ವಿಧಾನಸೌಧದಲ್ಲಿ ಇಂದು (ಗುರುವಾರ) ನಡೆದ ಜಂಟಿ ಅಧಿವೇಶನವು ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ನೇರ ಸಂಘರ್ಷಕ್ಕೆ ಸಾಕ್ಷಿಯಾಯಿತು. ರಾಜ್ಯಪಾಲರು ಭಾಷಣದ ಕೆಲವೇ ಸಾಲುಗಳನ್ನು ಓದಿ, ಉಳಿದ ಭಾಗವನ್ನು ಓದಿದಂತೆ ಪರಿಗಣಿಸಬೇಕು ಎಂದು ಹೇಳಿ ಹೊರಡಲು ಅನುವಾದರು.
ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ:
ಘಟನೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರ ನಡೆಯನ್ನು ಕಟುವಾಗಿ ಟೀಕಿಸಿದರು. “ರಾಜ್ಯಪಾಲರು ತಮಗೆ ಬೇಕಾದ ಭಾಷಣ ಓದುವಂತಿಲ್ಲ. ಸಂಪುಟ ಅನುಮೋದಿಸಿದ ಭಾಷಣವನ್ನೇ ಓದುವುದು ಅವರ ಸಾಂವಿಧಾನಿಕ ಕರ್ತವ್ಯ. ನಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರ ನರೇಗಾ (MGNREGA) ಯೋಜನೆಗೆ ತಿದ್ದುಪಡಿ ತರುತ್ತಿರುವುದನ್ನು ಮತ್ತು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪಿಸಲಾಗಿತ್ತು. ಕೇಂದ್ರದ ವೈಫಲ್ಯವನ್ನು ಮುಚ್ಚಿಹಾಕಲು ರಾಜ್ಯಪಾಲರು ಭಾಷಣ ಓದದೆ ಸದನಕ್ಕೆ ಅಗೌರವ ತೋರಿದ್ದಾರೆ,” ಎಂದು ಹರಿಹಾಯ್ದು. ರಾಜ್ಯಪಾಲರ ವಿರುದ್ಧ ಸುಪ್ರಿಂಕೋರ್ಟ್‌ಗೆ ಹೊಗುವುದಾಗಿ ಸಿದ್ಧರಾಮಯ್ಯ ಹೇಳಿದ್ಧಾರೆ.
ಇದನ್ನೂ ಓದಿ | ತಮಿಳುನಾಡು ಬೆನ್ನಲ್ಲೇ ಕರ್ನಾಟಕದಲ್ಲೂ ‘ಗವರ್ನರ್’ ದಂಗಲ್: ಭಾಷಣಕ್ಕೆ ರಾಜ್ಯಪಾಲ ಗೆಹ್ಲೋಟ್ ನಕಾರ?
ಹರಿಪ್ರಸಾದ್ ಆಕ್ರೋಶ:
ರಾಜ್ಯಪಾಲರು ಪೀಠದಿಂದ ಇಳಿಯುತ್ತಿದ್ದಂತೆ, ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (B.K. Hariprasad) ಅವರು ರಾಜ್ಯಪಾಲರ ದಾರಿಗೆ ಅಡ್ಡಲಾಗಿ ನಿಂತು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸದಸ್ಯರು “ಶೇಮ್ ಶೇಮ್”, “ಬಿಜೆಪಿ ಏಜೆಂಟ್” ಎಂದು ಘೋಷಣೆಗಳನ್ನು ಕೂಗಿದರು.







