ಗರ್ಭಿಣಿಯ ಬಗ್ಗೆ ಶಾಸಕನ ಅವಹೇಳನಕಾರಿ ಮಾತು: ಕ್ಷಮೆಗೆ ಆಗ್ರಹ  

ಗರ್ಭಿಣಿ ಮಹಿಳಾ ಅಧಿಕಾರಿಯ ವಿರುದ್ಧ ಅಸಭ್ಯವಾಗಿ ಮಾತನಾಡಿದ ಶಾಸಕ ಶಿವಗಂಗಾ ಬಸವರಾಜ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
channagiri mla controversy

ಗರ್ಭಿಣಿ ಮಹಿಳಾ ಅಧಿಕಾರಿಯ ವಿರುದ್ಧ ಅಸಭ್ಯವಾಗಿ ಮಾತನಾಡಿದ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆಕ್ರೋಶದ ಮಧ್ಯೆ ಪಕ್ಷದ ಹಿರಿಯ ನಾಯಕಿಯರು ಶಾಸಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಚನ್ನಗಿರಿಯಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಅರಣ್ಯ ವಲಯದ ಮಹಿಳಾ ಅಧಿಕಾರಿ ಶ್ವೇತಾ ಅವರು ಹಾಜರಾಗಿರಲಿಲ್ಲ. ಈ ವಿಷಯಕ್ಕೆ ಸಿಟ್ಟುಗೊಂದಾದ ಶಾಸಕರು, “ಮೀಟಿಂಗ್‌ಗೆ ಬನ್ನಿ ಎಂದರೆ ಪ್ರಗ್ನೆಂಟ್ ಎಂದು ಹೇಳುತ್ತಾರೆ. ಆದರೆ ಮಾಮೂಲು ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರಗ್ನೆಂಟ್ ಇರುವುದಿಲ್ಲವೇ?” ಎಂದು ಅವಹೇಳನಕಾರಿಯಾಗಿ ಮಾತನಾಡಿದರು. ಮುಂದುವರೆದು, “ಪ್ರತಿ ಬಾರಿ ಚೆಕಪ್‌ಗೆ ಹೋಗಿದ್ದೇನೆ, ಇಲ್ಲಿಯೇ ಇದ್ದೇನೆ ಎಂದು ಹೇಳುತ್ತಾರೆ. ಗರ್ಭಿಣಿಯಾಗಿದ್ದರೆ ರಜೆ ತಗೊಳ್ಳಲು ಹೇಳಿ. ನಾಚಿಕೆ ಆಗದಿಲ್ಲವೇ ಹೀಗೆಲ್ಲ ಹೇಳೋಕೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ  ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿ, ಮಹಿಳಾ ಹಕ್ಕುಗಳು ಮತ್ತು ಮಹಿಳೆಯರ ಘನತೆಗಳ ಕುರಿತು ಪ್ರಶ್ನೆಯನ್ನು ಮುಂದಿಟ್ಟಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಮಾಚಾರ.ಕಾಮ್‌ನೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಕವಿತಾ ರೆಡ್ಡಿ ಅವರು,  “ಗರ್ಭಿಣಿಯಾದ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ತಪ್ಪು. “ಅವರ ತಾಯಿ ಗರ್ಭಿಣಿ ಆಗಿರುವುದಕ್ಕೆ ಅಲ್ಲವೇ ಶಾಸಕರು ಹುಟ್ಟಿರುವುದು? ಬಸವಣ್ಣನವರ ಲಿಂಗಾಯತ ತತ್ವಗಳನ್ನು ಪಾಲಿಸುವ ಶಾಸಕರಿಗೆ ಮಾನವೀಯತೆ ಇಲ್ಲದಿದ್ದರೆ, ಅವರು ಯಾವ ರಾಜಕೀಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಾರೆ?” ಎಂದು ಕವಿತಾ ರೆಡ್ಡಿ ತೀಕ್ಷ್ಣವಾಗಿ ಖಂಡಿಸಿದ್ದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್‌ರ ಈ ಅವಹೇಳನಕಾರಿ  ಹೇಳಿಕೆಗೆ ಶಾಸಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಗ್ರೀನ್ ಕ್ರ್ಯಾಕರ್ ಅನುಮತಿ: ದೆಹಲಿ ದಿವಾಲಿ(ಳಿ) ಮಾಲಿನ್ಯದ ಕಾರ್ಮೋಡ

“ಮಹಿಳೆಯರಿಗೂ ಸಮಾನ ಅಧಿಕಾರ ಮತ್ತು ಘನತೆ ಇದೆ. ಮಹಿಳೆಯರ ಘನತೆಯನ್ನು ಮೀರಿ ಮಾತನಾಡಿದರೆ, ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ, ಅದು ಶಾಸಕರಾಗಿರಲಿ ಅಥವಾ ಮುಖ್ಯಮಂತ್ರಿಯೇ ಆಗಿರಲಿ. ಇನ್ನೂ, ಈ ಜೈವಿಕ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳದ ಶಾಸಕರು ಶಾಸಕರಾಗಿರಲು ಅನರ್ಹರು. ಸಂವಿಧಾನದ ಪ್ರತಿಜ್ಞೆಯಲ್ಲಿ ಎಲ್ಲರನ್ನೂ ಘನತೆಯಿಂದ ಕಾಣುವುದಾಗಿ ಶಪಥ ಮಾಡುತ್ತಾರೆ. ಅದರ ಹಾಗೆ ನಡೆದುಕೊಳ್ಳುವುದಿಲ್ಲ. ಇಂತಹ ಮನುವಾದಿ ಮತ್ತು ಪುರುಷಾಧಿಪತ್ಯದ ಮನೋಭಾವ ಎಲ್ಲ ಪಕ್ಷಗಳಲ್ಲೂ ಇದೆ; ಇದು ಮೊದಲು ಬದಲಾಗಬೇಕು” ಎಂದರು. ಬಸವಣ್ಣನವರಂತಹ ಮಹಾನ್ ವ್ಯಕ್ತಿಯ ತತ್ವಗಳನ್ನು ಅನುಸರಿಸುವವರು ಇಂತಹ ಮಾತುಗಳನ್ನು ಹೇಳುವುದು ಯೋಗ್ಯವಲ್ಲ ಎಂದು ಟೀಕಿಸಿ, “ಮಾನವೀಯತೆ ಇಲ್ಲದವರು ಜನರನ್ನು ಹೇಗೆ ಪ್ರತಿನಿಧಿಸುತ್ತಾರೆ? ಶಾಸಕರು ಕ್ಷಮೆ ಕೇಳಿ, ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲಿ” ಎಂದು ಕವಿತಾ ಹೇಳಿದರು.

ಈ ಘಟನೆಯಿಂದಾಗಿ ಮಹಿಳೆಯರ ಘನತೆಯ ಕುರಿತು ಚರ್ಚೆಗಳು ಜೋರಾಗಿವೆ. ಶಾಸಕರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಮಹಿಳಾ ಪರ ಹೋರಾಟಗಾರರು ಶಾಸಕರ ಕ್ಷಮೆಗೆ ಒತ್ತಾಯಿಸುತ್ತಿದ್ದಾರೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »