ಭಾರತ ಸೇರಿ ಚೀನಾಕ್ಕೆ ಮೆಕ್ಸಿಕೋ ಶಾಕ್: ಆಮದು ಸುಂಕ 50% ಕ್ಕೆ ಏರಿಕೆ

ಜಾಗತಿಕ ವ್ಯಾಪಾರ ವಲಯದಲ್ಲಿ ರಕ್ಷಣಾತ್ಮಕ ನೀತಿಗಳು ಹೆಚ್ಚಾಗುತ್ತಿದ್ದು, ಅಮೆರಿಕದ ಬೆನ್ನಲ್ಲೇ ಇದೀಗ ಅದರ ನೆರೆಯ ರಾಷ್ಟ್ರ ಮೆಕ್ಸಿಕೋ ಕೂಡ ಅಂತಹದ್ದೆ ನಿರ್ಧಾರವನ್ನು ತೆಗೆದುಕೊಂಡಿದೆ.
mexico imposes tariff
ಸಾಂದರ್ಭಿಕ ಎಐ ಚಿತ್ರ

ಜಾಗತಿಕ ವ್ಯಾಪಾರ ವಲಯದಲ್ಲಿ ರಕ್ಷಣಾತ್ಮಕ ನೀತಿಗಳು ಹೆಚ್ಚಾಗುತ್ತಿದ್ದು, ಅಮೆರಿಕದ ಬೆನ್ನಲ್ಲೇ ಇದೀಗ ಅದರ ನೆರೆಯ ರಾಷ್ಟ್ರ ಮೆಕ್ಸಿಕೋ ಕೂಡ ಅಂತಹದ್ದೆ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ಪ್ರಮುಖ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಶೇಕಡಾ 50 ರಷ್ಟು ದುಬಾರಿ ಸುಂಕ ವಿಧಿಸಲು ಮೆಕ್ಸಿಕೋ ಸರ್ಕಾರ ನಿರ್ಧರಿಸಿದೆ. ಈ ನಡೆಯು 2026 ರಿಂದ ಜಾರಿಗೆ ಬರಲಿದ್ದು, ಭಾರತೀಯ ರಫ್ತುದಾರರಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.

ಮೆಕ್ಸಿಕೋ ಸೆನೆಟ್ (ಸಂಸತ್ತಿನ ಮೇಲ್ಮನೆ) ಬುಧವಾರ ಈ ಮಹತ್ವದ ತೀರ್ಮಾನವನ್ನು ಅಂಗೀಕರಿಸಿದೆ ಎಂದು ಅಲ್ಲಿನ ಮಾಧ್ಯಮವಾದ ‘ಎಲ್ ಯೂನಿವರ್ಸಲ್’ ವರದಿ ಮಾಡಿದೆ.

ಮೆಕ್ಸಿಕೋದ ಸಾಮಾನ್ಯ ಆಮದು ಮತ್ತು ರಫ್ತು ತೆರಿಗೆ ಕಾನೂನಿಗೆ (General Import and Export Tax Law) ತಿದ್ದುಪಡಿ ತರಲಾಗಿದ್ದು, 2026ರ ಜನವರಿ 1 ರಿಂದ ಇದು ಅನ್ವಯವಾಗಲಿದೆ. ಇದರ ಅನ್ವಯ, ಏಷ್ಯಾದ ರಾಷ್ಟ್ರಗಳಿಂದ ಬರುವ ನಿರ್ದಿಷ್ಟ ಸರಕುಗಳ ಮೇಲೆ ಕನಿಷ್ಠ ಶೇ. 5 ರಿಂದ ಗರಿಷ್ಠ ಶೇ. 50 ರವರೆಗೆ ಹೆಚ್ಚುವರಿ ಸುಂಕವನ್ನು ವಿಧಿಸಲಾಗುತ್ತದೆ.

ಯಾವ ವಸ್ತುಗಳಿಗೆ ದರ ಏರಿಕೆ?

ಈ ಹೊಸ ನೀತಿಯು ದೈನಂದಿನ ಬಳಕೆಯ ವಸ್ತುಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಪ್ರಮುಖವಾಗಿ: ಪಾದರಕ್ಷೆ, ಜವಳಿ ಮತ್ತು ಸಿದ್ಧ ಉಡುಪು, ಪೀಠೋಪಕರಣ, ಪ್ಲಾಸ್ಟಿಕ್ ವಸ್ತು, ಗಾಜು ಮತ್ತು ಸೆರಾಮಿಕ್ ಉತ್ಪನ್ನಗಳು ಇವುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ಮೆಕ್ಸಿಕೊ ಮುಂದಾಗಿದೆ.

ಮೆಕ್ಸಿಕೋ ಈ ನಿರ್ಧಾರ ತೆಗೆದುಕೊಂಡಿದ್ದೇಕೆ?

ದೇಶೀಯ ಉದ್ಯಮಗಳ ರಕ್ಷಣೆ: ಚೀನಾ ಮತ್ತು ಭಾರತದಂತಹ ದೇಶಗಳಿಂದ ಅಗ್ಗದ ಬೆಲೆಗೆ ವಸ್ತುಗಳು ಮೆಕ್ಸಿಕೋ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದರಿಂದ ಸ್ಥಳೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (SMEs) ಸ್ಪರ್ಧಿಸಲಾಗದೆ ನಷ್ಟ ಅನುಭವಿಸುತ್ತಿವೆ. ಸ್ಥಳೀಯ ಉದ್ಯಮಿಗಳನ್ನು “ಅನ್ಯಾಯದ ಸ್ಪರ್ಧೆ”ಯಿಂದ ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಅಮೆರಿಕದ ಒತ್ತಡ (USMCA): ಇದು ಕೇವಲ ಮೆಕ್ಸಿಕೋದ ನಿರ್ಧಾರವಲ್ಲ, ಇದರ ಹಿಂದೆ ಅಮೆರಿಕದ ಪ್ರಭಾವವೂ ಇದೆ ಎನ್ನಲಾಗುತ್ತಿದೆ. ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ (USMCA) ಅಡಿಯಲ್ಲಿ, ಚೀನಾ ಮತ್ತು ಇತರ ದೇಶಗಳು ಮೆಕ್ಸಿಕೋ ಮೂಲಕ ತಮ್ಮ ಸರಕುಗಳನ್ನು ಅಮೆರಿಕಕ್ಕೆ ಕಳುಹಿಸಿ ತೆರಿಗೆ ಉಳಿಸುತ್ತಿವೆ ಎಂಬ ಆರೋಪವಿತ್ತು. ಇದನ್ನು ತಡೆಯಲು ಅಮೆರಿಕವು ಮೆಕ್ಸಿಕೋದ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | ಹಾರ್ಲೆ-ಡೇವಿಡ್‌ಸನ್ ಬೈಕ್ ಮೇಲೆ 200% ಭಾರತದ ಸುಂಕ: ಟ್ರಂಪ್‌ ಆರೋಪ

ಭಾರತದ ಮೇಲಾಗುವ ಪರಿಣಾಮವೇನು?

ಭಾರತವು ಮೆಕ್ಸಿಕೋಗೆ ವಾಹನಗಳು, ಆಟೋಮೊಬೈಲ್ ಬಿಡಿಭಾಗಗಳು, ರಾಸಾಯನಿಕಗಳು, ಮತ್ತು ಜವಳಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಸುಮಾರು 10 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು. ಈಗ ಶೇ. 50 ರಷ್ಟು ಸುಂಕ ವಿಧಿಸಿದರೆ, ಮೆಕ್ಸಿಕೋ ಮಾರುಕಟ್ಟೆಯಲ್ಲಿ ಭಾರತೀಯ ವಸ್ತುಗಳ ಬೆಲೆ ದುಬಾರಿಯಾಗಲಿದ್ದು, ಬೇಡಿಕೆ ಕುಸಿಯುವ ಆತಂಕ ಎದುರಾಗಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »