ಜಡೇಜಾ ಆರ್‌ಆರ್‌ಗೆ, ಸಂಜು ಸಿಎಸ್‌ಕೆಗೆ: ಐಪಿಎಲ್ ಟ್ರೇಡ್ ಫೈನಲ್!

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆಟಗಾರ ವಿನಿಮಯ ಡೀಲ್‌ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮೆಗಾ ಟ್ರೇಡ್ ಅಧಿಕೃತವಾಗಿ ಪೂರ್ಣಗೊಂಡಿದೆ.
ipl 2026 mega trade

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆಟಗಾರ ವಿನಿಮಯ ಡೀಲ್‌ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವಿನ ಮೆಗಾ ಟ್ರೇಡ್ ಅಧಿಕೃತವಾಗಿ ಪೂರ್ಣಗೊಂಡಿದೆ. 

ಈ ಡೀಲ್‌ ಪ್ರಕಾರ, ಸಿಎಸ್‌ಕೆಯ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ರಾಜಸ್ಥಾನ್ ರಾಯಲ್ಸ್‌ಗೆ ವರ್ಗಾವಣೆಯಾಗಿದ್ದಾರೆ. ಬದಲಾಗಿ ಆರ್‌ಆರ್‌ನ ನಾಯಕ ಮತ್ತು ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಐಪಿಎಲ್‌ 2026 ರಿಟೆನ್ಶನ್ ಡೆಡ್‌ಲೈನ್‌ಗೂ ಮುನ್ನ (ನವೆಂಬರ್ 15) ಈ ಟ್ರೇಡ್ ಅಧಿಕೃತವಾಗಿ ದೃಢಪಡಿಸಲಾಗಿದೆ.

ಈ ಟ್ರೇಡ್‌ನಲ್ಲಿ ಜಡೇಜಾ ಅವರನ್ನು 18 ಕೋಟಿ ರೂ.ಗಳಿಂದ 14 ಕೋಟಿ ರೂ.ಗಳಿಗೆ ಕಡಿಮೆ ಮಾಡಿ ಆರ್‌ಆರ್‌ಗೆ ಕಳುಹಿಸಲಾಗಿದೆ. ಸ್ಯಾಮ್ ಕರನ್ ಅವರನ್ನು 2.4 ಕೋಟಿ ರೂ.ಗಳಲ್ಲಿ ವರ್ಗಾಯಿಸಲಾಗಿದೆ. ಸಂಜು ಸ್ಯಾಮ್ಸನ್ 18 ಕೋಟಿ ರೂ.ಗಳಲ್ಲಿ ಸಿಎಸ್‌ಕೆಗೆ ಬಂದಿದ್ದಾರೆ. ಈ ಡೀಲ್ ಐಪಿಎಲ್‌ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿದ್ದು, ಎರಡೂ ತಂಡಗಳು ತಮ್ಮ ತಂಡ ಸಂಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿವೆ.

ತವರು ಮನೆಗೆ ಮರಳಿದ ಜಡೇಜಾಗೆ

ಐಪಿಎಲ್‌ನಲ್ಲಿ ಉದ್ಘಾಟನೆ 2008ರಲ್ಲಿ  ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್‌ ಪರವೇ ಜಡೇಜಾ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಈ ಸೀಸನ್‌ನಲ್ಲಿ ಆರ್‌ಆರ್ ಚಾಂಪಿಯನ್ ಆಗಿತ್ತು. 2009ರಲ್ಲೂ ಆರ್‌ಆರ್‌ ಪರವೇ ಆಡಿದ್ದ ಜಡ್ಡು, ನಂತರ ಕೊಚ್ಚಿ ಟಸ್ಕರ್ಸ್, 2012ರಿಂದ ಸಿಎಸ್‌ಕೆಗೆ ಸೇರಿ 12 ವರ್ಷಗಳ ಕಾಲ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದರು. 

ಸಿಎಸ್‌ಕೆ ಪರ 250ಕ್ಕೂ ಹೆಚ್ಚು ಪಂದ್ಯಗಳನ್ನ ಆಡಿ ಅದರಲ್ಲಿ 5 ಬಾರಿ ಚಾಂಪಿಯನ್‌ನ್ನಾಗಿ ಮಾಡಿದ್ದಾರೆ. ವಿಶೇಷವಾಗಿ 2023ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೊನೇಯ ಎರಡು ಎಸೆತಗಳಲ್ಲಿ ಸಿಕ್ಸ್ ಮತ್ತು ಬೌಂಡರಿ ಬಾರಿಸಿ ಸಿಎಸ್‌ಕೆಗೆ ಟ್ರೋಫಿ ತಂದುಕೊಟ್ಟಿದ್ದರು. ಎಂ.ಎಸ್. ಧೋನಿ ನಂತರ ಸಿಎಸ್‌ಕೆಯ ಮತ್ತೊಂದು ಮುಖ ಎನ್ನಿಸಿಕೊಂಡಿದ್ದ ಜಡೇಜಾ ಈಗ ಆರ್‌ಆರ್‌ಗೆ ಮರಳಿದ್ದು, ಅಲ್ಲಿ ನಾಯಕತ್ವದ ಜವಾಬ್ದಾರಿ ಕೂಡ ನಿರೀಕ್ಷಿಸಲಾಗಿದೆ.

ಟ್ರೇಡ್‌ನ ನಂತರ ಜಡೇಜಾ ಹೇಳಿಕೆ ನೀಡಿ, “ರಾಜಸ್ಥಾನ್ ರಾಯಲ್ಸ್ ನನಗೆ ಮೊದಲ ವೇದಿಕೆ ಮತ್ತು ಮೊದಲ ಗೆಲುವು ನೀಡಿತು. ಮತ್ತೆ ಮರಳುವುದು ವಿಶೇಷ. ಇದು ಕೇವಲ ತಂಡವಲ್ಲ, ಮನೆಯೇ. ಪ್ರಸಕ್ತ ತಂಡದೊಂದಿಗೆ ಇನ್ನಷ್ಟು ಟ್ರೋಫಿಗಳನ್ನು ಗೆಲ್ಲುವ ಆಸೆ ಇದೆ” ಎಂದಿದ್ದಾರೆ.

ಸಂಜು ಸ್ಯಾಮ್ಸನ್ ಅವರಿಗೆ ಇದು ಹೊಸ ಅಧ್ಯಾಯ. 2013ರಿಂದ ಆರ್‌ಆರ್‌ ಪರ 11 ವರ್ಷಗಳ ಕಾಲ ಆಡಿದ್ದ ಸಂಜು, 2021ರಿಂದ ನಾಯಕನಾಗಿ ತಂಡವನ್ನು 2022ರ ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ 2025ರ ಐಪಿಎಲ್ ನಂತರ ಬದಲಾವಣೆ ಬಯಸಿದ್ದ ಸಂಜು ಈಗ ಸಿಎಸ್‌ಕೆಗೆ ಬಂದಿದ್ದು, ಧೋನಿ ನಿವೃತ್ತಿಯ ನಂತರದ ದೀರ್ಘಕಾಲಿಕ ಯೋಜನೆಯಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಮತ್ತು ನಾಯಕತ್ವಕ್ಕೆ ಸಿದ್ಧನಾಗಲಿದ್ದಾರೆ. ಸಿಎಸ್‌ಕೆಗೆ ಟಾಪ್ ಆರ್ಡರ್‌ಗೆ ದೊಡ್ಡ ಬಲ ತಂದುಕೊಡಲಿದ್ದಾರೆ.

ಈ ಟ್ರೇಡ್‌ನಿಂದ ಸಿಎಸ್‌ಕೆ ತಂಡವನ್ನು ಯುವ ಆಟಗಾರರತ್ತ ತಿರುಗಿಸುತ್ತಿದ್ದು, ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಹೊಸ ಯುಗ ಶುರುವಾಗಲಿದೆ. ಆದರೆ ಸ್ಪಿನ್ ಬೌಲಿಂಗ್ ಮತ್ತು ಆಲ್‌ರೌಂಡ್ ಬ್ಯಾಲೆನ್ಸ್‌ನಲ್ಲಿ ಕೊರತೆ ಬರಬಹುದು. ಆರ್‌ಆರ್‌ಗೆ ಜಡೇಜಾ ಮತ್ತು ಕರನ್ ಸೇರ್ಪಡೆಯಿಂದ ಮಿಡಲ್ ಆರ್ಡರ್ ಮತ್ತು ಬೌಲಿಂಗ್ ಡೆಪ್ತ್ ಬಲಗೊಳ್ಳಲಿದೆ.

ಇದನ್ನೂ ಓದಿ | ಹರ್ಮನ್‌ಪ್ರೀತ್ ಕೌರ್: ಸಮಾಜದ ಟೀಕೆಗಳಿಗೆ ವಿಶ್ವಕಪ್‌ ಮೂಲಕ ಉತ್ತರ

ಈ ಟ್ರೇಡ್ ಐಪಿಎಲ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕೆಲವರು ಆರ್‌ಆರ್‌ಗೆ ಲಾಭದಾಯಕ ಡೀಲ್ ಎನ್ನುತ್ತಿದ್ದಾರೆ. ಜಡೇಜಾ ವಯಸ್ಸು 37ರ ಸನಿಹದಲ್ಲಿರುವುದು ಮತ್ತು ಸ್ಯಾಮ್ಸನ್ 31 ವರ್ಷದಲ್ಲಿರುವುದನ್ನು ಗಮನಿಸಿ ಕೆಲವರು ಸಿಎಸ್‌ಕೆ ದೀರ್ಘಾವಧಿಯಲ್ಲಿ ಲಾಭ ಪಡೆಯುತ್ತದೆ ಎನ್ನುತ್ತಾರೆ. ಆದರೆ ಜಡೇಜಾ ಅವರ ಅನುಭವ ಮತ್ತು ಮ್ಯಾಚ್-ವಿನ್ನಿಂಗ್ ಸಾಮರ್ಥ್ಯ ಆರ್‌ಆರ್‌ಗೆ ತಕ್ಷಣದ ಬಲ ನೀಡಲಿದೆ. 2026ರ ಐಪಿಎಲ್‌ಗೆ ಮಿನಿ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದ್ದು, ಎರಡೂ ತಂಡಗಳು ಈಗ ಹೊಸ ತಂತ್ರಗಳೊಂದಿಗೆ ಸಿದ್ಧತೆ ನಡೆಸುತ್ತಿವೆ. ಈ ಟ್ರೇಡ್ ಐಪಿಎಲ್‌ ಅಭಿಮಾನಿಗಳಲ್ಲಿ ದೊಡ್ಡ ಉತ್ಸಾಹ ಮೂಡಿಸಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »