ಕುಂದಗನ್ನಡದಲ್ಲಿ ಕಾರ್ಪೊರೇಟ್ ಜೀವನದ ರೋಚಕ ಕಥೆ

ಬೆಂಗ್ಳೂರೇಗೆ ಈ ಕಾರ್ಪೊರೇಟ್ ಆಫೀಸ್‌ನ ಏರ್ ಕಂಡಿಷನ್ ಕ್ವಾಣಿ ಒಳಗ್‌ ಕಾಲಿಡುವುದು ಸತ್ಯಕ್ಕೂ ಸಾಹಸದ ಕೆಲ್ಸ. ಅಲ್ಲಿನ ವಾತಾವರಣಕ್ಕ್‌ ಒಗ್ಗುವುದ್‌ ಮತ್ತೂ ಕಷ್ಟ ಎನ್ನುತ್ತಾರೆ ಪ್ರಗತಿ ಶೆಟ್ಟಿ, ಕೆರಾಡಿ.
Corporate Life 

ಕೆಲ್ಸಕ್ಕ ಅಂದ್‌ ಮೊದ್ಲ ಸತಿ ಊರ್‌ ಬದಿಯಿಂದ ಬೆಂಗ್ಳೂರಿಗ್‌ ಬಂದರಿಗ್‌ ಗೊತ್ತ್‌ ಇರತ್ತ್‌. ಈ  ಕಾರ್ಪೊರೇಟ್ ಜೀವ್ನ ಹೆಂಗ್‌ ಇರತ್ತ್‌ ಅಂದ್‌. ಮೊದ್ಲ ಮೊದ್ಲ ಹೊಸ ಲೋಕ ಕಂಡಂಗ್‌ ಆರೂ, ಕಡಿಕ್‌ ಹೋತಾ ಹೋತಾ ಉಸ್ರ ಕಟ್ಟುಕ್‌ ಶುರು ಆತ್ತ್‌.

ಊರ್‌ ಬದಿ ತಣ್ಣಗಿನ ಗಾಳಿ, ಹಸ್ರ್‌ ಗೆದ್ದಿ ಮತ್ತ್‌ ಆಚಿ-ಈಚಿ ಮನಿ ಹೆಂಗ್ಸ್ರ ಪಂಚೆತ್ಕಿ ಯಾವ್ದು ಇಪ್ದಿಲ್ಲ. ಇಲ್ಲ್‌ ಬರೀ ಎಲ್ಲ್‌ ಕಂಡ್ರೂ ದೊಡ್ಡ ದೊಡ್ಡ ಕಟ್ಟಡ,  ಟ್ರಾಫಿಕ್ ಜಾಮೇ ಅಷ್ಟೇ. ಇನ್ನ್‌ ಈ ಟ್ರಾಫಿಕ್‌ ವಿಷಯಕ್ಕ ಬಂದ್ರೆ ಊರ್‌ ಬದಿಯಿಂದ ಬಂದರಿಗೆ ಇದೊಂದ್‌ ದೊಡ್ಡ ಸವಾಲೇ ಸೈ. ನಮ್ಮ ಬದೆಗ್‌ ಒಂದ್‌ ಗಂಟಿ ಒಳ್ಗ  ಇಡೀ ಊರನ್ನ ಸುತ್ತಿ ಬರ್ಲಕ್‌, ಆರೇ  ಬೆಂಗಳೂರಿನಗೆ ಒಂದು ಕಿಲೋಮೀಟರ್ ಹೋಯ್‌ಕಾರು ಕಮ್ಮಿ ಅಂದ್ರೂ ಇಲ್ಲಿನ ಟ್ರಾಫಿಕ್‌ನಗೆ  ಒಂದ್‌ ಗಂಟಿ ಬೇಕ್‌. ಬೆಳಿಗ್ಗೆ 8ಗಂಟಿಗ್‌ ಆಫೀಸ್‌ ಆರೆ, 6ಗಂಟಿಗೆ ಎದ್ದ್‌ ಹೋರ್ಡಕ್‌. 

ಪಿಜಿ ಜೀವ್ನ:

ಕೆಲ್ಸಕ್‌ ಅಂದ್‌ ಊರ್‌ ಬಿಟ್ಟ್‌ ಬೆಂಗ್ಳುರಿಗ್‌ ಬಪ್ಪ್‌ ಅದ್ರಲ್ಲೂ ಹೆಣ್ಣ್ಗಳಿಗೆ  ಪಿಜಿಗೇನ್‌ ಬರಗಾಲ ಇಲ್ಲ. ಹಂಗ್‌ ಅಂದ ಗಂಡ ಮಕ್ಳಿಗ್‌ ಕಮ್ಮಿ ಅನಕಾ ಅಲ್ಲ. ನಮ್ಮ ಬದಿ ಗಂಡ ಮಕ್ಳ ಜಾಸ್ತಿ ಪಿಜಿ ಬದಿಗ್‌ ಹೊತ್ತಿಲ್ಲ. ಈ ಪಿಜೆಗ್‌ ಇನ್ನೂ ಗಮ್ಮತ್ತ್‌ ಇರತ್ತ್‌.  ಒಂದ್‌ ಕ್ವಾಣೆಗೆ ನಾಲ್ಕ್‌ ಜನ, ಒಂದ್‌ ಬಾತ್ರೂಮಿಗ್‌ 10ಜನ ಕಾಯುದ್ದ್‌ ಇತ್ತ್‌ ಅಲಾ ಯಾರೀಗು ಬ್ಯಾಡ ಕಾಣಿ. ಮನೆಗ್‌ ಮಾಡು ಮೀನ್‌ ಕಾಣಿ ಸಾರ್‌, ತ್ಯಾಳಿನ ದ್ವಾಸಿ ಇವೆಲ್ಲ ಇಲ್ಲ ಕನಸಿನ ಮಾತ್‌. ಯಾವತ್ತು ಇದೆಲ್ಲ ಇಲ್ಲ ಸಿಕ್ಕುದಿಲ್ಲ. ಸಿಕ್ರು ಊರ್‌ ಬದಿ ರುಚಿ ಸಿಕ್ಕುದಿಲ್ಲ.

ಇನ್ನ್‌ ಇವತ್ತ ಆದಿತ್ಯವಾರ ರಜಿ, ಯಾವ್ದಾರೂ ಮಾಲ್‌ ಬದಿಗ್‌ ಹ್ವಾಪಾ ಅಂದ್ರೂ, ಅಲ್‌ ಹೋಯಿ ಒಂದ್‌ ಚಾ, ಕಾಫಿಗೆ 300 ರೂಪಾಯಿ ಖರ್ಚು ಮಾಡುದಂದ್ರೆ ಬೇಜಾರ್‌ ಆತ್ತ್‌. ಈ ದುಡ್ಡಿಗೆ ಊರೇಗ್‌ ಗಮ್ಮತ್ತೆಗ್‌ ಗಡ್ಜ ಊಟುವೇ ಮಾಡ್ಲಕ್‌ ಅಂದ್‌ ಮನ್ಸಲ್ಲೇ ಅಂದ ಕಂಡ್ರೂ ಇದ್‌ ಕುಂದಾಪ್ರ ಬದಿಯಲ್ಲಾ “ಇದ್‌ ಬೆಂಗಳೂರ ಲೈಫ್” ಅಂದ್‌ ಕಂಡ  ಸಮಾಧಾನ ಮಾಡಕಣಕ್‌ ಅಷ್ಟೇ.

ಬೆಂಗ್ಳೂರೇಗೆ ಈ ಕಾರ್ಪೊರೇಟ್ ಆಫೀಸ್‌ನ ಏರ್ ಕಂಡಿಷನ್ ಕ್ವಾಣಿ ಒಳಗ್‌ ಕಾಲಿಡುವುದು ಸತ್ಯಕ್ಕೂ ಸಾಹಸದ ಕೆಲ್ಸ. ಅಲ್ಲಿನ ವಾತಾವರಣಕ್ಕ್‌ ಒಗ್ಗುವುದ್‌ ಮತ್ತೂ ಕಷ್ಟ. ಅದ್ರಲ್ಲಂತೂ ಭಾಷಿ ವಿಷಯಕ್ಕ ಬಂದ್ರೆ ಗಮ್ಮತ್ತ ಇರತ್ತ್‌. ಊರ್‌ ಬದೆಗ್‌ ಒಂದ್‌ ದಿನವೂ ಇಂಗ್ಲೀಷ್‌ ಅಲ್‌ ಮಾತ್ಡಾದೇ ಇಪ್ಪರ್‌ ಇಲ್ಲ್‌ ಬಂದ್‌ ಟುಸ್‌ ಪುಸ್‌ ಇಂಗ್ಲೀಷ್‌ ಮಾತಾಡ್ಕೇ. ಒಂದೊಂದ್‌ ಸತಿ, ಅವರ್‌ ಹೇಳದ್ದ್‌ ನಮ್ಗ್‌ ಅರ್ಥ ಆತಿಲ್ಲ. ನಾವ್‌ ಹೇಳ್ದ್‌ ಅವ್ರಿಗ್‌ ಅರ್ಥ ಆತಿಲ್ಲ. ಆದ್ರೂ ಕೆಲ್ಸ ಮಾಡ್ಕೇ . ಕಾರಣ ಇಷ್ಟೇ ಊರ್‌ ಬಿಟ್ಟ ಬಂದದ್ದೇ ಹೊಟ್ಟಿ ಹೊರ್‌ಕಂಬುಕ್‌ ಅಲ್ದಾ..

ಇದನ್ನೂ ಓದಿ | `ಕುಂದಾಪ್ರ’: ಕರಾವಳಿಯು ಚೆಂದದ ಸಂಸ್ಕೃತಿಯ ತವರೂರು

ಆಫೀಸ್‌ ಅಲ್‌ ಪ್ರಾಜೆಕ್ಟ್‌ ಡೆಡ್‌ಲೈನ್‌, ಟೀಂ ಮೀಟಿಂಗ್‌, ಕ್ಲೈಂಟ್ ಕಾಲ್‌ಗಳ ಎಲ್ಲಾ ಒಂದ್‌ ಬದಿಗ್‌ ಆರೇ, ಮನಿಯರ್‌  “ನೀನ್‌ ಏಗಳಿಕ್‌ ಮನಿಗ್‌ ಬತ್ತೆ ?” ಎಂದ  ಪೋನ್‌ ಮಾಡುದ್‌ ಇನ್ನೋಂದ್‌ ಬದೆಗ್‌. ಆದ್ರ, ಈ ಒತ್ತಡದ ಮಧ್ಯೆನೂ ಆಫೀಸ್‌ ಅಲ್‌ ಇಪ್ಪರ್‌ ಒಟ್ಟಿಗ್‌ ಇಪ್ಪು ಒಡನಾಟ , ಅದ್ರಲ್ಲೂ ಒಬ್ರ ಊರ್‌ ಬದಿಯರ್‌ ಇದ್ರೂ ನಮ್ಮನ್‌ ಹಿಡುಕ್‌ ಯಾರ್‌ ಹತ್ರನೂ ಆತಿಲ್ಲ. ಮನಿಯರ್‌ ಬಿಟ್ಟ ಬಂದರಿಗೆ ಈ ಒಡನಾಟವೇ ಒಂದು ಹೊಸ ಕುಟುಂಬದಂತೆ ಇದ್ದಂಗೆ.

ಒಟ್ಟಿಗೆ ಹೇಳುದ್ದ್‌ ಅಂದ್ರೆ ಊರಿಂದ ಬೆಂಗ್ಳೂರಿಗೆ ಬಂದರಿಗೆ ಈ ಜೀವನ ಒಂದ್‌ “ ರೋಲರ್ ಕೋಸ್ಟರ್ ರೈಡ್” ಇದ್ದಂಗೆ. ಒಂದು ಬದೆಗೆ ಟ್ರಾಫಿಕ್, ಇಮೇಲ್‌, ಡೆಡ್‌ಲೈನ್‌ಗಳ ಒತ್ತಡ ಇದ್ರೆ, ಇನ್ನೊಂದು ಬದೆಗೆ, ಹೊಸ ಪ್ರೇಂಡ್ಸ್‌, ಹೊಸ ಕಲಿಕೆ, ಮತ್ತೆ ಸ್ವಾವಲಂಬನೆಯ ಖುಷಿಯಿರತ್ತ್.ಮೊದ್ಲ್‌ ಮೊದ್ಲ್‌ “ನಂಗ್‌ ಇದಕ್ಕ್‌ ಈ ಜೀವನಕ್ಕ್‌ ಒಗ್ಗುಕ್‌ ಆತಿಲ್ಲ” ಅಂದಕಂಡ್ರು ಸ್ಪಲ್ಪ ಟೈಮ್‌ ಆಪ್ಪಕೂ ಎಲ್ಲಾ ಸಮ ಆತ್ತ್‌. 

ಲೇಖಕಿ- ಪ್ರಗತಿ ಶೆಟ್ಟಿ, ಕೆರಾಡಿ

 

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »