನಾವಣೆಯಲ್ಲಿ ಯಶಸ್ಸನ್ನು ಗಳಿಸಿ, ಜನರ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರಬೇಕಿದೆ. 

ನಿತೀಶ್‌ ಕುಮಾರ್‌ ಅಧಿಕಾರ ಅವಧಿ:

1990ರ ದಶಕದಲ್ಲಿ ಲಾಲೂ ಯಾದವ್ ಅವರ ಆಡಳಿತವನ್ನು “ಜಂಗಲ್ ರಾಜ್” ಎಂದು ಟೀಕಿಸಲಾಯಿತು. ಈ ಆರೋಪಗಳಿಂದಾಗಿಯೇ 2005ರಲ್ಲಿ ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದರು. ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಅವರು ಆಡಳಿತ ನಡೆಸಿದ್ದಾರೆ. ರಸ್ತೆಗಳು, ವಿದ್ಯುತ್ ಸೌಲಭ್ಯ ಮತ್ತು ಕೆಲವು ಮೂಲಸೌಕರ್ಯಗಳಲ್ಲಿ ಸುಧಾರಣೆ ಕಂಡುಬಂದಿದ್ದರೂ ಕೂಡ, ಬಿಹಾರದ ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ ಮತ್ತು ವಲಸೆ ಇನ್ನೂ ಕಡಿಮೆಯಾಗಿಲ್ಲ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ “ಅಭಿವೃದ್ಧಿ” ಭರವಸೆ ನೀಡುತ್ತಾರೆ. ಆದರೆ, ಗ್ರಾಮೀಣ ಬಿಹಾರದ ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆ ಏನೂ ಕಂಡುಬಂದಿಲ್ಲ. ಲಕ್ಷಾಂತರ ಯುವಕರು ಇನ್ನು ಉದ್ಯೋಗಕ್ಕಾಗಿ ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ.

ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಭರವಸೆಗಳು:

ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ, ಕೇಂದ್ರದ ಬಿಜೆಪಿ ಜೊತೆಗೆ “ಡಬಲ್ ಎಂಜಿನ್” ಆಡಳಿತದ ಮೂಲಕ ಬಿಹಾರದಲ್ಲಿ ದೊಡ್ಡ ಅಭಿವೃದ್ಧಿ ತರುವ ಭರವಸೆ ನೀಡಿತ್ತು. ರಸ್ತೆಗಳು, ಸೇತುವೆಗಳು ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆಯನ್ನು ಒತ್ತಿಹೇಳಿದ್ದಾರೆ. ಆದರೆ, ಇತ್ತೀಚಿನ ಕೆಲವು ಘಟನೆಗಳು ಈ ಭರವಸೆಗಳನ್ನು ಪ್ರಶ್ನಿಸುತ್ತಿವೆ. 2024ರಲ್ಲಿ ಬಿಹಾರದಲ್ಲಿ 10ಕ್ಕೂ ಹೆಚ್ಚು ಸೇತುವೆಗಳು ಕುಸಿದು, ಇದು ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಕಾರ್ಯ ಮತ್ತು ನಿರ್ವಹಣೆಯ ಕೊರತೆಯನ್ನು ಸಾಬೀತು ಪಡಿಸಿತು.

ತೇಜಸ್ವಿ ಯಾದವ್ ಅವರು “ನಿತೀಶ್ ಮತ್ತು ಮೋದಿ ಸರ್ಕಾರದ ಡಬಲ್ ಎಂಜಿನ್ ಒಂದು ಭ್ರಷ್ಟಾಚಾರಕ್ಕಾಗಿ ಮತ್ತೊಂದು ಅಪರಾಧಕ್ಕಾಗಿ ಕೆಲಸ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ. ಇಂತಹ ಘಟನೆಗಳು ಭಾಗಲ್‌ಪುರ್‌ನ ಅಗುವಾನಿ, ಸುಲ್ತಾಂಗಂಜ್ ಸೇತುವೆಯಂತಹ ದೊಡ್ಡ ಯೋಜನೆಗಳು ಸಹ ಕುಸಿಯುತ್ತಿರುವುದು ಜನರಲ್ಲಿ ಸರ್ಕಾರದ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ. ಇದು ಚುನಾವಣೆಯಲ್ಲಿ ಎನ್‌ಡಿಎಗೆ ದೊಡ್ಡ ಸವಾಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇಂತಹ  ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವಾಗಲೇ ಜನರಿಗೆ ಯುವನಾಯಕನಾಗಿ ತೇಜಸ್ವಿ ಯಾದವ್ ಅವರನ್ನು ಇಂಡಿ ಬ್ಲಾಕ್ ಮುಂಬರುವ ಬಿಹಾರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ತೇಜಸ್ವಿ ಯಾದವ್, ಲಾಲೂ ಯಾದವ್ ಅವರ ರಾಜಕೀಯ ವಾರಸುದಾರರಾಗಿ, ಯುವಕರಿಗೆ ಹೊಸ ಭರವಸೆಯನ್ನು ಹುಟ್ಟುಹಾಕಿದ್ದಾರೆ. “ಬಿಹಾರವನ್ನು ಒಗ್ಗೂಡಿಸಿ, ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದು ನಮ್ಮ ಗುರಿ,” ಎಂದು ತೇಜಸ್ವಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ. ಈ ಮಾತು ಯುವಕರಲ್ಲಿ, ಗ್ರಾಮೀಣ ಬಿಹಾರದ ಜನರಲ್ಲಿ, ಉತ್ಸಾಹವನ್ನು ತುಂಬಿದೆ.  

ಇದನ್ನೂ ಓದಿ | ಬಿಹಾರ ಚುನಾವಣೆ: ಇಂಡಿಯಾ ಮೈತ್ರಿಯಲ್ಲಿ ದೊಡ್ಡ ಬಿರುಕು!

 ಪ್ರಶಾಂತ್ ಕಿಶೋರ್‌ರ ಜನ್ ಸುರಾಜ್ ಪಕ್ಷದ ಉದಯ: ಇತರ ಪಕ್ಷಗಳ ಮೇಲಿನ ಪರಿಣಾಮ:

ಬಿಹಾರ ರಾಜಕೀಯದಲ್ಲಿ ಹೊಸ ಆಯ್ಕೆಯಾಗಿ ಪ್ರಶಾಂತ್ ಕಿಶೋರ್‌ರ ಜನ್ ಸುರಾಜ್ ಪಕ್ಷ (JSP) ಉದಯವಾಗಿದೆ, ಇದು ಎಲ್ಲಾ ಪಕ್ಷಗಳಿಗೆ ಸವಾಲು ತಂದಿದೆ. 2022ರಲ್ಲಿ ಆರಂಭವಾದ ಈ ಪಕ್ಷ, 2025ರ ಚುನಾವಣೆಯಲ್ಲಿ 243 ಸೀಟುಗಳಲ್ಲಿ ಸ್ಪರ್ಧಿಸುತ್ತಿದ್ದು, ಸರ್ವೇಗಳ ಪ್ರಕಾರ 8-10% ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಕಿಶೋರ್ ಅವರು ಜಾತಿ ರಾಜಕೀಯದ ಬದಲು ಉದ್ಯೋಗ, ಶಿಕ್ಷಣ ಮತ್ತು ಶುದ್ಧ ಆಡಳಿತದ ಮೇಲೆ ಒತ್ತು ನೀಡಿ, ಯುವಕರನ್ನು ಆಕರ್ಷಿಸುತ್ತಿದ್ದಾರೆ. ಇದು ಎಲ್ಲಾ ಪಕ್ಷಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ ಕೂಡ ಈ ಬಾರಿ ತೇಜಸ್ವಿ ಯಾದವ್‌ ಗೆಲುವು ಸಾಧಿಸುತ್ತಾರೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.

 

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »