ಟೀಕೆಗಳನ್ನ ಮೀರಿ ವಿಶ್ವಕಪ್ ಗೆದ್ದ ಕರಾವಳಿ ಕುವರಿ

ಮುಂಬೈಯಲ್ಲಿ ಮನೆಯ ಬಾಲ್ಕನಿಯಲ್ಲಿ ಟೆನ್ನಿಸ್ ಬಾಲ್ ಎಸೆದು ಆಡುತ್ತಿದ್ದ ಆ ಚಿಕ್ಕ ಹುಡುಗಿ ಇಂದು ಭಾರತೀಯ ಮಹಿಳಾ ಕ್ರಿಕೆಟ್‌ನ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ  ರಾರಾಜಿಸುತ್ತಿರುವ ಮಂಗಳೂರಿನ ಕುವರಿ ಜೆಮಿಮಾ ಇವನ್ ರೊಡ್ರಿಗಸ್. 
Jamima Rodrigues
ಚಿತ್ರ ಕೃಪೆ: Ths news minute

2024ರಲ್ಲಿ ಕೇವಲ ಸಮಾಜದಲ್ಲಿರುವ ಧರ್ಮದ ಕಾರಣಕ್ಕಾಗಿ ಟೀಕೆಗೆ ಒಳಗಾಗಿ ಗಂಭೀರ ಡಿಪ್ರೆಶನ್‌ಗೆ ಜಾರಿದ್ದ ಕ್ರಿಕೆಟ್‌ ಆಟಗಾರ್ತಿ, ಕುಟುಂಬದವವರ ಬೆಂಬಲ, ವೈದ್ಯರ ಸಹಾಯದಿಂದ ಕೇವಲ ಆರು ತಿಂಗಳಲ್ಲಿ ಪೂರ್ಣವಾಗಿ ಚೇತರಿಸಿಕೊಂಡು, 2025ರಲ್ಲಿ ಕ್ರಿಕೆಟ್‌ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ಗೆ ಮರಳಿದ್ದಾರೆ. ಅಲ್ಲದೇ  ಈಗ ಅವರು BCCI-ನ “Mind Matters” ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯದ ಕುರಿತು ಯುವಜನರನ್ನುದ್ದೇಶಿಸಿ ಮಾತನಾಡುತ್ತಾರೆ.

Jamima Rodrigues


ಹಾಗಾದರೆ ಅವರ‍್ಯಾರು?

ಮುಂಬೈಯ ಬಾಂಡ್ರಾ ಬಾಲ್ಕನಿಯಲ್ಲಿ ಟೆನ್ನಿಸ್ ಬಾಲ್ ಎಸೆದು ಆಡುತ್ತಿದ್ದ ಆ ಚಿಕ್ಕ ಹುಡುಗಿ ಇಂದು ಭಾರತೀಯ ಮಹಿಳಾ ಕ್ರಿಕೆಟ್‌ನ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ  ರಾರಾಜಿಸುತ್ತಿರುವ ಮಂಗಳೂರಿನ ಕುವರಿ ಜೆಮಿಮಾ ಇವನ್ ರೊಡ್ರಿಗಸ್. 

ಕರಾವಳಿ ಕುವರಿಯ ಜನನ  

Jamima Rodrigues Family Photo

ಜೆಮಿಮಾ ಇವನ್ ರೊಡ್ರಿಗಸ್ 2000 ಸೆಪ್ಟೆಂಬರ್ 5ರಂದು ಮುಂಬೈಯ ಬಂಡೂಪ್ (Bhandup) ಪ್ರದೇಶದಲ್ಲಿ ಜನಿಸಿದರು.   ತಂದೆ ಇವನ್ ರೊಡ್ರಿಗಸ್ ಮತ್ತು ತಾಯಿ ಲವಿನಾ ಇಬ್ಬರೂ ಮಂಗಳೂರು ಮೂಲದವರಾಗಿದ್ದು, ಮಂಗಳೂರಿನ ಕಾಥೋಲಿಕ್  (Mangalorean Catholic) ಸಮುದಾಯಕ್ಕೆ ಸೇರಿರುತ್ತಾರೆ. ಮಂಗಳೂರಿನ ಸಂಪ್ರದಾಯಗಳು, ಆಹಾರ ಪದ್ಧತಿಗಳು ಇವರ ಮನೆಯಲ್ಲಿ ಸಾಮಾನ್ಯ. “ನಾನು ಮಂಗಳೂರಿನ ಕುವರಿ. ನನ್ನ ರಕ್ತದಲ್ಲಿ ಕರಾವಳಿ ಸಂಸ್ಕೃತಿ ಇದೆ.” ಎಂದು ಕೆಲವು ಸಂದರ್ಶನಗಳಲ್ಲಿ ಜೆಮಿಮಾ ಸ್ವತಃ ಹೇಳಿಕೊಂಡಿದ್ದಾರೆ. ಮುಂಬೈಯಲ್ಲಿ ಬೆಳೆದರೂ ಕೂಡ ಕರಾವಳಿಯ ಕಲೆಗಳು ಅವಳ ಆಟದಲ್ಲಿ, ನಗುವಿನಲ್ಲಿ, ಸಂಗೀತದಲ್ಲಿ (ಅವಳು ಗಾಯಕಿ ಕೂಡ!) ಕಂಡುಬರುತ್ತದೆ.

ತಂದೆ ಇವನ್, ಸ್ಥಳೀಯ ಕ್ಲಬ್ ಕ್ರಿಕೆಟರ್ ಮತ್ತು ಯುವ ತರಬೇತಿಗಾರರಾಗಿದ್ದರು; ತಾಯಿ ಲವಿನಾ ಗೃಹಿಣಿ. ಮೂರು ಸಹೋದರರೊಂದಿಗೆ ಬೆಳೆದ ಜೆಮಿಮಾ ನಾಲ್ಕು ವರ್ಷ ಇರುವಾಗಲೇ ತಂದೆಯಿಂದಾಗಿ ಕೈಯಲ್ಲಿ ಬ್ಯಾಟ್ ಹಿಡಿದರು. ತಂದೆಯೇ ಮೊದಲ ಕೋಚ್ ಆಗಿದ್ದ ಜೆಮಿಮಾ ಅವರಿಗೆ ಪ್ರತಿದಿನ ಸಂಜೆ ಖರ್ ಜಿಮ್ಖಾನಾ ಮೈದಾನಕ್ಕೆ ಕರೆದೊಯ್ಯುತ್ತಿದ್ದರು.  

Jamima Rodrigues with her Father

ಹನ್ನೆರಡು ವರ್ಷದಲ್ಲಿ ಮುಂಬೈ ಅಂಡರ್-19 ತಂಡಕ್ಕೆ ಆಯ್ಕೆಯಾದಳು. ಹದಿನಾಲ್ಕು ವರ್ಷದಲ್ಲಿ ಮುಂಬೈ ಸೀನಿಯರ್ ತಂಡದಲ್ಲಿ ಆಡತೊಡಗಿದಳು – ಮುಂಬೈ ಮಹಿಳಾ ಕ್ರಿಕೆಟ್‌ನ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದಳು. ರಿಜ್ವಿ ಸ್ಪ್ರಿಂಗ್‌ಫೀಲ್ಡ್ ಹೈ ಸ್ಕೂಲ್‌ನಲ್ಲಿ ಓದುತ್ತಲೇ ರಿಜ್ವಿ ಕಾಲೇಜ್‌ನಿಂದ ಬಿ.ಕಾಂ. ಪದವಿ ಪೂರೈಸಿದಳು.

ಕ್ರಿಕೆಟ್ ಜೀವನದ ಆರಂಭ ಮತ್ತು ಸವಾಲುಗಳು

2018ರಲ್ಲಿ ಹದಿನೇಳು ವರ್ಷದಲ್ಲೇ ಭಾರತಕ್ಕೆ ODI ಮತ್ತು T20I ಡೆಬ್ಯೂ ಮಾಡಿದಳು. ಮೊದಲ ವರ್ಷಗಳಲ್ಲಿ ಸ್ಥಿರ ಅವಕಾಶ ಸಿಗಲಿಲ್ಲ. 2022 ವಿಶ್ವಕಪ್ ತಂಡದಿಂದ ಹೊರಗುಳಿದಾಗ ಕಣ್ಣೀರಿಟ್ಟಳು. WBBLನಲ್ಲಿ ಮೆಲ್ಬರ್ನ್ ರೆನೆಗೆಡ್ಸ್‌ (Melbourne Renegades), ಮೆಲ್ಬರ್ನ್ ಸ್ಟಾರ್ಸ್‌( Melbourne Stars) , ನಾರ್ದರ್ನ್ ಸೂಪರ್‌ಚಾರ್ಜರ್ಸ್ (Northern Superchargers) ತಂಡಗಳಲ್ಲಿ ಆಡಿದಳು; WPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌. 2023 WPL ಫೈನಲ್‌ನಲ್ಲಿ MI ವಿರುದ್ಧ 21 ಬಾಲ್‌ಗಳಲ್ಲಿ 30 ರನ್ ಸಿಡಿಸಿದಳು.  

Jamima Rodrigues

2024ರಲ್ಲಿ ಮಾನಸಿಕ ಆರೋಗ್ಯದ ಹೋರಾಟ 

2024ರ ಅಕ್ಟೋಬರ್‌ನಲ್ಲಿ ತಂದೆ ಇವನ್ ರೊಡ್ರಿಗಸ್ ಅವರ ಕ್ರಿಕೆಟ್ ಕ್ಲಬ್ ಸದಸ್ಯತ್ವ(ಖಾರ್ ಜಿಮ್ಖಾನಾ) ರದ್ದಾಗಿದ್ದು ಮತ್ತು ಅವರ ವಿರುದ್ಧ ಧಾರ್ಮಿಕ ಪ್ರಚಾರದ ಆರೋಪಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ದ್ವೇಷದ ಟೀಕೆಗಳು ಉಂಟುಮಾಡಿತು. ಈ ಘಟನೆಯಿಂದಾಗಿ ಜೆಮಿಮಾ ಗಂಭೀರ ಡಿಪ್ರೆಶನ್‌ಗೆ ಒಳಗಾದರು. ಇದರಿಂದ ನೆಟ್ ತರಬೇತಿ ಸೆಷನ್‌ಗಳನ್ನು ತಪ್ಪಿಸಿದರು. ಆದರೆ ತಾಯಿ ಲವಿನಾ, ತಂದೆ ಇವನ್, ಸಹೋದರರು ಮತ್ತು BCCI-ನ ಬೆಂಬಲದಿಂದ 2024ರ ಕೊನೆಯಲ್ಲಿ ಪೂರ್ಣ ಚೇತರಿಸಿಕೊಂಡರು; 2025ರ ವಿಶ್ವಕಪ್‌ನಲ್ಲಿ 127* ರನ್‌ ಬಾರಿಸಿ ಸೆಮಿಫೈನಲ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದರು.

ಗೆಲುವು

Jamima Rodrigues

2022 ಏಷ್ಯಾ ಕಪ್ ಚಿನ್ನ, 2022 ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ, 2023 ಏಷ್ಯನ್ ಗೇಮ್ಸ್ ಚಿನ್ನ ಗಳಿಸಿದಳು. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವಿನಲ್ಲಿ 73 ರನ್ ಗಳಿಸಿದಳು.

ಜೆಮಿಮಾ , 2025ರಲ್ಲಿ ODI ಸರಾಸರಿ 42.3, T20I ಸರಾಸರಿ 35.7 ಸಾಧಿಸಿ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. BCCI ಮಾನಸಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಆಗಿ ಯುವ ಆಟಗಾರ್ತಿಯರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.

ಇದನ್ನೂ ಓದಿ | ಹರ್ಮನ್‌ಪ್ರೀತ್ ಕೌರ್: ಸಮಾಜದ ಟೀಕೆಗಳಿಗೆ ವಿಶ್ವಕಪ್‌ ಮೂಲಕ ಉತ್ತರ

 ಒಟ್ಟು ಅಂಕಿಅಂಶಗಳು 

  • ಒಡಿಐ – 68 ಪಂದ್ಯಗಳು, 2150 ರನ್, ಸರಾಸರಿ 35.2, 3 ಸೆಂಚುರಿ, 12 ಅರ್ಧಸೆಂಚುರಿ, ಅತ್ಯಧಿಕ 127*
  • ಟಿ20ಐ – 125 ಪಂದ್ಯಗಳು, 2650 ರನ್, ಸರಾಸರಿ 31.5, 1 ಸೆಂಚುರಿ, 16 ಅರ್ಧಸೆಂಚುರಿ
  • ಟೆಸ್ಟ್ – 3 ಪಂದ್ಯಗಳು, 240 ರನ್, 6 ವಿಕೆಟ್

ಜೆಮಿಮಾ ರೊಡ್ರಿಗಸ್ ಲಿಂಗ ತಾರತಮ್ಯ, ಸ್ಥಾನ ಕೊರತೆ, ಟೀಕೆಗಳು, ಡಿಪ್ರೆಶನ್ ಇವೆಲ್ಲವನ್ನು ದಾಟಿ ಬಲಿಷ್ಠಳಾಗಿ ಮತ್ತೆ ಮರಳಿದ್ದಾರೆ. ಕರಾವಳಿ ಕುವರಿಯಾಗಿ ವಿಶ್ವದರ್ಜೆಗೆ ಏರಿದ ಜೆಮಿಮಾ ಈಗ ಕೇವಲ ಬ್ಯಾಟರ್ ಅಲ್ಲ, ಕ್ರೀಡಾಭಿಮಾನಿಗಳ ನೆಚ್ಚಿನ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »