ಕನ್ನಡಕ್ಕೆ ಕನ್ನಡದ್ದೇ ‘ಕಚೇರಿ’! ಎಂ.ಎಸ್ ವರ್ಡ್ ಮಾದರಿಯ ಉಚಿತ ಕನ್ನಡ ತಂತ್ರಾಂಶ

ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ವರ್ಡ್‌ ತರಹದ ವರ್ಡ್ ಡಾಕ್ಯುಮೆಂಟ್ ಎಡಿಟರ್ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿದೆ.
Kannada software

ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ವರ್ಡ್ ನಮ್ಮೆಲರಿಗೂ ಪರಿಚಿತ. ಅದೇ ತರಹ ಕನ್ನಡದಲ್ಲಿ ಕೆಲಸಮಾಡಲು ಒಂದು ವರ್ಡ್ ಡಾಕ್ಯುಮೆಂಟ್ ಎಡಿಟರ್ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿದ್ದು ಸದ್ಯದಲ್ಲೇ ಕನ್ನಡಿಗರಿಗೆ ಬಳಕೆಗೆ ಲಭ್ಯವಾಗಲಿದೆ.

ಕನ್ನಡಗಣಕ ಪರಿಷತ್ತು ಮುಕ್ತ ತಂತ್ರಾಂಶವಾದ ಓಪನ್ ಆಫೀಸ್ ಆಧರಿಸಿ  ಅಭಿವೃದ್ಧಿ ಪಡಿಸಿದ್ದು, ಈ ತಂತ್ರಾಂಶದ ಹೆಸರು ‘ನುಡಿ ಬರವಣಿಗೆ 1.0’. ಈಕುರಿತು ‘ತಾಯ್ನಾಡು.ನ್ಯೂಸ್’ ನೊಂದಿಗೆ ಕನ್ನಡಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಅವರು ಮಾಹಿತಿ ಹಂಚಿಕೊಂಡರು.

“ಕನ್ನಡಗಣಕ ಪರಿಷತ್ತು ಈಗ ಕನ್ನಡ ಗಣಕ ಪ್ರತಿಷ್ಠಾನ ಎಂಬ ಟರ್ಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನುಡಿ ಬರವಣಿಗೆ ಮೊದಲ ಯೋಜನೆ ಯಾಗಿ ಹೊರಬರುತ್ತಿದೆ ಮತ್ತು ಮುಂದಿನದಿನದಲ್ಲಿ  ನುಡಿ ಬರವಣಿಗೆ, ನುಡಿ ಲೆಕ್ಕ , ನುಡಿ ಪ್ರಸ್ತುತಿ ಮತ್ತು ನುಡಿ ದತ್ತ ಎಂಬ ಹೆಸರಿನಲ್ಲಿ  ಅಭಿವೃದ್ಧಿ ಆಗುತ್ತಿದ್ದು “ನುಡಿ ಕಚೇರಿ” ಎಂಬ ಮಾತೃ ತಂತ್ರಾಂಶದ ಅಡಿ ಬಳಸಬಹುದು.

ಮೈಕ್ರೋಸಾಫ್ಟ್ ಆಫೀಸ್ ನಲ್ಲಿರುವಂತೆ ಈ ತಂತ್ರಾಂಶದಲ್ಲೂ ವರ್ಡ್, ಎಕ್ಸೆಲ್, ಪಿ ಪಿ ಟಿ ಮತ್ತು ಡೇಟಾಬೇಸ್ ಗಳು ನುಡಿಕಚೇರಿಯಲ್ಲಿ ಲಭ್ಯವಾಗಲಿವೆ. ಕೆಳಗೆ ಕೊಟ್ಟಿರುವ ಟೇಬಲ್ ನಲ್ಲಿ ಮೈಕ್ರೋಸಾಫ್ಟ್ ಆಫೀಸ್ ಮತ್ತು ನುಡಿ ತಂತ್ರಾಂಶಗಾಳ ಹೋಲಿಕೆ ನೀಡಲಾಗಿದೆ.

ಮೈಕ್ರೋಸಾಫ್ಟ್ ತಂತ್ರಾಂಶನುಡಿ ತಂತ್ರಾಂಶ
ಮೈಕ್ರೋಸಾಫ್ಟ್ ಆಫೀಸ್ನುಡಿ ಕಚೇರಿ
ಎಂ ಏಸ್ ವರ್ಡ್ನುಡಿ ಬರವಣಿಗೆ
ಎಂ ಏಸ್ ಎಕ್ಸ್ಏಲ್ನುಡಿ ಲೆಕ್ಕ
ಪವರ್ ಪಾಯಿಂಟ್ನುಡಿ ಪ್ರಸ್ತುತಿ
ಡೇಟಾಬೇಸ್ನುಡಿ ದತ್ತ
ಟೆಕ್ಸ್ಟ್  ಟು ಟೆಕ್ಸ್ಟ್ವಾಗ್ ಅಕ್ಷರ
ಆಫೀಸ್ ಆಂಡ್ರಾಯ್ಡ್ ಆ್ಯಪ್‌ನುಡಿ ಆಂಡ್ರಾಯ್ಡ್ ಆ್ಯಪ್‌

ಮುಂದುವೆರೆದು ಮಾತನಾಡುತ್ತ ಜಿ.ಎನ್. ನರಸಿಂಹಮೂರ್ತಿ ಅವರು, “ನುಡಿ ತಂತ್ರಾಂಶಗಳ ಡೆವಲಪ್ಮೆಂಟ್ ಆಗುತ್ತಾ ಇರುತ್ತೆ, ಹೊಸ ಹೊಸ ಫೀಚರ್ ಗಳನ್ನೂ ಸೇರಿಸಲಾಗುತ್ತದೆ, ನಿರಂತರ ಅಭಿವೃದ್ದಿಯಮೂಲಕ ಬಳಕೆದಾರರಿಗೂ ಒಂದು ಒಳ್ಳೆಯ ಅನುಭವ ದೊರೆಯುತ್ತದೆ. ಸಂಪೂರ್ಣ ಕನ್ನಡದಲ್ಲೇ ಲಭ್ಯವಿರುವ ಈ ತಂತ್ರಾಂಶದಮೂಲಕ  ಕಂಪ್ಯೂಟರ್ ನಲ್ಲಿ ಕನ್ನಡ ಬಳಸುವುದು ಸುಗಮವಾಗಲಿದೆ” ಎಂದು ತಿಳಿಸಿದ್ದಾರೆ.

ನುಡಿ ತಂತ್ರಾಂಶದ ವಿಶಿಷ್ಟತೆಗಳು

  • ಸಂಪೂರ್ಣ ಕನ್ನಡ ತಂತ್ರಾಂಶ
  • ನುಡಿ ಕೀಲಿಮಣಿಯ ಆಂತರಿಕ ಬೆಂಬಲ
  • ಪಿಡಿಎಫ್  ಎಕ್ಸ್ಪೋರ್ಟ್
  • ಮಾರ್ಕ್ಡೌನ್ ಎಕ್ಸ್ಪೋರ್ಟ್
  • ವಾಯ್ಸ್ ಟೈಪಿಂಗ್ (ವಾಗ್ ಅಕ್ಷರ)
  • ಆಫ್ ಲೈನ್ ಉಪಯೋಗ
  • ಮುಕ್ಕ ಅಥವಾ ಉಚಿತವಾಗಿ ಬಳಸಬಹುದು

“ಆಂಡ್ರಾಯ್ಡ್ ಗೆ ನುಡಿ ಎಡಿಟರ್ ತಂತ್ರಾಂಶ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಣಕಪರಿಷತ್ತು ತಯಾರಿ ನಡೆಸುತ್ತಿದೆ. ನುಡಿ ಆ್ಯಪ್‌ ತಯಾರಾದರೆ ನಾವು ಕನ್ನಡ ಡಾಕ್ಯುಮೆಂಟ್ ಎಡಿಟರ್ ಮತ್ತು ಕೀಬೋರ್ಡ್ ಗಳನ್ನೂ ಮೊಬೈಲ್ ನಲ್ಲಿ ಬಳಸಬಹುದು” ಎಂದು ಮೂರ್ತಿಯವರು ತಿಳಿಸಿದ್ದಾರೆ.

ಲೇಖಕ – ಅರುಣ್ ಸಿ ಕಲ್ಲಪ್ಪನವರ್

ಇದನ್ನೂ ಓದಿ | ಅಲರ್ ಪದಕೋಶ: ಕನ್ನಡ – ಇಂಗ್ಲಿಷ್ ನಿಘಂಟು

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »