ಸತಾರಾ ವೈದ್ಯೆಯ ಆತ್ಮಹತ್ಯೆ: ರಕ್ಷಕರೇ ಭಕ್ಷಕರಾದರೆ ಹೇಗೆ?

ಮಹಾರಾಷ್ಟ್ರದ ಸತಾರಾದಲ್ಲಿ ಒಂದು ಆಘಾತಕಾರಿ ಘಟನೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. 26 ವರ್ಷದ ಯುವ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಆದರೆ ಅವರ ಕೈ ಮೇಲಿನ ಸಂದೇಶವು ಸತ್ಯವನ್ನು ಬಿಚ್ಚಿಟ್ಟಿದೆ. 
satara doctor suicide
ಚಿತ್ರ ಕೃಪೆ : India Today

ಮಹಾರಾಷ್ಟ್ರದ ಸತಾರಾದಲ್ಲಿ ಒಂದು ಆಘಾತಕಾರಿ ಘಟನೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. 26 ವರ್ಷದ ಯುವ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಆದರೆ ಅವರ ಕೈ ಮೇಲಿನ ಸಂದೇಶವು ಸತ್ಯವನ್ನು ಬಿಚ್ಚಿಟ್ಟಿದೆ. 

ಅಕ್ಟೋಬರ್ 23ರ ರಾತ್ರಿ, ಸತಾರಾ ಜಿಲ್ಲೆಯ ಫಾಲ್ತಾನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ವೈದ್ಯೆಯೊಬ್ಬರು ಕೋಣೆಯಲ್ಲಿ ಶವವಾಗಿ ಕಂಡುಬಂದರು. ಬೀಡ್ ಜಿಲ್ಲೆಯಿಂದ ಬಂದ ಅವರು, ಫಾಲ್ತಾನ್‌ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಕೈಯ ಮೇಲೆ ಪೆನ್ನಿನಿಂದ ಬರೆದ ಸಂದೇಶ ಹೀಗಿತ್ತು: “ಗೋಪಾಲ್ ಬದಾನೆ ನನ್ನನ್ನು ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾರೆ. ಐದು ತಿಂಗಳಿಂದ ಮಾನಸಿಕ ಮತ್ತು ಶಾರೀರಿಕ ಕಿರುಕುಳ ನೀಡಿದ್ದಾರೆ” ಎಂದು. 

ಅವರ 4 ಪುಟಗಳ ಆತ್ಮಹತ್ಯಾ ಪತ್ರಿಕೆಯು ಇನ್ನಷ್ಟು ಕುತೂಹಲಕಾರಿ ಅಂಶಗಳನ್ನು ಬಯಲಿಗೆಳೆದಿದೆ. ರಾತ್ರಿಯ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಬಂದು, ಆರೋಪಿಗಳಿಗೆ ನಕಲಿ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವಂತೆ ಒತ್ತಡ ಹೇರಿದ್ದರು. ಒಬ್ಬ ಸಂಸದ ಮತ್ತು ಅವರ ಸಹಾಯಕರೂ ಈ ಒತ್ತಡದಲ್ಲಿ ಭಾಗಿಯಾಗಿದ್ದರು. ಒಪ್ಪದಿದ್ದಾಗ, ಗೋಪಾಲ್ ಬದಾನೆ ಮತ್ತು ಇತರರು ಕಿರುಕುಳವನ್ನು ತೀವ್ರಗೊಳಿಸಿದ್ದರು. ಇದರ ಜೊತೆಗೆ, ಪ್ರಶಾಂತ್ ಬಣಕರ್ ಕೂಡ ಮಾನಸಿಕ ಕಿರುಕುಳ ನೀಡಿದ್ದ ಎಂದು ಪತ್ರದಲ್ಲಿ ಬರೆದಿದ್ದಾರೆ. 

ವೈದ್ಯೆಯ ಕುಟುಂಬದವರು ತಿಳಿಸುವಂತೆ, ಅವರು ಎಸ್‌ಪಿ ಮತ್ತು ಡಿಎಸ್‌ಪಿಗಳಿಗೆ 2-3 ಬಾರಿ ದೂರು ಸಲ್ಲಿಸಿದ್ದರು. ಆದರೆ, “ನಂತರ ಕರೆ ಮಾಡುತ್ತೇವೆ” ಎಂದು ಡಿಎಸ್‌ಪಿಯವರು ನಿರಾಕರಿಸಿದ್ದರು. ಕ್ರಮದ ಕೊರತೆಯಿಂದ ಮನನೊಂದು, ಈ ಯುವ ವೈದ್ಯೆ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾರೆ.

ಈ ಘಟನೆಯ ನಂತರ, ಸತಾರಾ ಪೊಲೀಸರು ಗೋಪಾಲ್ ಬದಾನೆ ಮತ್ತು ಪ್ರಶಾಂತ್ ಬಣಕರ್ ವಿರುದ್ಧ ಅತ್ಯಾಚಾರ (ಐಪಿಸಿ 376) ಮತ್ತು ಆತ್ಮಹತ್ಯೆಗೆ ಒತ್ತಾಯ (ಐಪಿಸಿ 306) ಆರೋಪಗಳಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ವತಃ ಎಸ್‌ಪಿಯವರೊಂದಿಗೆ ಮಾತನಾಡಿ, ಆರೋಪಿ ಬದಾನೆಯವರನ್ನು ಅಮಾನತುಗೊಳಿಸಿದ್ದಾರೆ. ಆದರೆ, ಬದಾನೆ ಈಗ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಮಹಾರಾಷ್ಟ್ರ ಮಹಿಳಾ ಆಯೋಗವು ತನಿಖೆಗೆ ಆದೇಶಿಸಿದ್ದು, “ಹಿಂದಿನ ದೂರುಗಳಿಗೆ ಕ್ರಮ ಕೈಗೊಳ್ಳದಿರುವುದು ಯಾಕೆ?” ವೈದ್ಯೆಯ ಕುಟುಂಬದವರು, “ದೂರು ನೀಡಿದರೂ ಪೊಲೀಸರು ಕೇಸ್ ದಾಖಲಿಸಲಿಲ್ಲ” ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರು ಟೀಕಿಸಿ. “ರಕ್ಷಕರೇ ರಾಕ್ಷಸರಾದರೆ, ನ್ಯಾಯ ಎಲ್ಲಿಂದ ಸಿಗುತ್ತೆ?” ಸರ್ಕಾರವು ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯವೂ ಎದ್ದಿದೆ.

ಪೊಲೀಸರ ಮೇಲಿರುವ ಜನರ ವಿಶ್ವಾಸ ಕುಸಿತ!

ಈ ಘಟನೆಯು ಪೊಲೀಸ್ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಛಿದ್ರಗೊಳಿಸಿದೆ. ಪೊಲೀಸರ ಕರ್ತವ್ಯವೇ ಸಮಾಜವನ್ನು ರಕ್ಷಿಸುವುದು, ನ್ಯಾಯ ಒದಗಿಸುವುದು. ಆದರೆ, ಇಲ್ಲಿ ರಕ್ಷಕರೇ ದೌರ್ಜನ್ಯ ಎಸಗುವವರಾಗಿ, ದೂರುಗಳನ್ನು ಕಡೆಗಣಿಸಿ, ಕಿರುಕುಳಕ್ಕೆ ಒಳಪಡಿಸಿದ್ದಾರೆ. ಯಾಕೆ ಕೇಸ್ ದಾಖಲಿಸಲಿಲ್ಲ? ಉತ್ತರ ಸರಳ: ಅಧಿಕಾರದ ದುರುಪಯೋಗ, ರಾಜಕೀಯ ಒತ್ತಡ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ.

ಹಿಂದಿನ ದುರಂತಗಳ ನೆನಪು

ಈ ಘಟನೆಯು ಹಿಂದೆಯು ನಡೆದ ಕೆಲವು ಘಟನೆಗಳನ್ನು ನೆನಪಿಸುತ್ತದೆ ಅದರಲ್ಲಿ ಕೆಲವು ಘಟನೆಗಳು ನೋಡುವುದಾದರೆ ಕೊಲ್ಕತ್ತಾ ಆರ್‌ಜಿ ಕಾರ್ ಆಸ್ಪತ್ರೆ ಘಟನೆ ಮತ್ತು ತೆಲಂಗಾಣದಲ್ಲಿನ ವೆಟರಿನರಿ ವೈದ್ಯೆಯ ಅಮಾನವಿಯ ಘಟನೆ.

ಕೊಲ್ಕತ್ತಾ ಆರ್‌ಜಿ ಕಾರ್ ಆಸ್ಪತ್ರೆ ಘಟನೆ (2024): ಆಗಸ್ಟ್ 9, 2024ರಂದು, ಕೊಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ಪೋಸ್ಟ್‌ಗ್ರ್ಯಾಜುಯೇಟ್ ವೈದ್ಯೆಯೊಬ್ಬರು ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದರು. 36 ಗಂಟೆ ಶಿಫ್ಟ್‌ನ ನಂತರ ನಿದ್ರೆಯಲ್ಲಿದ್ದ ಅವರ ದೇಹ ಅರ್ಧ ನಗ್ನ ಸ್ಥಿತಿಯಲ್ಲಿ ಕಂಡುಬಂದಿತು. ಆರೋಪಿಯಾಗಿ ಸಂಜಯ್ ರಾಯ್ ಎಂಬ ಸಿವಿಲ್ ವಾಲಂಟಿಯರ್ ಗುರುತಿಸಲ್ಪಟ್ಟಿತು. ಕೊಲ್ಕತ್ತಾ ಪೊಲೀಸರ ತನಿಖೆಯು ತಡಮಾಡಿದರಿಂದ ಸಿಬಿಐಗೆ ವರ್ಗಾಯಿತು. ಜೂನಿಯರ್ ಡಾಕ್ಟರ್‌ಗಳು 42 ದಿನಗಳ ಕಾಲ ಪ್ರತಿಭಟನೆ ರಾಷ್ಟ್ರದ ಗಮನ ಸೆಳೆಯಿತು. 2025ರಲ್ಲಿ ರಾಯ್‌ಗೆ ಜೀವಾವಧಿ ಶಿಕ್ಷೆಯಾಯಿತು.

ಹೈದರಾಬಾದ್ ವೆಟರಿನರಿ ವೈದ್ಯೆ ಘಟನೆ (2019): ನವೆಂಬರ್ 27, 2019ರಂದು, 26 ವರ್ಷದ ವೆಟರಿನರಿ ವೈದ್ಯೆಯೊಬ್ಬರು ಶಾಮ್‌ಶಾಬಾದ್‌ನಲ್ಲಿ ಸ್ಕೂಟರ್‌ ಟೈರ್ ಬದಲಾಯಿಸುವಾಗ ಗ್ಯಾಂಗ್ ರೇಪ್‌ಗೊಳಗಾಗಿ ಕೊಲೆಯಾದರು. ನಾಲ್ಕು ಆರೋಪಿಗಳು ಅವರ ದೇಹವನ್ನು 27 ಕಿ.ಮೀ. ದೂರಕ್ಕೆ ತೆಗೆದುಕೊಂಡು ಸುಟ್ಟರು. ಸಿಸಿಟಿವಿ ಮತ್ತು ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಯಿತು. ಡಿಸೆಂಬರ್ 6ರಂದು, ಕ್ರೈಮ್ ಸೀನ್‌ಗೆ ತೆಗೆದುಕೊಂಡಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದರು. ಈ ಘಟನೆ ದೇಶವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು, ಆದರೆ ಎನ್‌ಕೌಂಟರ್‌ನ ಕಾನೂನುಬದ್ಧತೆ ಮೇಲೆ ಚರ್ಚೆ ಉಳಿದಿತು.  

ಈ ಘಟನೆಗಳು ಸತಾರಾ ಪ್ರಕರಣದೊಂದಿಗೆ ಒಂದೇ ದಾರಿಯನ್ನು ತೋರಿಸುತ್ತವೆ: ಕೆಲಸದ ಸ್ಥಳದಲ್ಲಿ ಸುರಕ್ಷತೆಯ ಕೊರತೆ

ಇದನ್ನೂ ಓದಿ | ಬೆಳಗಾವಿ ಅತ್ಯಾಚಾರ ಪ್ರಕರಣ: ಐವರ ಬಂಧನ, ಆರನೇ ಆರೋಪಿಗಾಗಿ ಶೋಧ

ಸತಾರಾ ಘಟನೆಯು ಭಾರತದಲ್ಲಿ ಮಹಿಳೆಯರ, ವಿಶೇಷವಾಗಿ ವೈದ್ಯರ ಸುರಕ್ಷತೆಯ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಎನ್‌ಸಿಆರ್‌ಬಿ ದತ್ತಾಂಶದಂತೆ, ಪ್ರತಿದಿನ 92 ಅತ್ಯಾಚಾರ ಕೇಸ್‌ಗಳು ದಾಖಲಾಗುತ್ತವೆ. ವೈದ್ಯರಲ್ಲಿ ಭಯ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಸಿಸಿಟಿವಿ, ರಾತ್ರಿ ಗಸ್ತು, ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳ ಅಗತ್ಯವಿದೆ. ಕೊಲ್ಕತ್ತಾ ಘಟನೆಯ ನಂತರ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚಿಸಿದೆ.

ಸರ್ಕಾರವು ತನಿಖೆಯನ್ನು ವೇಗಗೊಳಿಸಿ, ಆಸ್ಪತ್ರೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು. ವೈದ್ಯರಂತಹ ಸೇವಕರಿಗೆ ನ್ಯಾಯ ದೊರಕದಿದ್ದರೆ, ಸಮಾಜದ ಆರೋಗ್ಯವೇ ಅಪಾಯಕ್ಕೆ ಸಿಲುಕುತ್ತದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »