ಪೋಷಕರ ದಿನಾಚರಣೆ: ನಮ್ಮನ್ನು ಪೋಷಿಸಿದವರನ್ನು ನೆನೆಯಲು ಒಂದು ದಿನ

ಒಂದು ಮಗು ಭೂಮಿಗೆ ಬಂದ ದಿನದಿಂದ ಹಿಡಿದು, ಅದರ ಲಾಲನೆ-ಪಾಲನೆ ಮಾಡಿ, ಪೋಷಿಸಿ, ಅದನ್ನು ಒಂದು ಸ್ವತಂತ್ರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ.
Parents’ Day

ಒಂದು ಮಗು ಭೂಮಿಗೆ ಬಂದ ದಿನದಿಂದ ಹಿಡಿದು, ಅದರ ಲಾಲನೆ-ಪಾಲನೆ ಮಾಡಿ, ಪೋಷಿಸಿ, ಅದನ್ನು ಒಂದು ಸ್ವತಂತ್ರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ. ಪ್ರಾಣಿಗಳು ಮರಿಹಾಕಿದರೆ, ಅವು ಹುಟ್ಟಿದ ದಿನವೇ ಎದ್ದು ನಿಲ್ಲುತ್ತವೆ. ಆದರೆ, ಮನುಷ್ಯ ಹಾಗಲ್ಲ. ಒಂದು ಮಗು ತನ್ನ ಸ್ವಂತಿಕೆಯಿಂದ ನಿಲ್ಲಬೇಕಾದರೆ ಕನಿಷ್ಠ ಒಂದು ವರ್ಷ ಬೇಕು. ಅಲ್ಲಿಯವರೆಗೆ ಪೋಷಕರ ನೆರಳಲ್ಲಿ ಅದರ ವಿಕಾಸವಾಗುತ್ತದೆ.

ಪ್ರತಿ ವರ್ಷ ಜುಲೈನ ನಾಲ್ಕನೇ ಭಾನುವಾರ ರಾಷ್ಟ್ರೀಯ ಪೋಷಕರ ದಿನವನ್ನು ಆಚರಿಸಲಾಗುತ್ತದೆ. ಪೋಷಕರು ಒಂದು ಕುಟುಂಬದ ಅಡಿಪಾಯ. ತಮ್ಮ ಮಕ್ಕಳಿಗಾಗಿ ಅವರು ಮಾಡುವ ತ್ಯಾಗಗಳಿಗೆ ಸರಿಸಾಟಿಯಿಲ್ಲ. “ಮಗ ನಾಡಿಗೆ ರಾಜನಾದರೂ ತಾಯಿಗೆ ಮಗನೇ” ಎನ್ನುವಂತೆ, ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ, ಪೋಷಕರು ತಮ್ಮ ಮಕ್ಕಳ ಒಳಿತಿಗಾಗಿ ಹೋರಾಡುವುದನ್ನು ಬಿಡುವುದಿಲ್ಲ. ಇಂತಹ ಪೋಷಕರಿಗೆ ಗೌರವ ಸೂಚಿಸಲೆಂದೇ ಪೋಷಕರ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ

1994ರಲ್ಲಿ ಪೋಷಕರ ದಿನವನ್ನು ಮೊಟ್ಟಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಚರಿಸಲಾಯಿತು. ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಕಾಂಗ್ರೆಸ್‌ನ ರೆಸೊಲ್ಯೂಷನ್ ಕಾನೂನಿಗೆ ಸಹಿಹಾಕಿ ಈ ದಿನಾಚರಣೆಯನ್ನು ಅಸ್ತಿತ್ವಕ್ಕೆ ತಂದರು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಮಹತ್ವವನ್ನು ಸಾರುವುದು ಈ ನಿರ್ಣಯದ ಉದ್ದೇಶವಾಗಿತ್ತು. ಅಂದಿನಿಂದ ಪ್ರಪಂಚದ ಹಲವು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.

“ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನೇ” ಎಂದು ಹಾಡು ಕೇಳುವಾಗ, “ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೆ ಅಮ್ಮನನ್ನು ಸೃಷ್ಟಿಸಿದ” ಎಂಬ ಭಾವನೆ ಮನಸ್ಸಿನಲ್ಲಿ ಮೂಡದೇ ಇರದು. ಜೀವನದಲ್ಲಿ ಸಮಸ್ಯೆಗಳು ಎದುರಾದಾಗ, “ಏನೂ ಆಗಲ್ಲ, ಸರಿಹೋಗುತ್ತೆ ಬಿಡು” ಎಂಬ ಅಪ್ಪನ ಧೈರ್ಯತುಂಬುವ ಮಾತುಗಳು ಕಿವಿಗೆ ಬಿದ್ದಾಗ, ಸಮಸ್ಯೆ ಮಂಜಿನಂತೆ ಕರಗಿ ಸಣ್ಣದಾಗಿಬಿಡುತ್ತದೆ. ಇದು ಪೋಷಕರಿಗಿರುವ ಶಕ್ತಿ.

ಪೋಷಕರು ಮಕ್ಕಳ ಭವಿಷ್ಯದ ಬೆನ್ನೆಲುಬು. ಇಂದು ಪೋಷಕರು ಮಾಡುವ ಪೋಷಣೆ, ತೋರುವ ಕಾಳಜಿ, ಮತ್ತು ಪ್ರೀತಿಯು ಮಕ್ಕಳ ಭವಿಷ್ಯದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಅಲ್ಲದೆ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಪೋಷಕರಾದ ತಂದೆ-ತಾಯಿಯ ಪಾತ್ರ ತುಂಬಾ ಮಹತ್ವದ್ದಾಗಿದೆ. ಮಕ್ಕಳು ತುಳಿಯುವ ಹಾದಿಗೆ ಪೋಷಕರು ಎಂದಿಗೂ ಕಾವಲಾಗಿರುತ್ತಾರೆ. ಮಕ್ಕಳ ಜೀವನದ ಏಳು-ಬೀಳುಗಳಲ್ಲಿ ಅವರೊಟ್ಟಿಗೆ ನಿಂತು, ಅವರ ಏಳಿಗೆಗಾಗಿ ಶ್ರಮಿಸುತ್ತಾರೆ. ತಂದೆ-ತಾಯಿ ತಮ್ಮ ಬೆನ್ನಿಗೆ ಇದ್ದಾರೆ ಎಂಬ ಧೈರ್ಯವೇ ಅದೆಷ್ಟೋ ಸವಾಲುಗಳ ವಿರುದ್ಧ ನಮ್ಮನ್ನು ಅರ್ಧ ಗೆಲ್ಲಿಸಿಬಿಡುತ್ತದೆ. ಪೋಷಕರ ಪ್ರೀತಿ, ಮಮಕಾರ, ಕಾಳಜಿ, ತ್ಯಾಗ, ಮತ್ತು ಬಂಧನವನ್ನು ಅರ್ಥಪೂರ್ಣವಾಗಿ ನೆನೆಯಲು ಈ ದಿನ ವಿಶೇಷವಾಗಿದೆ.

ತಂದೆ-ತಾಯಿಯರು ಮಕ್ಕಳನ್ನು ಬೆಳೆಸಲು ಕಷ್ಟಪಡುತ್ತಾರೆ, ಅವರನ್ನು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ರೂಪಿಸುವ ಕನಸು ಕಾಣುತ್ತಾರೆ. ತಮ್ಮ ಇಷ್ಟ-ಕಷ್ಟಗಳನ್ನು ಬದಿಗೊತ್ತಿ, ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ. ಆದರೆ, ಆಧುನಿಕತೆಯ ಹೊಸ್ತಿಲಲ್ಲಿರುವ ನಮಗೆ, ಬದಲಾಗುತ್ತಿರುವ ಕಾಲಮಾನದಲ್ಲಿ ಪೋಷಕರು ಕೆಲವೊಮ್ಮೆ ಮಕ್ಕಳಿಗೆ ಭಾರವಾಗುತ್ತಿದ್ದಾರೆ.

ಆಧುನಿಕತೆಯ ಹೆಸರಿನಲ್ಲಿ, ತಮ್ಮನ್ನು ಪಾಲನೆ-ಪೋಷಣೆ ಮಾಡಿದ ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಎಲ್ಲರ ಬಳಿಯೂ ಕಾರಣಗಳಿವೆ: ವಯಸ್ಸಾದ ತಂದೆ-ತಾಯಿಯರನ್ನು ನೋಡಿಕೊಳ್ಳಲು ಸಮಯವಿಲ್ಲದಿರುವುದು, ವಿಭಕ್ತ ಕುಟುಂಬಗಳಿಂದಾಗಿ ಅವರೊಟ್ಟಿಗೆ ಇರಲು ಜನರಿಲ್ಲದಿರುವುದು, ಕಾಡುವ ಸಂಕುಚಿತ ಮನೋಭಾವ, ಅಥವಾ ಮಕ್ಕಳಿಗೆ ತಾವು ಭಾರ ಎಂದು ಭಾವಿಸುವ ಪೋಷಕರೇ ಇದಕ್ಕೆ ಕಾರಣವಾಗಿದ್ದಾರೆ.

ಇಂತಹ ಕಾರಣಗಳನ್ನು ಮುಂದಿಟ್ಟು, ಮಕ್ಕಳು ತಂದೆ-ತಾಯಿಯನ್ನು ದೂರಮಾಡುತ್ತಿದ್ದಾರೆ. ಇನ್ನೂ ಕೆಲವು ಪೋಷಕರು, “ವಯಸ್ಸಾಯಿತು, ನಾವು ಮಕ್ಕಳಿಗೆ ಭಾರ” ಎಂದು ಭಾವಿಸಿ, ತಾವೇ ಮನೆಯನ್ನು ತೊರೆಯುತ್ತಿದ್ದಾರೆ.

ಇಂತಹ ದಿನಾಚರಣೆಗಳು ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿಯನ್ನು ಮೂಡಿಸಲೆಂದೇ ಇವೆ. ಮಕ್ಕಳ ಜೀವನದಲ್ಲಿ ಪೋಷಕರ ಪಾತ್ರದ ಮಹತ್ವವನ್ನು ಮತ್ತು ಪೋಷಕರ ವೃದ್ಧಾಪ್ಯದಲ್ಲಿ ಮಕ್ಕಳ ಪಾತ್ರದ ಮೌಲ್ಯವನ್ನು ಅರಿಯಲು ಈ ದಿನ ಸೂಕ್ತವಾಗಿದೆ. ನಮ್ಮ ಪೋಷಕರನ್ನು ಗೌರವಿಸಿ, ಮಕ್ಕಳಿಗಾಗಿ ಸರ್ವಸ್ವವನ್ನೂ ಧಾರೆ ಎರೆದಿರುವ ಅವರನ್ನು ಕಡೆಗಣಿಸಬೇಡಿ. ಅವರು ಅಸಹಾಯಕರಾದಾಗ ಅವರಿಗೆ ಹೆಗಲು ನೀಡಿ. ವಯಸ್ಸಾದ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ.

“ಅವರು ನಮಗೇನು ಮಾಡಿದ್ದಾರೆ?” ಎಂಬ ಮನೋಭಾವವನ್ನು ಬಿಟ್ಟು, “ಅವರು ನಮಗೆ ಜೀವ ನೀಡಿದ್ದಾರೆ” ಎಂಬ ಒಂದು ಕಾರಣವೇ ಸಾಕು, ಅವರನ್ನು ಚೆನ್ನಾಗಿ ನೋಡಿಕೊಳ್ಳಲು, ಅಲ್ಲವೇ?

ಇದನ್ನೂ ಓದಿ | ವಿಶ್ವ ಚೆಸ್ ದಿನ: ಭಾರತದ ಚದುರಂಗ ಚಾಂಪಿಯನ್‌ಗಳ ಆಚರಣೆ

ಪೋಷಕರ ದಿನವನ್ನು ಹೀಗೆ ಆಚರಿಸಿ:

  • ಕಾರ್ಯಕ್ರಮಗಳಲ್ಲಿ ಭಾಗವಹಿಸಿ: ಸಂಘ-ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ.
  • ಸಮಯ ಕಳೆಯಿರಿ: ನಿಮ್ಮ ಪೋಷಕರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ.
  • ಪೋಷಕರನ್ನು ಭೇಟಿಯಾಗಿ: ನಿಮ್ಮ ಪೋಷಕರು ವೃದ್ಧಾಶ್ರಮದಲ್ಲಿರಲಿ ಅಥವಾ ಬೇರೆ ಊರಿನಲ್ಲಿರಲಿ, ಈ ದಿನ ವಿಶೇಷವಾಗಿ ಅವರನ್ನು ಭೇಟಿಯಾಗಿ.
  • ಉಡುಗೊರೆ ನೀಡಿ: ನಿಮ್ಮ ತಂದೆ-ತಾಯಿಗೆ ಅಥವಾ ಪೋಷಕರಿಗೆ ಈ ದಿನ ಏನಾದರೂ ಉಡುಗೊರೆ ನೀಡಿ.
  • ಸರ್ಪ್ರೈಸ್ ಮಾಡಿ: ಅವರ ಬಹುದಿನದ ಬೇಡಿಕೆಯೊಂದನ್ನು ಈಡೇರಿಸಿ, ಪೋಷಕರನ್ನು ಸಂತೋಷಗೊಳಿಸಿ.
  • ವನವಿಹಾರ: ಅವರೊಟ್ಟಿಗೆ ಪಿಕ್ನಿಕ್‌ಗೆ ಹೋಗಿ, ಒಂದು ಉತ್ತಮ ಸ್ಥಳದಲ್ಲಿ ಸಮಯ ಕಳೆಯಿರಿ.
  • ಊಟಕ್ಕೆ ಕರೆದೊಯ್ಯಿರಿ: ಹೊರಗೆ ಕರೆದುಕೊಂಡು ಹೋಗಿ, ಅವರಿಷ್ಟದ ಊಟವನ್ನು ಮಾಡಿಸಿ.
  • ಔತಣಕೂಟ ಆಯೋಜಿಸಿ: ನಿಮ್ಮ ಪೋಷಕರ ಆತ್ಮೀಯರು ಅಥವಾ ಸ್ನೇಹಿತರನ್ನು ಒಟ್ಟುಗೂಡಿಸಿ, ಮನೆಯಲ್ಲಿ ಔತಣಕೂಟ ಆಯೋಜಿಸಿ.
  • ಸಂತೋಷವನ್ನು ಹಂಚಿಕೊಳ್ಳಿ: ಸಾಮಾಜಿಕ ಮಾಧ್ಯಮಗಳಲ್ಲಿ ಈ ದಿನದ ಬಗ್ಗೆ ಹಂಚಿಕೊಳ್ಳಿ.
  • ಸ್ನೇಹಿತರೊಂದಿಗೆ ಮಾತನಾಡಿ: ನಿಮ್ಮ ಸ್ನೇಹಿತರಿಗೆ ಈ ದಿನದ ವಿಶೇಷತೆಯ ಬಗ್ಗೆ ತಿಳಿಸಿ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »